/newsfirstlive-kannada/media/post_attachments/wp-content/uploads/2024/08/kolkata-doctor-death.jpg)
ಕೊಲ್ಕತ್ತಾ: ಕಳೆದ ನಾಲ್ಕೈದು ದಿನಗಳಿಂದ ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ಕೊಲ್ಕತ್ತಾದ ಆರ್ ಜಿ ಕರ್ ಕಾಲೇಜಿನ 31 ವರ್ಷದ ವೈದ್ಯೆಯ ಮೇಲಾದ ಭೀಕರ ಅತ್ಯಾಚಾರ ಮತ್ತು ಕೊಲೆ ಈಗ ಮತ್ತೊಂದು ತಿರುವನ್ನು ಪಡೆದುಕೊಂಡಿದೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿಗಳು ಆಚೆ ಬರುತ್ತಿದ್ದಂತೆ ಹಲವು ಅನುಮಾನಗಳು ಹೆಡೆಯೆತ್ತುತ್ತಿವೆ.
ಇದನ್ನೂ ಓದಿ:ಪತ್ನಿ, ಇಬ್ಬರು ಮಕ್ಕಳು, ಹೆತ್ತ ಅಮ್ಮನನ್ನೂ ಕತ್ತು ಸೀಳಿ ಸಾಯಿಸಿದ.. ಪೊಲೀಸ್ ಕ್ವಾರ್ಟರ್ಸ್ನಲ್ಲಿ ಐವರ ಬಲಿ
ಸದ್ಯ ದೇಹದ ಮೇಲಾದ ಗಾಯದ ಗುರುತುಗಳು ಹಾಗೂ ಯುವತಿಯ ದೇಹದಲ್ಲಿ ಪತ್ತೆಯಾದ ವಿರ್ಯದ ಪ್ರಮಾಣದಿಂದಾಗಿ ಇದು ಕೇವಲ ಒಬ್ಬನಿಂದ ಆದಂತಹ ಅತ್ಯಾಚಾರವಲ್ಲ. ಸಾಮೂಹಿಕವಾಗಿ ಅತ್ಯಾಚಾರ ನಡೆಸಲಾಗಿದೆ ಎಂದು ಯುವತಿ ಪೋಷಕರು ನ್ಯಾಯಾಲಯದ ಎದುರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಹತ್ಯೆಯಾಗಿರುವ ವೈದ್ಯೆಯ ಪೋಷಕರು ಕೋರ್ಟ್ನಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಸಾಮೂಹಿಕ ಅತ್ಯಾಚಾರದ ಸಂಶಯ ಮೂಡಲು ಕಾರಣವೇನು
ಅತ್ಯಾಚಾರ ಮತ್ತು ಕೊಲೆಯಾದ 31 ವರ್ಷದ ಸ್ನಾತಕೋತ್ತರ ವೈದ್ಯೆ ದೇಹದಲ್ಲಿ ಕಾಣಿಸಿಕೊಂಡಿರುವ ಭೀಕರ ಗಾಯದ ಗುರುತುಗಳು ಈ ಅನುಮಾನಗಳನ್ನು ಇನ್ನಷ್ಟು ಬಲಪಡಿಸುತ್ತಿವೆ. ಸದ್ಯ ಸಿಬಿಐ ಈಗ ಪ್ರಕರಣವನ್ನು ಭೇದಿಸಲು ಅಖಾಡಕ್ಕೆ ಇಳಿದಿದೆ. ಹೀಗಾಗಿ ಹಲವು ಆಯಾಮಗಳ ಮೇಲೆ ಈ ತನಿಖೆ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ:ಗಂಡನಿಂದಲೇ ಅಮಾನುಷ ಕೃತ್ಯ; ಹೆಂಡತಿಯ ಬೈಕ್ಗೆ ಕಟ್ಟಿ ಎಳೆದೊಯ್ತು ವಿಕೃತಿ.. ಕಾರಣ ರಿವೀಲ್
ವೈದ್ಯೆಯ ಪರ ಅರ್ಜಿ ಸಲ್ಲಿಸಿರುವ ಪೋಷಕರು, ಮಗಳ ದೇಹದಲ್ಲಿ ಗಂಭೀರ ಗಾಯಗಳಾಗಿವೆ. ಅವಳ ಮೇಲೆ ರಣಭೀಕರ ಹಲ್ಲೆಯಾಗಿರುವುದು ಕೂಡ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಎರಡು ಕಿವಿಗಳಿಗೆ ಗಂಭೀರ ಗಾಯಗಳಾಗಿವೆ.ಅವಳ ತುಟಿಗಳ ಮೇಲೂ ಕೂಡ ಗಂಭೀರ ಗಾಯಗಳಾಗಿವೆ. ಆ ಗಾಯಗಳನ್ನು ನೋಡಿದ್ರೆ ಅವಳು ಚೀರಾಡದಂತೆ ಮಾಡಲು ಯಾರೋ ಅವಳ ಬಾಯಿಯನ್ನು ಗಟ್ಟಿಯಾಗಿ ಮುಚ್ಚುವ ಯತ್ನ ಮಾಡಿದ್ದಾರೆ ಎಂಬುದು ಇಲ್ಲಿ ಕಾಣುತ್ತಿದೆ ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.
ಈ ಅನುಮಾನಕ್ಕೆ ಪುಷ್ಠಿ ನೀಡಲು ಮರಣೋತ್ತರ ಪರೀಕ್ಷೆಯಲ್ಲಿ ಮತ್ತೊಂದು ಪ್ರಮುಖ ಸಾಕ್ಷ್ಯ ಸಿಕ್ಕಿರುವುದು ಹತ್ಯೆಯಾದ ವೈದ್ಯೆಯ ದೇಹದಲ್ಲಿ ಪತ್ತೆಯಾಗಿರುವ ವೀರ್ಯದ ಪ್ರಮಾಣ. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ದೇಹದಲ್ಲಿ 150 ಮಿಲಿ ಗ್ರಾಮ್ನಷ್ಟು ವಿರ್ಯ ಪತ್ತೆಯಾಗಿದೆ. ಇದು ಅತ್ಯಾಚಾರದಲ್ಲಿ ಒಬ್ಬರಿಗಿಂತ ಜಾಸ್ತಿ ಜನರು ಭಾಗಿಯಾಗಿದ್ದಾರೆ, ಇದೊಂದು ಸಾಮೂಹಿಕ ಅತ್ಯಾಚಾರ ಅನ್ನೋದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅರ್ಜಿಯಲ್ಲಿ ಪೋಷಕರು ಉಲ್ಲೇಖಿಸಿದ್ದಾರೆ.
ಪ್ರಕರಣ ನಡೆದ ಬಳಿಕ ಇಲ್ಲಿಯವರೆಗೂ ಅರೆಸ್ಟ್ ಆಗಿದ್ದು ಒಬ್ಬನೇ
ಒಂದು ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದರೆ, ಅದರ ಮೂಲಕ್ಕೆ ಹೋಗಿ ಸಂಬಂಧಪಟ್ಟವರನ್ನೆಲ್ಲಾ ತಂದು ಒಳಗೆ ಹಾಕುತ್ತಾರೆ. ಆದ್ರೆ ಕೊಲ್ಕಾತ್ತದಲ್ಲಿ ಆಗಿದ್ದು ಬೇರೆಯೇ. ಅತ್ಯಾಚಾರ ನಡೆದು ಆರು ದಿನಗಳು ಕಳೆದರೂ ಕೂಡ ಕೊಲ್ಕತ್ತಾ ಪೊಲೀಸರು ಸಂಜಯ್ ರಾಯ್ನ ಹೊರತಾಗಿ ಮತ್ಯಾರನ್ನು ಬಂಧಿಸಿಲ್ಲ. ಈ ಎಲ್ಲಾ ಬೆಳವಣಿಗೆಗಳು ನನ್ನ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಅನ್ನೋ ಸೂಚನೆಗಳನ್ನು ನೀಡುತ್ತಿವೆ. ಇದು ಒಬ್ಬನಿಂದ ಆದ ದುಷ್ಕೃತ್ಯವಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿವೆ ಎಂದು ಅರ್ಜಿದಾರರು ಘನ ನ್ಯಾಯಾಲಯದ ಮುಂದೆ ಸ್ಪಷ್ಟನೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ