150 ವರ್ಷ ಇತಿಹಾಸದ ಮರ ನೆನಪು ಮಾತ್ರ.. ಬೆಂಗಳೂರಿನ ಸಸ್ಯಕಾಶಿಯಲ್ಲಿ ಗಿಡ, ಮರಗಳ ಮೂಕ ರೋಧನ..

author-image
Ganesh
150 ವರ್ಷ ಇತಿಹಾಸದ ಮರ ನೆನಪು ಮಾತ್ರ.. ಬೆಂಗಳೂರಿನ ಸಸ್ಯಕಾಶಿಯಲ್ಲಿ ಗಿಡ, ಮರಗಳ ಮೂಕ ರೋಧನ..
Advertisment
  • ಮಳೆ ಮಾಡುತ್ತಿರುವ ಅವಾಂತರಕ್ಕೆ ಗಿಡಮರಗಳು ನೆಲಕ್ಕೆ ಬೀಳ್ತಿವೆ
  • ಲಾಲ್​ಬಾಗ್​​ನಲ್ಲಿ ಒಂದೂವರೆ ಶತಮಾನದ ಹಳೆಯ ಮರ ನೆಲಕ್ಕೆ ಬಿದ್ದಿದೆ
  • ಪ್ರವಾಸಿಗರಿಗೆ ಆಸರೆ ಆಗಿದ್ದ ಮರ, ಪರಿಸರ ಪ್ರೇಮಿಗಳಿಂದ ಬೇಸರ

ಗಾರ್ಡನ್ ಸಿಟಿಯಲ್ಲಿ ಮರಗಳ ಧರಶಾಹಿ ಪ್ರಕರಣಗಳು ಮುಂದುವರೆದಿವೆ. ಸಸ್ಯಕಾಶಿಯಲ್ಲಿ ಒಂದೂವರೆ ಶತಮಾನದ ಹಳೆಯ ಮರ ಧರಶಾಹಿಯಾದ್ರೆ, ಇತ್ತ ನಿತ್ಯ ಪ್ರಯಾಣಿಕರ ದಟ್ಟಣೆ, ವಾಹನ ದಟ್ಟಣೆ ಇರೋ ಜಾಗದಲ್ಲಿ ಕೊಂಬೆ ಮುರಿದು ಬಿದ್ದಿದೆ.

ಲಾಲ್ ಬಾಗ್

ಇಷ್ಟು ದಿನ ಲಾಲ್ ಬಾಗ್​ಗೆ ಬರ್ತಿದ್ದ ಜನರಿಗೆ ನೆರಳಿನ ಆಸರೆಯಾಗಿದ್ದ ಮರ ಇದೀಗ ಅಂಗಾತ ಮಲಗಿದೆ. ನಿನ್ನೆ ಸಂಜೆಯ ಗಾಳಿ ಮಳೆಗೆ ಲಾಲ್ ಬಾಗ್​ನ ಫೈಕಸ್ ಕನ್ನಿಂಗ್ ಹ್ಯಾಮಿ ಪ್ರಭೇದದ, ಒಂದೂವರೆ ಶತಮಾನದ ಹಳೆಯದಾದ ಮರ ಬುಡಸಮೇತ ನೆಲಕ್ಕುರುಳಿದೆ. ಬೃಹತ್ ಮರದಲ್ಲಿ 'V' ಆಕಾರದಲ್ಲಿ ಎರಡು ರೆಂಬೆಗಳು ಬೆಳೆದಿತ್ತು. ಬಟ್ ಮಧ್ಯ ಟೊಳ್ಳಾಗಿದ್ರಿಂದ, ಟೊಳ್ಳಾಗಿದ್ದ ಜಾಗ ಇಬ್ಭಾಗವಾಗಿ ಉರುಳಿ ಬಿದ್ದಿದೆ. 150 ವರ್ಷದ ಮರ ಬಿದ್ದಿರುವ ವಿಚಾರ ಗೊತ್ತಾಗಿ ನಿತ್ಯ ಸಸ್ಯ ಕಾಶಿಗೆ ಬರ್ತಿದ್ದ ಪರಿಸರ ಪ್ರೇಮಿಗಳು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿ.. ಬಲಿಷ್ಠ ಟೀಂ ಇಂಡಿಯಾದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ..!

publive-image

ನಿತ್ಯ ದೊಡ್ಡ ಮಟ್ಟದಲ್ಲಿ ವಾಹನ ದಟ್ಟಣೆ, ಜನ ದಟ್ಟಣೆ ಇರುವ ರಾಜಭವನ ರಸ್ತೆಯಲ್ಲೂ ಮರಗಳು ಮುರಿದು ಬಿದ್ದಿವೆ. ವಿವಿ ಟವರ್ ಕಟ್ಟಡದ ಮುಂಭಾಗದಲ್ಲಿ ಬೆಳಗ್ಗೆ 9.45ರ ಸುಮಾರಿಗೆ ಬೃಹತ್ ಮರದ ಕೊಂಬೆ ಬಿದ್ದಿದೆ. ಟ್ರಾಫಿಕ್ ಸಿಗ್ನಲ್ ಬಿದ್ದಿದ್ರಿಂದ ಕೊಂಬೆ ಬೀಳುವಾಗ ವಾಹನದ ಸಂಚಾರ ಇಲ್ಲದ ಕಾರಣ ಅನಾಹುತ ತಪ್ಪಿದೆ. ವಿಚಾರ ಗೊತ್ತಾಗ್ತಿದ್ದಂಗೆ ಸ್ಥಳಕ್ಕೆ ಬಂದ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಬಿಬಿಎಂಪಿ ಸಿಬ್ಬಂದಿಗೆ ಕಾಯದೆ ತಾವೇ ಕೊಂಬೆಯನ್ನ ತೆರವು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ.

ಇದನ್ನೂ ಓದಿ: ಏಕಾನಾ ಸ್ಟೇಡಿಯಂನಲ್ಲಿ RCB ಎಡವಿದ್ದು ಎಲ್ಲಿ? ನಾಯಕ ಜಿತೇಶ್​ ಶರ್ಮಾ ಹೊಣೆ ಮಾಡಿದ್ದು ಯಾರನ್ನ?

ಆಸ್ಪತ್ರೆ ಮೇಲೆ ಬಿದ್ದ ಬೃಹತ್ ಮರ

ಕೊರಮಂಗಲದಲ್ಲಿ ಮರದ ಕೊಂಬೆ ಬಿದ್ದು ಮೂಡಲಗಿರಿ ಮೃತಪಟ್ಟ ವಿಚಾರ ಇಲ್ಲಿಯ ಜನಮಾನಸದಿಂದ ಮಾಸುವ ಮುನ್ನವೇ ಕೋರಮಂಗಲದ ಅದೇ 5ನೇ ಕ್ರಾಸ್​ನಲ್ಲಿ ಮತ್ತೊಂದು ಬೃಹತ್ ಮರ ಧರಶಾಹಿಯಾಗಿದೆ. ಕೋರಮಂಗಲದ ಅಪೊಲೋ ಸ್ಪೆಕ್ಟ್ರಾ ಆಸ್ಪತ್ರೆಯ ಕಾಂಪೌಂಡ್ ಮೇಲೆ ಬೃಹತ್ ಮರ ಬಿದ್ದಿದ್ದು, ಎರಡು ಬೈಕ್​ಗಳಿಗೆ ಹಾನಿಯಾಗಿದೆ. ಆಸ್ಪತ್ರೆಯ ಮುಖ್ಯಧ್ವಾರದ ಮುಂಭಾಗದಲ್ಲಿಯೇ ಮರ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದನ್ನೂ ಓದಿ: ಶುಭ್ಮನ್‌ ಗಿಲ್‌ಗೆ ನಾಯಕನ ಪಟ್ಟ.. ಟೆಸ್ಟ್‌ ಸರಣಿಗೆ ಟೀಂ ಇಂಡಿಯಾ ಪ್ರಕಟ; ಯಾರಿಗೆಲ್ಲಾ ಚಾನ್ಸ್‌?

publive-image

ಒಟ್ಟಿನಲ್ಲಿ ನಗರದಲ್ಲಿ ಕೆಲವೆಡೆ ಗಾಳಿ ಮಳೆಗೆ ಮರಗಳು ಉರುಳುತ್ತಿದ್ರೆ ಮತ್ತೊಂದು ಕಡೆಯಲ್ಲಿ ಗಾಳಿ ಮಳೆ ಇಲ್ಲದಿದ್ರೂ ಮರಗಳು ಧರಶಾಹಿಯಾಗ್ತಿದೆ. ಸಿಲಿಕಾನ್ ಸಿಟಿಯ ಹಲವು ಮರಗಳ ಬುಡವೇ ಭದ್ರವಾಗದಿರೋದೇ ಅವಾಂತರಕ್ಕೆ ಕಾರಣವಾಗ್ತಿದೆ. ಮರಗಳ ಬುಡಕ್ಕೆ ಕಾಂಕ್ರೀಟ್ ಹಾಕೋದನ್ನ ನಿಲ್ಲಿಸಿದ್ರೆ ಇಂತಹ ದುರಂತಗಳಿಗೆ ಕಡಿವಾಣ ಬೀಳಲು ಸಾಧ್ಯ.

ಇದನ್ನೂ ಓದಿ: ಮತ್ತೆ ಬಂತು ಕೊರೊನಾ.. ಈ ಮೂರು ಸಾಧನಗಳು ನಿಮ್ಮ ಮನೆಯಲ್ಲಿ ಇರಲೇಬೇಕು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment