ಬರೋಬ್ಬರಿ 500 ಕೆಜಿ ತೂಕ.. ಗಣೇಶನಿಗಾಗಿ ಸ್ಪೆಷಲ್‌ ಲಾಡು ತಯಾರಿಸಿದ ಈ ಅಂಗಡಿ ಇತಿಹಾಸವೇ ರೋಚಕ!

author-image
Gopal Kulkarni
Updated On
ಬರೋಬ್ಬರಿ 500 ಕೆಜಿ ತೂಕ.. ಗಣೇಶನಿಗಾಗಿ ಸ್ಪೆಷಲ್‌ ಲಾಡು ತಯಾರಿಸಿದ ಈ ಅಂಗಡಿ ಇತಿಹಾಸವೇ ರೋಚಕ!
Advertisment
  • ಗಣೇಶ ಚತುರ್ಥಿಯಂದು ಕೊಲ್ಕತ್ತಾದಲ್ಲಿ 500 ಕೆಜಿ ತೂಕದ ಲಾಡು
  • 140 ವರ್ಷ ಇತಿಹಾಸವಿರುವ ಸಿಹಿ ಅಂಗಡಿಯಿಂದ ಲಾಡು ತಯಾರು
  • 500 ಕೆಜಿ ತೂಕದ ಲಾಡು ನೋಡಲು ಬರುತ್ತಿರುವ ಗ್ರಾಹಕರು ಹಾಗೂ ಭಕ್ತರು

ಕೊಲ್ಕತ್ತಾ: ಗಣೇಶನ ಹಬ್ಬ ಅಂದ್ರೆ ಸಂಭ್ರಮಕ್ಕೆ ಸಡಗರಕ್ಕೆ ಇನ್ನೊಂದು ಹೆಸರು. ಭಾರತದಲ್ಲಿ ಗಣೇಶ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ಇಡೀ ದೇಶಕ್ಕೆ ದೇಶವೇ ಇದನ್ನು ವೈಭವದಿಂದ ಸಡಗರದಿಂದ ಆಚರಿಸುತ್ತೆ. ಒಂದೊಂದು ಊರಿನ ಗಣೇಶನಿಗೂ ಒಂದೊಂದು ಇತಿಹಾಸವಿದೆ. ಒಂದೊಂದು ವೈಶಿಷ್ಟ್ಯವಿದೆ. ಈಗ ಕೊಲ್ಕತ್ತಾದ ಭವಾನಿಪುರದಲ್ಲಿ ಗಣೇಶ ಚತುರ್ಥಿಯ ಶುಭದಿನದಂದು 500 ಕೆಜಿ ತೂಕದ ಲಾಡು ತಯಾರು ಮಾಡಿದ್ದಾರೆ ಸಿಹಿ ಅಂಗಡಿಯ ಮಾಲೀಕರೊಬ್ಬರು.

ಇದನ್ನೂ ಓದಿ : ಗಣಪತಿಗೆ 20 ಕೆ.ಜಿ ಬಂಗಾರದ ಕಿರೀಟ ದಾನ.. ಅನಂತ್ ಅಂಬಾನಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂಪಾಯಿ?

ಸದ್ಯ ಪ್ರಿಯಾಂಕ ಮಲ್ಲಿಕ ಮಾಲೀಕತ್ವದಲ್ಲಿ ನಡೆಯುತ್ತಿರುವ ಈ ಸಿಹಿ ಅಂಗಡಿಗೆ 140 ವರ್ಷಗಳ ಇತಿಹಾಸವಿದೆ. 500 ಕೆಜಿ ತೂಕದ ಲಾಡು ಬಗ್ಗೆ ಮಾತನಾಡಿರುವ ಪ್ರಿಯಾಂಕ ಮಲ್ಲಿಕ, ನಮ್ಮ ಹಬ್ಬಗಳು ಶುರುವಾಗುವುದೇ ಗಣೇಶ ಚತುರ್ಥಿಯಿಂದ ಇದು ನಮಗೆ ತುಂಬಾ ಪವಿತ್ರವಾದ ದಿನ. ನಮ್ಮ ಸ್ವೀಟ್ ಶಾಪ್​ಗೆ ಸುಮಾರು 140 ವರ್ಷಗಳ ಇತಿಹಾಸವಿದೆ. ಈ ಬಾರಿ ನಾವು 500 ಕೆಜಿ ತೂಕದ ಲಡ್ಡು ಮಾಡಿ ಅದನ್ನು ಗಣೇಶನಿಗೆ ಅರ್ಪಿಸಿದ್ದೇವೆ ಎಂದು ಹೇಳಿದ್ದಾರೆ.


">September 7, 2024


ಇದನ್ನೂ ಓದಿ:ದೇಶದ ಅತಿದೊಡ್ಡ ಗಣೇಶನ ವಿಗ್ರಹ.. ಎಷ್ಟು ಅಡಿ, ಎಷ್ಟು ಟನ್ ಇದೆ, ಇದರ ವಿಶೇಷತೆ ಏನು?

ಸದ್ಯ ಕೋಲ್ಕತ್ತಾದ ಸಿಹಿ ಅಂಗಡಿ ರೆಡಿ ಮಾಡಿರುವ ಈ 500 ಕೆಜಿ ತೂಕದ ಲಾಡುವನ್ನು ನೋಡಲು ಗ್ರಾಹಕರು ಮುಗಿಬೀಳುತ್ತಿದ್ದಾರೆ. ಅದು ಮಾತ್ರವಲ್ಲ ಈ ಐನೂರು ಕೆಜಿ ತೂಕದ ಲಾಡುವಿನ ವಿಡಿಯೋ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು. ಅಂಗಡಿ ಮಾಲೀಕರಿಗೆ ಇರುವ ಭಕ್ತಿ ಭಾವವನ್ನ ಕಂಡ ನೆಟ್ಟಿಗರು ಸಿಹಿ ಅಂಗಡಿಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment