ಸಾವಿನ ಸಂಖ್ಯೆ 143ಕ್ಕೆ ಏರಿಕೆ; ಕೇರಳ ಮಹಾ ದುರಂತದ ನೋವು ಮತ್ತಷ್ಟು ಕಾಡುವ ಆತಂಕ..

author-image
Veena Gangani
Updated On
ಸಾವಿನ ಸಂಖ್ಯೆ 143ಕ್ಕೆ ಏರಿಕೆ; ಕೇರಳ ಮಹಾ ದುರಂತದ ನೋವು ಮತ್ತಷ್ಟು ಕಾಡುವ ಆತಂಕ..
Advertisment
  • ಕಣ್ಮರೆ ಆಗಿರುವ 100ಕ್ಕೂ ಹೆಚ್ಚು ಮಂದಿಗಾಗಿ ಶೋಧ ಕಾರ್ಯ
  • ಗಂಭೀರವಾಗಿ ಗಾಯಾಗೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು
  • ಕೇರಳ ಸರ್ಕಾರಕ್ಕೆ, ತಮಿಳುನಾಡಿನಿಂದ ₹5 ಕೋಟಿ ಪ್ರವಾಹದ ನೆರವು

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಗುಡ್ಡದಭೂತ ಮರಣಮೃದಂಗ ಬಾರಿಸಿದ್ದು ಸಾವಿನ ಸಂಖ್ಯೆ 143ಕ್ಕೆ ದಾಟಿದೆ. ಸಾವಿನ ಸುರಿ ಮಳೆಯಲ್ಲಿ ಬದುಕುಳಿದವರು ಹೋರಾಟ ನಡೆಸ್ತಿದ್ದಾರೆ. ಕೆಸರು ಮಿಶ್ರಿತ ಪ್ರವಾಹದಲ್ಲಿ ಕಣ್ಮರೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ. ಜಲಪ್ರಳಯದಿಂದ ಪರಿಸ್ಥಿತಿ ಅಯೋಮವಾಗಿದೆ.

publive-image

ಇದನ್ನೂ ಓದಿ: ಹನಿಮೂನ್‌ಗೆ ಹೋದ ನವಜೋಡಿಗಳು ನಾಪತ್ತೆ; ಕೇರಳದ ಭೀಕರತೆ ಬಿಚ್ಚಿಟ್ಟ ಬೆಂಗಳೂರಿನ ಚಾಲಕ- VIDEO

ಇರುಳು ಆವರಿಸಿ ಜನ ಗಾಢ ನಿದ್ರೆಯಲ್ಲಿರುವಾಗಲೇ ಮಳೆ, ಭೂಕುಸಿತದ ರೂಪದಲ್ಲಿ ಯಮಪಾಶ ಹಾಕಿದೆ. ಒಂದು ರಾತ್ರಿ ಮೂರು ಬಾರಿಯ ಗುಡ್ಡದ ಭೂತ ಸಾವಿನ ಸುರಿಮಳೆ ಸುರಿಸಿದೆ. ಮೆಪ್ಪಾಡಿಯ ಬೆಟ್ಟಪ್ರದೇಶದ ಮುಂಡಕೈ, ಅಟ್ಟಾಮಲೈ, ಚೂರಲ್‌ಮಲಾದಲ್ಲಿ ಮನೆ, ಮಠ, ಮಂದಿರ, ಶಾಲೆಗಳನ್ನು ನಾಮಾವಶೇಷ ಮಾಡಿದೆ. ಒಂದೇ ರಾತ್ರಿಯಲ್ಲಿ ಇಡೀ ಊರಿಗೇ ಊರೇ ಜಲಸಮಾಧಿಯಾಗಿದೆ. ದುರಂತದಲ್ಲಿ ಇದುವರೆಗೂ 143ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆಯಾಗ್ತಿದೆ.

publive-image

ದುರಂತದಲ್ಲಿ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ 93 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಉಳಿದ ಮೃತದೇಹಗಳಿಗಾಗಿ ರಕ್ಷಣಾಕಾರ್ಯ ಮುಂದುವರಿದಿದೆ. ರಕ್ಷಣಾ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್​​ಗಳನ್ನು ಬಳಸಿದ್ದು, ಎನ್​ಡಿಆರ್​​​ಎಫ್​, ಎಸ್​​ಡಿಆರ್​​ಎಫ್ ಸೇರಿದಂತೆ ಜಿಲ್ಲಾಡಳಿತವೂ ಸಹ ಸ್ಥಳದಲ್ಲೇ ಬೀಡು ಬಿಟ್ಟಿದೆ. ಗಾಯಾಳುಗಳಿಗೆ ಮೆಪ್ಪಾಡಿ, ವಯನಾಡು, ಮಲ್ಲಪುರಂ, ಕಾಸರಗೋಡು, ಕರ್ನಾಟಕದ ಎಚ್.ಡಿ.ಕೋಟೆ, ಮೈಸೂರಿನ ಕೆ.ಆರ್.ಆಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇವತ್ತು ಕೂಡ ಕಾರ್ಯಾಚರಣೆ ಮುಂದುವರಿಯಲಿದೆ.

ಇದನ್ನೂ ಓದಿ:ಮುಂಬೈ ಆಸ್ಪತ್ರೆಯಿಂದ ಅಮೆರಿಕಾಗೆ ಶಾರುಖ್ ಖಾನ್​​ ದಿಢೀರ್ ಶಿಫ್ಟ್: ಕಿಂಗ್ ​ಖಾನ್​​ಗೆ ಏನಾಯ್ತು..?

ಪ್ರವಾಹಪೀಡಿತ ವಯನಾಡಿಗೆ ಲೋಕಸಭೆ ವಿಪಕ್ಷನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಭೇಟಿ ನೀಡಬೇಕಿತ್ತು. ಆದ್ರೆ ಹವಾಮಾನ ವೈಪರೀತ್ಯ ಕಾರಣ ಪ್ರವಾಸ ರದ್ದಾಗಿದೆ. ಇನ್ನು, ಭಾರೀ ಭೂಕುಸಿತದಿಂದ ತೀವ್ರ ಹಾನಿಗೊಳಗಾಗಿರುವ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ವಯನಾಡಿನ ಮಾಜಿ ಸಂಸದ ರಾಹುಲ್ ಗಾಂಧಿ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದೆ. ಕರ್ನಾಟಕ ಸೇರಿದಂತೆ ಹೊರರಾಜ್ಯಗಳು ಕೂಡ ಸಕಲ ರೀತಿಯ ನೆರವು ನೀಡುತ್ತಿವೆ. ತಮಿಳುನಾಡು ಸರ್ಕಾರ 5 ಕೋಟಿ ರೂ. ಪ್ರವಾಹದ ನೆರವು ಘೋಷಿಸಿದೆ. ಭೂಕುಸಿತದಲ್ಲಿ ಗಾಯಗೊಂಡವರಿಗೆ ರಕ್ತ ನೀಡಲು ಕೇರಳಿಗರ ಮನಸು ಮಿಡಿದಿದೆ. ಸುಲ್ತಾನ್ ಬತೇರಿಯಲ್ಲಿ ರಕ್ತ ನೀಡಲು ಜನ ಕ್ಯೂನಲ್ಲಿ ನಿಂತಿದ್ದು ಕಂಡುಬಂತು.

publive-image

ವಯನಾಡು ಸೇರಿದಂತೆ ಮಲ್ಲಪುರಂ, ಕೋಯಿಕ್ಕೋಡ್, ಕಣ್ಣೂರು ಸೇರಿದಂತೆ ಧಾರಾಕಾರ ಮಳೆ ಮುಂದುವರಿದಿದೆ. ಹೀಗಾಗಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಕೇರಳದ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್ ಘೋಷಿಸಲಾಗಿದೆ. ಒಟ್ಟಾರೆ, ಹಿಂದಿನ ದಿನ ಹಸಿರ ವನರಾಶಿಯಿಂದ ನಳನಳಿಸುತ್ತಿದ್ದ ಆ ಗ್ರಾಮಗಳು ಮರುದಿನ ಸುನಾಮಿ ರೂಪದಲ್ಲಿ ನುಗ್ಗಿದ ಭೂಕುಸಿತಕ್ಕೆ ಸಿಲುಕಿ ಸ್ಮಶಾನ ರೂಪ ತಾಳಿದ್ದು ಮಾತ್ರ ದುರಂತವೇ ಸರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment