newsfirstkannada.com

ಅಬ್ಬಾ! ಪ್ರವಾಹ.. ಮುಂದುವರಿದ ಮಳೆಯ ಆರ್ಭಟ; 155 ಮಂದಿ ದಾರುಣ ಸಾವು

Share :

Published April 26, 2024 at 9:21pm

  ಕಳೆದ ಒಂದು ವಾರದಿಂದ ಅಬ್ಬರಿಸಿ ಬೊಬ್ಬರಿಯುತ್ತಿರುವ ಮಳೆರಾಯ

  ರಣಭೀಕರ ಪ್ರವಾಹದಲ್ಲಿ ಸಿಲುಕಿ ಬರೋಬ್ಬರಿ 155ಕ್ಕೂ ಹೆಚ್ಚು ಸಾವು

  ಮಳೆ ಸೃಷ್ಟಿಸಿದ ಅವಾಂತರಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಕಂಗಾಲು

ಪೂರ್ವ ಆಫ್ರಿಕಾದ ತಾಂಜೇನಿಯಾ ದೇಶ ವರುಣಾರ್ಭಟದಿಂದ ಅಕ್ಷರಶಃ ತತ್ತರಿಸಿ ಹೋಗಿದೆ. ಕಳೆದ ಎರಡು ವಾರಗಳಿಂದ ಸುರಿಯುತ್ತಿರೋ ರಕ್ಕಸ ರೂಪದ ಮಳೆಗೆ ಬರೋಬ್ಬರಿ 155 ಮಂದಿ ಸಾವನ್ನಪ್ಪಿದ್ದಾರೆ. ನೀರಿನ ಭೊರ್ಗರತೆಕ್ಕೆ ಕೊಚ್ಚಿ ಹೋಗುತ್ತಿರುವ ಕಾರುಗಳು.. ರಸ್ತೆಗಳಲ್ಲಿ ರಣಭೀಕರವಾಗಿ ಹರಿಯುತ್ತಿರೋ ನೀರಿನ ದೃಶ್ಯ ಕಂಡು ಬರುತ್ತಿದೆ.

ಆಫ್ರಿಕಾದ ತಾಂಜೇನಿಯಾದಲ್ಲಿ ಮಳೆಯಾರ್ಭಟ!
ಎಲ್ಲೆಲ್ಲೂ ಪ್ರವಾಹ ಪ್ರತಾಪ.. 155 ಮಂದಿ ಸಾವು
ಪೂರ್ವ ಆಫ್ರಿಕಾದ ತಾಂಜೇನಿಯಾ ದೇಶದಲ್ಲಿ ಕಳೆದ ಒಂದು ವಾರದಿಂದ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಪರಿಣಾಮ ತಾಂಜೇನಿಯಾದಲ್ಲಿ ಪ್ರವಾಹ ಉಂಟಾಗಿದೆ. ಮನೆಗಳು ಪ್ರವಾಹದಲ್ಲಿ ಮುಳುಗಿ ಹೋಗಿವೆ. ಭಾರೀ ಮಳೆಯಿಂದ ತಾಂಜೇನಿಯಾದಲ್ಲಿರುವ 26 ಪ್ರದೇಶಗಳ ಪೈಕಿ 18 ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.. ರಣಭೀಕರ ಪ್ರವಾಹದಲ್ಲಿ ಸಿಲುಕಿ ಬರೋಬ್ಬರಿ 155 ಮಂದಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಮನೆ ಕಳೆದುಕೊಂಡ 51 ಸಾವಿರ ಕುಟುಂಬಗಳು
ಏಪ್ರಿಲ್​​ ಮತ್ತು ಮೇ ತಿಂಗಳಲ್ಲಿ ತಾಂಜೇನಿಯಾದಲ್ಲಿ ಮಳೆಗಾಲ ಪ್ರಾರಂಭವಾಗುತ್ತದೆ. ಆದ್ರೆ ಈ ಬಾರಿ ಸಾಮಾನ್ಯಕ್ಕಿಂತ ಅತಿ ಹೆಚ್ಚು ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಸೃಷ್ಟಿಸಿರೋ ಅವಾಂತರಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಪರಿಣಾಮ ಎದುರಿಸುತ್ತಿದ್ದಾರೆ. ಸುಮಾರು 51 ಸಾವಿರ ಕುಟುಂಬಗಳು ಮನೆ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಪ್ರಜ್ವಲ್ ರೇವಣ್ಣ, ಶ್ರೇಯಸ್‌ ಪಟೇಲ್ ಬೆಂಬಲಿಗರ ಮಾರಾಮಾರಿ; ಓರ್ವನ ಸ್ಥಿತಿ ಗಂಭೀರ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ
ತಾಂಜೇನಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ.. ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಹೆಚ್ಚು ಹಾನಿಗೊಳಗಾದ ಪ್ರದೇಶಗಳ ನಿವಾಸಿಗಳ ರಕ್ಷಣೆಗೆ ತಾಂಜೇನಿಯಾದ ರಕ್ಷಣಾ ಪಡೆಗಳು ಧಾವಿಸಿದೆ.. ಮುಂದಿನ ದಿನಗಳಲ್ಲೂ ಭಾರೀಯಾಗುವ ಸಾಧ್ಯತೆ ಇದೆ.. ಹೀಗಾಗಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಲಾಗಿದೆ.. ಜನರಿಗೆ ಮನೆಯಿಂದ ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗಿದೆ.

ಕೀನ್ಯಾ-ಬುರುಂಡಿಯಲ್ಲೂ ವರುಣನ ಆರ್ಭಟ
ಪೂರ್ವ ಆಫ್ರಿಕಾ ಪ್ರದೇಶಗಳಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗುತ್ತಿದ್ದು, ತಾಂಜೇನಿಯಾದ ನೆರೆಯ ದೇಶಗಳಾದ ಕೀನ್ಯಾ ಹಾಗೂ ಬುರುಂಡಿಯಲ್ಲೂ ಸಹ ಪ್ರವಾಹ ಉಂಟಾಗಿದೆ. ಕೀನ್ಯಾದಲ್ಲಿ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಜನರನ್ನ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ 4 ದಿನಗಳ ಕಾಲ ಭರ್ಜರಿ ಮಳೆ; ಹವಾಮಾನ ಇಲಾಖೆ ಹೇಳಿದ್ದೇನು?

ಹವಾಮಾನ ಬದಲಾವಣೆಯೇ ಪ್ರವಾಹಕ್ಕೆ ಕಾರಣನಾ?
ಕಳೆದ ಒಂದು ವಾರದ ಹಿಂದೆ ಮರುಭೂಮಿ ನಗರ ದುಬೈ ಮಹಾಮಳೆಗೆ ತತ್ತರಿಸಿ ಹೋಗಿತ್ತು.. ಈಗ ಆಫ್ರಿಕಾದ ಹಲವು ದೇಶಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು, ಇದಕ್ಕೆ ಜಾಗತಿಕ ತಾಪಮಾನದಿಂದ ಬದಲಾಗುತ್ತಿರುವ ಹವಾಮಾನ ಬದಲಾವಣೆಯೇ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ತಾಂಜೇನಿಯಾದಲ್ಲಿ ಸದ್ಯ ಮಳೆ ಪ್ರಮಾಣ ತುಸು ತಣ್ಣಗಾಗಿದೆ. ಆದ್ರೆ ಮತ್ತೆ ಮಳೆಯಾಗುವ ಮುನ್ಸೂಚನೆ ಇದ್ದು, ಜನ ಕಂಗಾಲಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ! ಪ್ರವಾಹ.. ಮುಂದುವರಿದ ಮಳೆಯ ಆರ್ಭಟ; 155 ಮಂದಿ ದಾರುಣ ಸಾವು

https://newsfirstlive.com/wp-content/uploads/2024/04/rain17.jpg

Load More