ಗಂಡ ಮತ್ತು ಸಂಬಂಧಿಕರಿಂದಲೇ ಹೋಯ್ತು ಇಷ್ಟು ಮಹಿಳೆಯರ ಜೀವ; ಶಾಕಿಂಗ್ ಸತ್ಯ ಬಯಲಿಗೆ

author-image
Gopal Kulkarni
Updated On
ಗಂಡ ಮತ್ತು ಸಂಬಂಧಿಕರಿಂದಲೇ ಹೋಯ್ತು ಇಷ್ಟು ಮಹಿಳೆಯರ ಜೀವ; ಶಾಕಿಂಗ್ ಸತ್ಯ ಬಯಲಿಗೆ
Advertisment
  • ಜಗತ್ತಿನಲ್ಲಿ ಮನೆಯವರಿಂದಲೂ ಸುರಕ್ಷಿತವಾಗಿಲ್ಲ ಮಹಿಳೆಯರು
  • ಸಂಗಾತಿ ಹಾಗೂ ಸಂಬಂಧಿಕರಿಂದಲೇ ಜೀವ ಕಳೆದುಕೊಳ್ಳುತ್ತಿದ್ದಾರೆ
  • ಯುನೈಟೆಡ್ ನೇಷನ್ ಬಹಿರಂಗಪಡಿಸಿದೆ ಬೆಚ್ಚಿ ಬೀಳಿಸುವ ಮಾಹಿತಿ

ಹೆಣ್ಣು ಮಕ್ಕಳ ಬದುಕು ಮನೆಯಿಂದ ಆಚೆ ಸುರಕ್ಷಿತವಲ್ಲ ಎಂಬ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಮಹಿಳೆಯರ ಜೀವ ಹಾಗೂ ಮಾನ ರಕ್ಷಣೆಯ ಬಗ್ಗೆ ಆಗಾಗ ಪ್ರಶ್ನೆಗಳು ಏಳುತ್ತಲೇ ಇರುತ್ತವೆ. ಆದ್ರೆ ಯುನೈಟೆಡ್ ನೇಷನ್ ಆಚೆ ತಂದಿರುವ ಒಂದು ವರದಿ ಈಗ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಹೆಣ್ಣು ಮಕ್ಕಳು ಮನೆಯವರಿಂದಾಗಲಿ, ಸಂಗಾತಿಗಳಿಂದಾಗಲಿ ಕೂಡ ಸುರಕ್ಷಿತವಾಗಿಲ್ಲ ಅವರ ಜೀವಕ್ಕೆ ದೊಡ್ಡ ಮಟ್ಟದ ಹಾನಿಗಳಾಗಿವೆ ಎಂಬ ವರದಿಯನ್ನು ತೆರೆದಿಟ್ಟಿದೆ ಯುಎನ್​ನ ಹೊಸ ಅಧ್ಯಯನ.

ಸಂಯುಕ್ತ ರಾಷ್ಟ್ರಗಳ ಒಕ್ಕೂಟ ತೆರೆದಿಟ್ಟಿರುವ ಹೊಸ ವರದಿಯ ಪ್ರಕಾರ ಜಾಗತಿಕವಾಗಿ 2023ರಲ್ಲಿ ಸುಮಾರು 51,100 ಮಹಿಳೆಯರು ತಮ್ಮ ಸಂಗಾತಿಯಿಂದ ಹಾಗೂ ಸಂಬಂಧಿಕರಿಂದಲೇ ಹತ್ಯೆಯಾಗಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. 2022ಕ್ಕೆ ಹೋಲಿಸಿದರೆ ಈ ಸಂಖ್ಯೆ 2023ರಲ್ಲಿ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. 2022ರಲ್ಲಿ ಸಂಬಂಧಿಕರಿಂದ ಹಾಗೂ ಸಂಗಾತಿಗಳಿಂದ ಹತ್ಯೆಯಾದವರ ಮಹಿಳೆಯರ ಸಂಖ್ಯೆ ಸುಮಾರು 48,800ರಷ್ಟಿತ್ತು ಎಂದು ಯುಎನ್​ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ:ವಿಶ್ವದ ಅತ್ಯಂತ ದುಬಾರಿ ಮಾನವ ನಿರ್ಮಿತ ವಸ್ತು ಯಾವುದು? ತಾಜ್​ ಮಹಲ್ ಅಲ್ಲ, ಬುರ್ಜ್ ಖಲೀಫಾ ಅಲ್ವೇ ಅಲ್ಲ! ಮತ್ಯಾವುದು?

ಈ ಒಂದು ಅಧ್ಯಯನದ ವರದಿಯನ್ನು ಮಹಿಳೆಯ ವಿರುದ್ಧ ಹಿಂಸಾಚಾರ ನಿವಾರಣೆ ಅಂತಾರಾಷ್ಟ್ರೀಯ ದಿನದಂದೇ ಬಿಡುಗಡೆಗೊಳಿಸಲಾಗಿದೆ. ಈ ಒಂದು ವರದಿಯ ಪ್ರಕಾರ ಜಾಗತಿಕವಾಗಿ ಮಹಿಳೆಯರು ಬಹಳಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಜಾಗವಿದ್ದರೆ ಅದು ಅವರ ಸ್ವಂತ ಮನೆಯೇ ಎಂದು ಯುಎನ್ ಷರಾ ಬರೆದಿಟ್ಟಿದೆ.

publive-image

ವಿಶ್ವದಲ್ಲಿ ಪ್ರತಿದಿನ 140ಕ್ಕೂ ಹೆಚ್ಚು ಮಹಿಳೆಯರು ತಮ್ಮ ಜೀವವನ್ನು ಅವರ ಸಂಗಾತಿಯಿಂದ ಹಾಗೂ ಸಂಬಂಧಿಕರಿಂದ ಕಳೆದುಕೊಳ್ಳುತ್ತಿದ್ದಾರೆ. ವಿಶ್ವದ ಯಾವುದೇ ನಾಯಕರು, ಯಾವುದೇ ಸರ್ಕಾರ ಯಾವುದೇ ಅಧಿಕಾರ ಇದನ್ನು ತಡೆಗಟ್ಟುವಲ್ಲಿ ತುಂಬಾ ಎಡವುತ್ತಿದೆ ಎಂದು ಯುಎನ್ ಹೇಳಿದೆ.

ಇದನ್ನೂ ಓದಿ:ನೀವು ಕುಡಿದ ಅತ್ಯಂತ ದುಬಾರಿ ಟೀ ಯಾವುದು? 1 ಲಕ್ಷ ರೂಪಾಯಿ ‘ಗೋಲ್ಡ್‌ ಚಹಾ’ ವಿಶೇಷತೆ ಏನು ಗೊತ್ತಾ?

ಈ ಒಂದು ವರದಿಯ ಪ್ರಕಾರ ಈ ಬಗೆಯ ಹತ್ಯೆಗಳು ಅತಿಹೆಚ್ಚು ನಡೆಯುತ್ತಿರುವುದು ಆಫ್ರಿಕಾದಲ್ಲಿ ಎಂದು ಹೇಳಲಾಗುತ್ತಿದೆ. 2023ರಲ್ಲಿ ಆಫ್ರಿಕಾ ಒಂದರಲ್ಲಿಯೇ 21,700 ಮಹಿಳೆಯರು ತಮ್ಮ ಸಂಗಾತಿಗಳಿಂದ ಇಲ್ಲವೇ ಸಂಬಂಧಿಕರಿಂದ ಜೀವವನ್ನು ಕಳೆದುಕೊಂಡಿದ್ದಾರೆ. ಒಂದು ಲಕ್ಷ ಜನರಲ್ಲಿ 2.9 ಸಂತ್ರಸ್ತರನ್ನು ಆಫ್ರಿಕಾ ಕಂಡಿದೆ. ಇದೇ ಅಂಕಿಅಂಶ ಅಮೆರಿಕಾದಲ್ಲಿಯೂ ಕೂಡ ಕಂಡು ಬಂದಿದೆ. ಕಳೆದ ವರ್ಷ 1 ಲಕ್ಷ ಮಹಿಳೆಯರಲ್ಲಿ 1.6ರಷ್ಟು ಮಹಿಳೆಯರು ಈ ರೀತಿಯ ಹತ್ಯಾಕಾಂಡದಲ್ಲಿ ಪ್ರಾಣ ಬಿಟ್ಟಿದ್ದಾರೆ. ಓಸಿಯೆನಿಯಾದಲ್ಲಿ ಈ ಒಂದು ಸಂಖ್ಯೆ ಲಕ್ಷಕ್ಕೆ 1.5 ಇದೆ. ಏಷಿಯಾದಲ್ಲಿ 0.8ರಷ್ಟು ಸಂತ್ರಸ್ತರಿದ್ದಾರೆ. ಯುರೋಪ್​ನಲ್ಲಿ ಸಂತ್ರಸ್ತರ ಲಕ್ಷಕ್ಕೆ ಸಂಖ್ಯೆ 0.6 ರಷ್ಟಿದೆ.
ಈ ಒಂದು ವರದಿಯಲ್ಲಿ ಉದ್ದೇಶಪೂರ್ವಕವಾಗಿ ಮಹಿಳೆಯರನ್ನು ಕೊಲ್ಲುವ ನೀಚ ಪವೃತ್ತಿ ಯುರೋಪ್ ಹಾಗೂ ಅಮೆರಿಕಾದಲ್ಲಿ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲವನ್ನೂ ನೋಡಿದಾಗ ಮಹಿಳೆಯರು ಮನೆಯಾಚೆ ಬಿಡಿ ಮನೆಯಲ್ಲಿಯೇ ಸುರಕ್ಷಿತವಾಗಿಲ್ಲ ಎಂಬ ಅಂಶ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment