/newsfirstlive-kannada/media/post_attachments/wp-content/uploads/2024/12/WINTER-SESSION.jpg)
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಪ್ರಮುಖ ಚರ್ಚೆಗಳೊಂದಿಗೆ ಬಿಸಿಯೇರಿಸಿದೆ. ಮೊನ್ನೆ 14 ಗಂಟೆಗಳು ಕಲಾಪ ನಡೆಸಿದ್ದ ಸ್ಪೀಕರ್ ನಿನ್ನೆಯೂ ನಿರಂತರ 15 ಗಂಟೆಗಳ ಕಾಲ ನಡೆದ ಕಲಾಪದಲ್ಲಿ ವಕ್ಫ್​ ಬೋರ್ಡ್​ ವಿವಾದ, ಸೇರಿ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯಿತು. ಇವತ್ತು ಅಧಿವೇಶನಕ್ಕೆ ಕೊನೆಯ ದಿನವಾಗಿದ್ದು ಉತ್ತರ ಕರ್ನಾಟಕದ ಸಮಸ್ಯೆಗಳು ಸೇರಿ ಹಲವು ವಿಷಯಗಳ ಕುರಿತು ಚರ್ಚೆಗೆ ಬರಲಿವೆ
ತಡರಾತ್ರಿ 12.40ರವರೆಗೆ ಕಲಾಪ ನಡೆಸಿದ ಸ್ಪೀಕರ್ ಖಾದರ್
ಈ ಬಾರಿಯ ಬೆಳಗಾವಿಯ ಚಳಿಗಾಲದ ಅಧಿವೇಶನ ಅತ್ಯಂತ ವಿಶೇಷ ಎನಿಸಿದೆ. ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ನಡೆದ ಕಲಾಪ ದಾಖಲೆಯ ಪುಟ ಸೇರಿದೆ. ನಿನ್ನೆಯೂ ಕೂಡ ಬೆಳಗ್ಗೆ 9.40ಕ್ಕೆ ಆರಂಭವಾದ ಸದನ ರಾತ್ರಿ 12.40ರವರೆಗೆ ನಡೆದಿದೆ. ಸ್ಪೀಕರ್ ಯು.ಟಿ.ಖಾದರ್, ಮಧ್ಯಾಹ್ನದ ಊಟದ ವಿರಾಮಕ್ಕೂ ಅವಕಾಶ ನೀಡದೇ ಸುದೀರ್ಘ ಕಲಾಪ ನಡೆಸಿದ್ದಾರೆ. ನಿನ್ನೆ ರಾತ್ರಿಯ ಕಲಾಪದಲ್ಲಿ ಕಾಂಗ್ರೆಸ್​ನ 14 ಸದಸ್ಯರು, ಬಿಜೆಪಿಯ 7 ಸದಸ್ಯರು, ಜೆಡಿಎಸ್​ನ ಒಬ್ಬರು ಹಾಗೂ ಒಬ್ಬರು ಪಕ್ಷೇತರ ಶಾಸಕರು ಭಾಗಿಯಾಗಿದ್ದಾರೆ. ನಿನ್ನೆ ಸಂಜೆಯ ಬಳಿಕ ಕಲಾಪದಲ್ಲಿ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೀತು.
/newsfirstlive-kannada/media/post_attachments/wp-content/uploads/2024/12/WINTER-SESSION-2.jpg)
ವಿಧಾನಸಭೆ ಅಧಿವೇಶನದಲ್ಲಿ ವಕ್ಫ್​ ಬೋರ್ಡ್ ಕದನ!
ವಿಧಾನಸಭೆ ಅಧಿವೇಶದಲ್ಲಿ ವಕ್ಪ್ ಆಸ್ತಿ ವಿವಾದ ಕುರಿತು ಸಚಿವ ಜಮ್ಮೀರ್ ಅಹಮದ್​ ಉತ್ತರ ನೀಡಿದ್ರು. ವಕ್ಫ್​​​​ ರೈತರು, ದೇವಸ್ಥಾನಗಳು ಸೇರಿ ಯಾರ ಭೂಮಿಯನ್ನು ಕಬಳಿಸಿಲ್ಲ, ಬಿಜೆಪಿ, ಜೆಡಿಎಸ್ ಅವಧಿಯಲ್ಲೂ ನೋಟಿಸ್ ಕೊಡಲಾಗಿದೆ ಅಂದ್ರು ಸಚಿವ ಜಮೀರ್ ಅಹ್ಮದ್ ಉತ್ತರಕ್ಕೆ ಕೆಂಡಾಮಂಡಲರಾದ ವಿಪಕ್ಷ ನಾಯಕ ಆರ್.ಅಶೋಕ್ ನೀವು ಮಾಡಿರುವ ಕಾನೂನಿನಿಂದ ನೋಟಿಸ್ ಕೊಡಬೇಕಾಯ್ತು ಎಂದಾಗ ಸದನ ಗದ್ದಲ, ಕೋಲಾಹಲಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ:ಅಬ್ಬಾ.. ವಕ್ಫ್ ಆಸ್ತಿ ಕಬಳಿಕೆಯಲ್ಲಿ ಅತಿರಥರು; ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದ ಅನ್ವರ್ ಮಾಣಿಪ್ಪಾಡಿ!
ಕಂಬಳ ಅನುದಾನ ಕುರಿತು ಕಾಂಗ್ರೆಸ್​ನ ಅಶೋಕ್ ಕುಮಾರ್ ರೈ ಸರ್ಕಾರದ ಗಮನ ಸೆಳೆದ್ರು, ಎರಡು ಜಿಲ್ಲೆಗಳಿಗೆ ತಲಾ ಹತ್ತು ಲಕ್ಷ ಕೊಟ್ಟಿದ್ದೇವೆ, ಇದನ್ನು ಸಚಿವರ ಗಮನಕ್ಕೆ ತರುತ್ತೇನೆ ಅಂತ ಕೃಷ್ಣಬೈರೇಗೌಡ ಉತ್ತರ ಕೊಟ್ರು.
/newsfirstlive-kannada/media/post_attachments/wp-content/uploads/2024/04/Dk-Shivakumar-On-HDK-1.jpg)
ಇನ್ನು ಬೆಂಗಳೂರಿನ ಕೆ.ಅರ್.ಪುರಂನಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗ್ತಿದ್ದು ಹೊಸಕೋಟೆವರೆಗೆ ಮೆಟ್ರೋ ಸೌಲಭ್ಯ ವಿಸ್ತರಿಸುವ ಬಗ್ಗೆ ಕಾಂಗ್ರೆಸ್​​ನ ಶರತ್ ಬಚ್ಚೇಗೌಡ ಪ್ರಶ್ನಿಸಿದ್ರು, ಆದಷ್ಟು ಬೇಗ ಮೆಟ್ರೋ ವಿಸ್ತರಣೆ ಬಗ್ಗೆ ಡಿಸಿಎಂ ಡಿಕೆಶಿ ಭರವಸೆ ನೀಡಿದರು.
ಇದನ್ನೂ ಓದಿ: ಅನುದಾನ ವಿಚಾರದಲ್ಲಿ ಅಸಮಾಧಾನ; ಕಾಂಗ್ರೆಸ್ ಶಾಸಕರ ಸಮಸ್ಯೆ ಆಲಿಸಲಿಲ್ವಾ ಸಿಎಂ, ಡಿಸಿಎಂ?
ಒಟ್ಟಾರೆ, ನಿನ್ನೆಯೂ ಕೂಡ ಮಧ್ಯರಾತ್ರಿ 1 ಗಂಟೆವರೆಗೆ ನಿರಂತರ 15 ಗಂಟೆಗಳ ಕಾಲ ಕಲಾಪ ನಡೆಸಿದ ಸ್ಪೀಕರ್ ಸದನವನ್ನು ಇಂದು ಬೆಳಗ್ಗೆ 9 ಗಂಟೆಗೆ ಮುಂದೂಡಿದ್ದಾರೆ, ಇವತ್ತು ಅಧಿವೇಶನಕ್ಕೆ ತೆರೆ ಬೀಳಲಿದ್ದು ಉತ್ತರ ಕರ್ನಾಟಕದ ಬಗ್ಗೆ ಚರ್ಚೆ, ವಕ್ಫ್ ಬೋರ್ಡ್ ಹಾಗೂ ಬರ ಹಾನಿ ಹಾನಿ ಬಗ್ಗೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us