ದರ್ಶನ್​ ಅವರನ್ನು ಪೊಲೀಸ್​ ಕಸ್ಟಡಿಗೆ ನೀಡಲು.. ಒಂದಲ್ಲ, ಬರೋಬ್ಬರಿ 16 ಕಾರಣಗಳು! ಏನವು?

author-image
Ganesh Nachikethu
Updated On
BREAKING: ‘ನಾನು ಬಳ್ಳಾರಿ ಜೈಲಿಗೆ ಹೋಗಲ್ಲ’- ಪರಪ್ಪನ ಅಗ್ರಹಾರದಲ್ಲಿ ಹಠ ಹಿಡಿದು ಕೂತ ದರ್ಶನ್!
Advertisment
  • ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್​ ಸೇರಿ ನಾಲ್ವರು ಪೊಲೀಸ್​ ಕಸ್ಟಡಿಗೆ
  • ದರ್ಶನ್​ ಸೇರಿ ನಾಲ್ವರನ್ನು ಮತ್ತೆ ಪೊಲೀಸ್​ ಕಸ್ಟಡಿಗೆ ನೀಡಲು ಕಾರಣವೇನು?
  • ನಟ ದರ್ಶನ್​ ಅವರನ್ನು ಪೊಲೀಸ್​ ಕಸ್ಟಡಿಗೆ ಕೇಳಲು ಇಲ್ಲಿವೆ ಹಲವು ರೀಸನ್ಸ್​​!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್​ ಸೇರಿ ನಾಲ್ವರನ್ನು ಕೋರ್ಟ್​ ಮತ್ತೆ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶಿಸಿದೆ. ದರ್ಶನ್​ ಮತ್ತು ಗ್ಯಾಂಗ್​​ ಅನ್ನು ಇಂದು ಕೋರ್ಟ್​ನಲ್ಲಿ ಹಾಜರು ಪಡಿಸಲಾಯ್ತು. ಈ ಸಂದರ್ಭದಲ್ಲಿ ದರ್ಶನ್​ ಅವರನ್ನು ಮತ್ತೆ ಪೊಲೀಸ್ರು ಕಸ್ಟಡಿಗೆ ಕೇಳಿದ್ರು. ಹಾಗಾಗಿ ಕೋರ್ಟ್​​​ 2 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿದೆ.

ದರ್ಶನ್​ ಅವರನ್ನು ಪೊಲೀಸ್​ ಕಸ್ಟಡಿಗೆ ಕೇಳಲು ಹಲವು ಕಾರಣಗಳೇನು?

1. ಪೊಲೀಸ್​ ಕಸ್ಟಡಿಗೆ ನೀಡಲಾಗದ ಎ2, ಎ9, ಎ10 ಮತ್ತು ಎ14 ಆರೋಪಿಗಳು ಪ್ರಕರಣದಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸದೇ ಕೃತ್ಯಕ್ಕೆ ಸಂಬಂಧಿಸಿದಂತೆ ವಿಚಾರಗಳನ್ನು ಮರೆ ಮಾಚುತ್ತಾ ಬಂದಿದ್ದು ಇವರುಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿರುತ್ತದೆ.

2. ದಿನಾಂಕ 19/06/2024 ರಂದು ಎ2 ಆರೋಪಿಯ ಮನೆಯಿಂದ ಮತ್ತೆ 37,40,000/- ರೂಗಳ ನಗದು ಹಣವನ್ನು ವಶಪಡಿಸಿಕೊಂಡಿದ್ದು ಹಾಗೂ ಆರೋಪಿಯು ತನ್ನ ಹೆಂಡತಿಗೆ ನೀಡಿದ್ದ ರೂ 3,00,000/- ಹಣವನ್ನು ದಿನಾಂಕ 19/06/2024 ರಂದು ಅಮಾನತ್ತು ಪಡಿಸಿದ್ದು ಸದರಿ ಹಣದ ಮೂಲದ ಬಗ್ಗೆ ಎ2 ಆರೋಪಿಯಿಂದ ಮಾಹಿತಿ ಪಡೆದುಕೊಂಡು ದಾಖಲಾತಿಗಳನ್ನು ಸಂಗ್ರಹಿಸಿಬೇಕಾಗಿರುತ್ತದೆ.

3. ಎ2 ಆರೋಪಿಯು ಕೃತ್ಯದ ನಂತರ ಹಲವಾರು ವ್ಯಕ್ತಿಗಳನ್ನು ಸಂಪರ್ಕಿಸಿದ್ದು ಅದರ ಉದ್ದೇಶ ಮತ್ತು ಕಾರಣವನ್ನು ಎ2 ಆರೋಪಿಯ ಉಪಸ್ಥಿತಿಯಲ್ಲಿ ವಿಚಾರಣೆ ಮಾಡಬೇಕಾಗಿರುತ್ತದೆ.

4. ಪ್ರಕರಣದಲ್ಲಿ ಎ14 ಆರೋಪಿ ಪ್ರದೇಶ್ ಸಾಕ್ಷ್ಯನಾಶ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಈತನೂ ಸಹ ತನಿಖೆಗೆ ಸರಿಯಾಗಿ ಸ್ಪಂದಿಸದೇ ವಿಚಾರಗಳನ್ನು ಮರೆ ಮಾಚುತ್ತಿದ್ದು ಈತನು ಮತ್ತೊಬ್ಬ ಆಸಾಮಿಯನ್ನು ಕೃತ್ಯದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದ ಬಗ್ಗೆ ಮಾಹಿತಿ ತನಿಖೆಯಲ್ಲಿ ತಿಳಿದು ಬಂದಿದ್ದು ಈ ಬಗ್ಗೆ ಆರೋಪಿ ತನಿಖೆಗೆ ಸಹಕರಿಸುತ್ತಿಲ್ಲವಾದ್ದರಿಂದ ಯಾದ ವ್ಯಕ್ತಿ ತನ್ನ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯ ಬಗ್ಗೆ ಆತನಿಗೆ ಮಾತ್ರವೇ ತಿಳಿದಿದ್ದು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿರುತ್ತದೆ.

5. ಎ9 ಆರೋಪಿಯು ಎಲೆಕ್ಟಿಕ್ ಚಾರ್ಜ್ ಟಾರ್ಚ್ ಅನ್ನು ಎಲ್ಲಿ ಖರೀದಿ ಮಾಡಿರುವುದಾಗಿ ಸರಿಯಾಗಿ ತಿಳಿಸದೇ ವಿಚಾರಗಳನ್ನು ಮರೆ ಮಾಡುತ್ತಿದ್ದು ಆತನನ್ನು ವಿಚಾರಣೆಗೊಳಪಡಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.

6. ಪ್ರಕರಣದಲ್ಲಿನ ಎ9 ಆರೋಪಿಯು ಕೃತ್ಯ ನಡೆದ ಸ್ಥಳಕ್ಕೆ ಬೇರೆ ವ್ಯಕ್ತಿಗಳ ಜೊತೆಯಲ್ಲಿ ಬಂದು ಹೋದ ಬಗ್ಗೆ ಬಂದಿದ್ದ ಬಗ್ಗೆ ಹಾಗೂ ಹೋದ ಬಗ್ಗೆ ವಿಚಾರಣೆ ನಡೆಸಬೇಕಾಗಿರುತ್ತದೆ.

7. ಪ್ರಕರಣದ ಎ10 ಆರೋಪಿ ಮೊಬೈಲ್ ಪೋನ್‌ನಲ್ಲಿ ಅತೀ ಮುಖ್ಯವಾದ ಸಾಕ್ಷ್ಯಾಧಾರ ದೊರೆತಿದ್ದು ಅದನ್ನು ಕಳುಹಿಸಿದ್ದ ವ್ಯಕ್ತಿ ಯಾರೆಂಬ ಬಗ್ಗೆ ಎ10 ಆರೋಪಿಯ ಉಪಸ್ಥಿತಿಯಲ್ಲಿ ವಿಚಾರಣೆ ಮಾಡಬೇಕಾಗಿರುತ್ತದೆ.

8. ಕೃತ್ಯ ನಡೆದಿದ್ದ ಸ್ಥಳದ ಶೆಡ್‌ ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಹಲವಾರು ವ್ಯಕ್ತಿಗಳು ಸಾಕ್ಷ್ಯ ನುಡಿಯದಂತೆ ಹಣದ ಆಮಿಷ ನೀಡುತ್ತಿರುವುದು ತಿಳಿದು ಬಂದಿದ್ದು ಸದರಿ ಆಸಾಮಿಗಳು ಆರೋಪಿಗಳೊಂದಿಗೆ ಹೊಂದಿರುವ ಸಂಪರ್ಕದ ಬಗ್ಗೆ ವಿಚಾರಣೆ ನಡೆಸಬೇಕಾಗಿರುತ್ತದೆ.

9. ಪ್ರಕರಣದ ಎ2 ಆರೋಪಿಯು ಎ10 ಮತ್ತು ಎ13 ಆರೋಪಿಗಳ ಮುಖಾಂತರ ತಮ್ಮ ಕೃತ್ಯವನ್ನು ಮರೆಮಾಚಲು ಎ16 ಆರೋಪಿಗೆ ರೂ 5,00,000/- ಹಣವನ್ನು ನೀಡಿದ್ದು ಈ ಹಣವನ್ನು ಎ16 ಆರೋಪಿಯು ಪಡೆದುಕೊಂಡು ಅದನ್ನು ತನ್ನ ಸ್ನೇಹಿತನಿಗೆ ನೀಡಿದ್ದಾಗಿ ತಿಳಿಸಿದ್ದು ಆದರೆ ಸದರಿ ಹಣ ಪಡೆದ ಆಸಾಮಿಯು ಪತ್ತೆಯಾಗದೇ ಇದ್ದು ಆತನ ಪತ್ತೆ ಕಾರ್ಯ ಮುಂದುವರೆದಿದ್ದು ಹಣವನ್ನು ಅಮಾನತ್ತು ಪಡಿಸಬೇಕಾಗಿರುತ್ತದೆ.

10. ಪ್ರಕರಣದ ಎ2 ಆರೋಪಿಯು ಎ10 ಮತ್ತು ಎ13 ಆರೋಪಿಗಳ ಮುಖಾಂತರ ತಮ್ಮ ಕೃತ್ಯವನ್ನು ಮರೆಮಾಚಲು ಎ16 ಆರೋಪಿಗೆ ರೂ 5,00,000/- ಹಣವನ್ನು ನೀಡಿದ್ದು ಈ ಹಣವನ್ನು ಎ16 ಆರೋಪಿಯು ಪಡೆದುಕೊಂಡು ಅದನ್ನು ತನ್ನ ಸ್ನೇಹಿತನಿಗೆ ನೀಡಿದ್ದಾಗಿ ತಿಳಿಸಿದ್ದು ಆದರೆ ಸದರಿ ಹಣ ಪಡೆದ ಆಸಾಮಿಯು ಪತ್ತೆಯಾಗದೇ ಇದ್ದು ಆತನ ಪತ್ತೆ ಕಾರ್ಯ ಮುಂದುವರೆದಿದ್ದು ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ಸದರಿ ತನಿಖೆಗೆ ಅಡ್ಡಿಯಾಗುವ ಸಂಭವವಿರುತ್ತದೆ.

11. ಪ್ರಕರಣದಲ್ಲಿ ಆರೋಪಿಗಳು ಕೃತ್ಯ ವೆಸಗಲು ಬಳಸಿದ್ದ ವಸ್ತುಗಳನ್ನು ಹಾಗೂ ಬೌತಿಕ ಸಾಕ್ಷಾಧಾರಗಳನ್ನು ಅಮಾನತ್ತು ಪಡಿಸಿಕೊಂಡಿದ್ದು ಸದರಿ ವಸ್ತುಗಳನ್ನು ಎಚ್.ಎಸ್.ಎಲ್ ತಜ್ಞರಿಗೆ ಕಳುಹಿಸಿ ವರದಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.

12. ಪ್ರಕರಣದ ಆರೋಪಿಗಳು ಕೃತ್ಯವೆಸಗಲು ಹಾಗೂ ಕೃತ್ಯದ ನಂತರ ಸಾಕ್ಷಿನಾಶ ಪಡಿಸಲು ಶವವನ್ನು ಸಾಗಿಸಲು ಹಲವು ವಾಹನಗಳನ್ನು ಮತ್ತು ಬಳಸಂಚು ರೂಪಿಸಲು ಹಲವು ಸ್ಥಳಗಳನ್ನು ಬಳಸಿಕೊಂಡಿದ್ದು ವಾಹನಗಳ ವಿವರಗಳನ್ನು ಹಾಗೂ ಸ್ಥಳಗಳ ಮಾಲೀಕತ್ವದ ಕಂದಾಯದ ದಾಖಲಾತಿಗಳನ್ನು ಸಂಗ್ರಹಿಸಿಸಬೇಕಾಗಿರುತ್ತದೆ. ‎‫عمرة‬‎

13. ಆರೋಪಿಗಳು ಕೃತ್ಯ ವೆಸಗಲು ಬಳಸಿದ್ದ ವಸ್ತುಗಳನ್ನು ಶವಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳಿಗೆ ಕಳುಹಿಸಿ ಅಭಿಪ್ರಾಯ ವರದಿಯನ್ನು ಸಂಗ್ರಹಿಸಬೇಕಾಗಿರುತ್ತದೆ.

14. ಪ್ರಕರಣದಲ್ಲಿ ಇನ್ನೂ ಹಲವಾರು ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿರುತ್ತದೆ. ಈ ಸಮಯದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ತಮ್ಮ ಪ್ರಭಾವ ಬಳಸಿ ಸಾಕ್ಷ್ಯಾನಾಶ ಮಾಡಿ ಪ್ರಕರಣದ ತನಿಖೆಗೆ ಅಡ್ಡಿಪಡಿಸುವ ಸಾದ್ಯತೆ ಹೆಚ್ಚಾಗಿರುತ್ತದೆ.

15. ಪ್ರಕರಣದ ಆರೋಪಿಗಳು ಪ್ರಭಾವಿಗಳು ಹಾಗೂ ಹಣಬಲ ಮತ್ತು ಅಭಿಮಾನಿ ಬಳಗವನ್ನು ಹೊಂದಿದ್ದು ಇವರುಗಳಿಗೆ ಜಾಮೀನು ನೀಡಿದ್ದಲ್ಲಿ ತಮ್ಮ ಪ್ರಭಾವಗಳನ್ನು ಬಳಸಿ ಪ್ರಕರಣದ ಸಾಕ್ಷಿದಾರರುಗಳಿಗೆ ಬೆದರಿಕೆ ಹಾಕುವ ಮತ್ತು ವ್ಯವಸ್ಥಿತ ರೀತಿಯನ್ನು ಸಾಕ್ಷ್ಯನಾಶ ಪಡಿಸುವ ಸಾದ್ಯತೆಗಳು ಹೆಚ್ಚಾಗಿರುತ್ತದೆ.

16. ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಕೃತ್ಯದಲ್ಲಿ, ಒಳಸಂಚಿನಲ್ಲಿ, ಮತ್ತು ಸಾಕ್ಷ್ಯನಾಶದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷಿದಾರರ ಹೇಳಿಕೆಗಳು, ತಾಂತ್ರಿಕ ಸಾಕ್ಷ್ಯಗಳಲ್ಲಿ ಕಂಡು ಬಂದಿದ್ದು ಜೀವವಧಿ ಶಿಕ್ಷೆಯ ಕೃತ್ಯವಗಿದ್ದು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದೇ ನ್ಯಾಯಾಂಗ ಬಂಧನಕ್ಕೆ ಕಳುಹಿಸಬೇಕಾಗಿರುವುದು ಅವಶ್ಯವಾಗಿರುತ್ತದೆ.

ಇದನ್ನೂ ಓದಿ:ಪವಿತ್ರಾ ಜೊತೆ ಜೈಲು ಪಾಲಾದವರು ಯಾರು? ದರ್ಶನ್ ಗ್ಯಾಂಗ್‌ನಲ್ಲಿ ಮತ್ತೆ ಕಸ್ಟಡಿಗೆ ಹೋಗಿದ್ಯಾರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment