Advertisment

25 ಕೆಜಿ ಅಕ್ಕಿ ಚೀಲದಲ್ಲಿ ₹15 ಲಕ್ಷ ಹಣ.. ಕಂತೆ, ಕಂತೆ ನೋಟು ನೋಡಿ ಉಲ್ಟಾ ಹೊಡೆದ ಗ್ರಾಹಕ; ಆಮೇಲೇನಾಯ್ತು?

author-image
admin
Updated On
25 ಕೆಜಿ ಅಕ್ಕಿ ಚೀಲದಲ್ಲಿ ₹15 ಲಕ್ಷ ಹಣ.. ಕಂತೆ, ಕಂತೆ ನೋಟು ನೋಡಿ ಉಲ್ಟಾ ಹೊಡೆದ ಗ್ರಾಹಕ; ಆಮೇಲೇನಾಯ್ತು?
Advertisment
  • ಅಕ್ಕಿ ತಂದವನಿಗೆ ಚೀಲದಲ್ಲಿ ಸಿಕ್ಕಿದ್ದು ಕಂತೆ ಕಂತೆ ನೋಟುಗಳು
  • ಒಂದೇ ಚೀಲದಲ್ಲಿ ಅಕ್ಕಿಗಿಂತ್ಲೂ ಹೆಚ್ಚು ಸಿಕ್ಕಿದ್ದು ಬರೀ ದುಡ್ಡು
  • ಲಕ್ಷ, ಲಕ್ಷ ಸಿಕ್ಕ ಕ್ಷಣದಲ್ಲೇ ಗೂಗಲ್ ಪೇ ಅಡ್ರೆಸ್​​ ಶಾಕ್ ಕೊಡ್ತು!

ಅಂಗಡಿಯಿಂದ ಏನಾದ್ರೂ ಖರೀದಿಸಿದಾಗ ಫ್ರೀಯಾಗಿ ಸಣ್ಣ ವಸ್ತು ಸಿಕ್ಕರೂ ಖುಷಿ ಆಗುತ್ತದೆ. ಆದರೇ, ಇಲ್ಲೊಬ್ಬ ಗ್ರಾಹಕನಿಗೆ ಒಂದು ಚೀಲ ಅಕ್ಕಿ ಖರೀದಿಸಿದ್ದಕ್ಕೆ ಕಂತೆ ಕಂತೆ ನೋಟುಗಳು ಸಿಕ್ಕಿವೆ. ಅಕ್ಕಿಗಿಂತಲೂ ಹೆಚ್ಚು ನೋಟುಗಳೇ ಇದ್ದಿದ್ದು ನೋಡಿ ಶಾಕ್ ಖುಷಿಯಾಗಿದ್ದ. ಅರ್ಧ ಗಂಟೆಯಲ್ಲೇ ಗೂಗಲ್ ಪೇ ಅಡ್ರೆಸ್​​ ಗ್ರಾಹಕನಿಗೆ ಶಾಕ್ ನೀಡಿತ್ತು.

Advertisment

25 ಕೆಜಿ ಅಕ್ಕಿ ಚೀಲದಲ್ಲಿ 15 ಲಕ್ಷ ಹಣ ಸಿಕ್ಕಿತ್ತು
ತಮಿಳುನಾಡಿನ ಕಡಲೂರಿನಲ್ಲಿ ಅಕ್ಕಿ ವ್ಯಾಪಾರಿ ಶ್ರೀನಿವಾಸನ್ ಅಂಗಡಿಯಲ್ಲಿ ಇರಲಿಲ್ಲ. ಆತನ ಸಹಾಯಕ ಷಣ್ಮುಗಂ ಮಾತ್ರ ಇದ್ದ. ಯಾರೋ ಬಂದು 25 ಕೆಜಿ ಅಕ್ಕಿಯನ್ನು ಖರೀದಿದ್ರು. ಚೀಲದ ಸಮೇತ ಅಕ್ಕಿಯನ್ನು ಮೇಲ್ಬಡಿ ಅನ್ನೋ ಗ್ರಾಮದ ಭೂಪಾಲನ್​ಗೆ ಮಾರಿದ್ದ. ಅಕ್ಕಿ ಕೊಂಡು ಹೋದ ಭೂಪಾಲನ್​​ಗೆ ಮನೆಯಲ್ಲಿ ಶಾಕ್ ಆಯ್ತು. ಚೀಲ ಬಿಚ್ಚಿ ನೋಡಿದರೇ ಅಕ್ಕಿಗಿಂತಲೂ ಹೆಚ್ಚು ಕಂತೆ ಕಂತೆ ನೋಟುಗಳೇ ಕಾಣಿಸಿದ್ದವು. ಎಲ್ಲವನ್ನೂ ಎಣಿಸಿ ನೋಡಿದಾಗ ಅದರಲ್ಲಿ ಭರ್ತಿ 15 ಲಕ್ಷ ರೂಪಾಯಿ ಇರುವುದು ಖಾತ್ರಿ ಆಗಿತ್ತು.

publive-image

ಇದನ್ನೂ ಓದಿ: ಮೋರಿಯಲ್ಲಿ ಕೈ ಹಾಕಿದವರಿಗೆಲ್ಲಾ ಸಿಕ್ತು ₹500; ಬಂಡಲ್ ಬಂಡಲ್ ನೋಟುಗಳು ಸಿಕ್ಕವರಿಗೆ ಸೀರುಂಡೆ! 

ಅರ್ಧ ಗಂಟೆಯಲ್ಲೇ ಮನೆಗೆ ಬಂದಿದ್ದ ಅಂಗಡಿ ಮಾಲೀಕ
ಹೊರಕ್ಕೆ ಹೋಗಿದ್ದ ಅಕ್ಕಿ ಅಂಗಡಿ ಮಾಲೀಕ ಶ್ರೀನಿವಾಸನ್ ಅಂಗಡಿಗೆ ಬಂದವನೇ ಶಾಕ್ ಆದ. ಯಾಕಂದ್ರೆ, ಅಲ್ಲೇ ಪಕ್ಕದಲ್ಲೇ ಇದ್ದ ಅಕ್ಕಿ ಮೂಟೆ ಕಾಣಿಸಲಿಲ್ಲ. ಕೂಡಲೇ ಸಹಾಯಕ ಷಣ್ಮುಖನಿಗೆ ಇಲ್ಲಿದ್ದ ಅಕ್ಕಿ ಮೂಟೆ ಏನಾಯ್ತು ಅಂತ ಕೇಳಿದ. ಸ್ವಾಮಿ ಅದನ್ನ ಯಾರೋ ಬಂದಿದ್ರು, ಅವರಿಗೆ ಮಾರಿಬಿಟ್ಟೆ ಅನ್ನೋ ಉತ್ತರ ಕೊಟ್ಟಿದ್ದ. ಅದನ್ನ ಕೇಳಿ ಶ್ರೀನಿವಾಸನ್ ರೊಚ್ಚಿಗೆದ್ದ. ಷಣ್ಮುಖನ ತಲೆಗೆ ಎರಡು ಬಿಟ್ಟು, ಅಕ್ಕಿ ಮೂಟೆ ಖರೀದಿಸಿದ್ದು ಯಾರು ಅನ್ನೋದು ಗೊತ್ತಾ? ಅಂತ ಕೇಳಿದ. ಇಲ್ಲ ಗೊತ್ತಿಲ್ಲ ಎಂದ ಷಣ್ಮುಖನ ಉತ್ತರ ಊಹಿಸಿದ್ದ ಶ್ರೀನಿವಾಸನ್ ಗೂಗಲ್ ಪೇ ಮೂಲಕ ಹಣ ಕೊಟ್ಟಿದ ಸುಳಿವಿನ ಮೇರೆಗೆ ಭೂಪಾಲನ್ ಅಡ್ರೆಸ್​​ ಹುಡುಕಿದ್ದ. ಅಷ್ಟೇ ಅಲ್ಲ, ಆ ಕೂಡಲೇ ಭೂಪಾಲನ್ ಮನೆ ಮುಂದೆ ಬಂದು ನಿಂತು ಬಿಟ್ಟ.

Advertisment

ಇದ್ದಿದ್ದೇ 10 ಲಕ್ಷ ಅಂತ ಹೇಳಿಬಿಟ್ಟಳು ಭೂಪಾಲನ್ ಮಗಳು!
ಅಕ್ಕಿ ಮಾಲೀಕ ಮನೆಗೆ ಬಂದು ಚೀಲದಲ್ಲಿ ನಮಗೆ ಸೇರಿದ ಹಣವಿದೆ ಕೊಡಿ ಅಂತ ಕೇಳಿದ. ಭೂಪಾಲನ್ ಏನೂ ಮಾತಾಡದೆ ನಿಂತಿದ್ದನ್ನ ಕಂಡು, ಆತನ ಮಗಳು ದಾತ್ಸಾಯಿನಿ "ಅಣ್ಣಾ, ಅದಲ್ಲಿ ಇದ್ದಿದ್ದೇ 10 ಲಕ್ಷ. ಇಲ್ಲಿದೆ ನೋಡಿ" ಅಂತ ಒಂದಷ್ಟು ಕಂತೆ ನೋಟುಗಳನ್ನು ಹಿಂದುರಿಗಿಸಿದ್ದಾಳೆ. ಅಕ್ಕಿ ಚೀಲದಲ್ಲಿ ಹತ್ತು ಲಕ್ಷ ಇತ್ತು ಅಂತ ವಾಗ್ವಾದವೇ ನಡೆದಿದೆ. ಕೊನೆಗೆ ಶ್ರೀನಿವಾಸನ್, ಭೂಪಾಲನ್ ವಿರುದ್ಧ ಶ್ರೀನಿವಾಸನ್ ವಡಲೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ, ವಿಚಾರಣೆಯೂ ಆರಂಭವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment