newsfirstkannada.com

ಕೇರಳದಲ್ಲಿ ಆನೆ ದಾಳಿಗೆ ಕರ್ನಾಟಕದಿಂದ ₹15 ಲಕ್ಷ ಪರಿಹಾರ ಯಾಕೆ? ಬಿಜೆಪಿ ನಾಯಕರ ಕೈಗೆ ಹೊಸ ಅಸ್ತ್ರ!

Share :

Published February 20, 2024 at 12:13pm

Update February 20, 2024 at 12:50pm

  ನಮ್ಮ ತೆರಿಗೆ ದುಡ್ಡು ಇನ್ಯಾರಿಗೋ ಯಾಕೆ ಕೊಡಬೇಕು? - ಸಿ.ಟಿ ರವಿ

  ಕರ್ನಾಟಕದ ಸರ್ಕಾರದಿಂದ 15 ಲಕ್ಷ ರೂಪಾಯಿ ಪರಿಹಾರ ಯಾಕೆ?

  ‘ರಾಹುಲ್ ಗಾಂಧಿ ಮೆಚ್ಚಿಸೋದಕ್ಕೆ ರಾಜ್ಯದ ಜನರ ಹಣ ದುರ್ಬಳಕೆ’

ಬೆಂಗಳೂರು: ಕೇರಳದ ವಯನಾಡಿನಲ್ಲಿ ಆನೆ ದಾಳಿಗೆ ಟ್ರ್ಯಾಕ್ಟರ್ ಚಾಲಕ ಸಾವನ್ನಪ್ಪಿದ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಮೃತ ವ್ಯಕ್ತಿ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸೂಚನೆ ಮೇರೆಗೆ ಕರ್ನಾಟಕದ ಸರ್ಕಾರದಿಂದ 15 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಕೇರಳಲ್ಲಿ ಆನೆ ದಾಳಿಗೆ ಕರ್ನಾಟಕದಿಂದ ಪರಿಹಾರ ಯಾಕೆ ಎಂದು ಪ್ರಶ್ನಿಸಲಾಗಿದೆ.

ಕಳೆದ ಫೆಬ್ರವರಿ 10ರಂದು ಕೇರಳದಲ್ಲಿ ಮನೆಗೆ ನುಗಿದ ಆನೆ 47 ವರ್ಷದ ವ್ಯಕ್ತಿಯನ್ನು ತುಳಿದು ಹೋಗಿತ್ತು. ಈ ಘಟನೆ ರಾಹುಲ್ ಗಾಂಧಿ ಅವರು ಸಂಸತ್‌ಗೆ ಪ್ರತಿನಿಧಿಸುವ ವಯನಾಡು ಕ್ಷೇತ್ರದಲ್ಲಿ ನಡೆದಿತ್ತು. ಭಾರತ್ ಜೋಡೋ ನ್ಯಾಯ ಯಾತ್ರೆಯ ಹಿನ್ನೆಲೆಯ ಉತ್ತರಪ್ರದೇಶದಲ್ಲಿದ್ದ ರಾಹುಲ್ ಗಾಂಧಿ ಅವರು ವಯನಾಡಿಗೆ ಭೇಟಿ ನೀಡಿ ಮೃತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು.

ರಾಹುಲ್ ಗಾಂಧಿ ಅವರ ಭೇಟಿ ನೀಡಿದ ಬಳಿಕ ಕರ್ನಾಟಕ ಸರ್ಕಾರ ಮೃತ ಕುಟುಂಬಸ್ಥರಿಗೆ 15 ಲಕ್ಷ ರೂಪಾಯಿ ಘೋಷಣೆ ಮಾಡಿದೆ ಎನ್ನಲಾಗಿದೆ. ಹೀಗಾಗಿ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಮಾಜಿ ಸಚಿವ ಸಿ.ಟಿ ರವಿ ಅವರು ರಾಹುಲ್ ಗಾಂಧಿ ಮೆಚ್ಚಿಸೋದಕ್ಕೆ ಸರ್ಕಾರ ರಾಜ್ಯದ ಜನರ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇರಳದಲ್ಲಿ ಆನೆ ದಾಳಿಗೆ ಕರ್ನಾಟಕದಿಂದ ₹15 ಲಕ್ಷ ಪರಿಹಾರ ಯಾಕೆ? ಬಿಜೆಪಿ ನಾಯಕರ ಕೈಗೆ ಹೊಸ ಅಸ್ತ್ರ!

https://newsfirstlive.com/wp-content/uploads/2024/02/Kerala-Elephant-Attack.jpg

Load More