/newsfirstlive-kannada/media/post_attachments/wp-content/uploads/2025/03/Bangalore-Huskur-jaatre.jpg)
ಬೆಂಗಳೂರು: ಸಾವಿರಾರು ವರ್ಷಗಳ ಇತಿಹಾಸ ಇರುವ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು, ಭಕ್ತರು ಸೆರೆ ಹಿಡಿದಿರುವ ವಿಡಿಯೋ ಬೆಚ್ಚಿ ಬೀಳಿಸುವಂತಿದೆ. 150 ಅಡಿ ಅತ್ತರದ ತೇರುಗಳು ಇಂದು ಮದ್ದೂರಮ್ಮ ಜಾತ್ರೆಗೆ ಹೋಗುತ್ತಿತ್ತು. ಭಕ್ತರು ಆಕಾಶದೆತ್ತರದ ತೇರುಗಳನ್ನ ಎಳೆದು ತರುವಾಗ ಈ ಅವಘಡ ಸಂಭವಿಸಿದೆ.
ಆನೇಕಲ್ ತಾಲೂಕಿನ ದೊಡ್ಡನಾಗಮಂಗಳ ಮತ್ತು ರಾಯಸಂದ್ರ ಗ್ರಾಮದ ತೇರುಗಳನ್ನು ಎತ್ತುಗಳು, ಜೆಸಿಬಿ, ಟ್ರಾಕ್ಟರ್ ಮತ್ತು ಗ್ರಾಮಸ್ಥರು ಎಳೆದು ತರುತ್ತಿದ್ದರು. ಗಗನ ಚುಂಬಿ ತೇರುಗಳು (ಕುರ್ಜು) ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ಬರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಅಬ್ಬಾ.. 100 ಅಡಿ ಎತ್ತರದ ತೇರಿನ ಮೇಲೆ RCB ಫ್ಯಾನ್ಸ್; ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ!
/newsfirstlive-kannada/media/post_attachments/wp-content/uploads/2025/03/Bangalore-Huskur-jaatre-1.jpg)
ಲಕ್ಷಾಂತರ ಮಂದಿ ಭಕ್ತರು ಸೇರುವ ಪ್ರಸಿದ್ಧ ಜಾತ್ರೆ ಇದಾಗಿದ್ದು, ಪ್ರತಿಷ್ಟೆಗೆ ಅತಿ ಎತ್ತರ ತೇರು ಕಟ್ಟಿ ಎಳೆದು ತರಲಾಗುತ್ತದೆ. ಹಲವು ಗ್ರಾಮದ ತೇರುಗಳು ಕಿಲೋಮೀಟರ್ ಗಟ್ಟಲೆ ಕುರುಚಲು ರಸ್ತೆಯಲ್ಲಿ ಆಗಮಿಸುತ್ತವೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಬಹಳ ಅದ್ಧೂರಿಯಾಗಿ ಮಾಡಲಾಗುತ್ತದೆ. ಈ ಬಾರಿ ಹುಸ್ಕೂರು ಜಾತ್ರೆ ನಾಲ್ಕೈದು ತೇರುಗಳನ್ನು ಎಳೆದು ತರಲಾಗುತ್ತಿತ್ತು. ಅದರಲ್ಲಿ ರಾಯಸಂದ್ರದ ತೇರು ಧರೆಗುರುಳಿ ನಾಲ್ಕೈದು ಭಕ್ತರು ಗಾಯಗೊಂಡಿದ್ದಾರೆ.
ಗಗನಚುಂಬಿ ತೇರನ್ನು ಎಳೆದು ತರುವಾಗ ಗಾಳಿ ಸಹಿತ ಮಳೆಯಾಗಿದೆ. ಗಾಳಿ, ಮಳೆ ಹೆಚ್ಚಾಗಿ 150 ಅಡಿ ಎತ್ತರದ ತೇರುಗಳು ಆಯತಪ್ಪಿ ಬಿದ್ದಿವೆ. ರಾಯಸಂದ್ರದ ಕುರ್ಜು ಕೆಳಗೆ ಸಿಲುಕಿದ್ದ ವ್ಯಕ್ತಿ ಗಾಯಗೊಂಡಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹುಸ್ಕೂರು ಜಾತ್ರೆ ಸಂಭ್ರಮದ ಜೊತೆ ಇದೀಗ ಸೂತಕದ ಛಾಯೆ ಆವರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us