/newsfirstlive-kannada/media/post_attachments/wp-content/uploads/2024/09/16-YEAR-BOY.jpg)
ಚಿಕ್ಕಮಗಳೂರು: ಮಕ್ಕಳ ಆಸೆ ನೂರಾರು, ಓದಿನಾಚೆಗೆ ಇನ್ನೇನನ್ನೋ ಇಷ್ಟಪಟ್ಟಿರುತ್ತಾರೆ. ಅಲ್ಲಿ ಏನೋ ಸಾಧನೆ ಮಾಡಬೇಕು ಅಂದುಕೊಂಡಿರುತ್ತಾರೆ. ಆದ್ರೆ ವಿದ್ಯಾಭ್ಯಾಸ ಎಂಬುದೊಂದು ಎದುರು ಇರುತ್ತದೆ. ಅದು ಕೂಡ ಬದುಕಿಗೆ ಮುಖ್ಯವೇ. ಪೋಷಕರು ಹೆಚ್ಚು ಮಹತ್ವ ಕೊಡುವುದೇ ವಿದ್ಯಾಭ್ಯಾಸಕ್ಕೆ. ಈ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ದುಕೊಳ್ಳಲು ಗೊಂದಲದಲ್ಲಿ ಇರುತ್ತಾರೆ. ಇಂತಹುದೇ ಗೊಂದಲಕ್ಕೆ ಸಿಲುಕಿದ16 ವರ್ಷದ ಧ್ರುವ ಎಂಬ ವಿದ್ಯಾರ್ಥಿ.ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಪಿಜಿಯೊಂದರಲ್ಲಿ ಜೀವ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ:ಧರ್ಮಸ್ಥಳ ಹೆದ್ದಾರಿಯಲ್ಲಿ ಭೀಕರ ಅಪಘಾತ.. ಚಿಕ್ಕ ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು
10ನೇ ತರಗತಿ ಓದುತ್ತಿದ್ದ ಧ್ರುವನಿಗೆ ಕೊಳಲು ಊದುವುದು ಎಂದರೆ ಪಂಚಪ್ರಾಣ. ಅದರಲ್ಲಿಯೇ ಕಳೆದು ಹೋಗಿದ್ದ ಹುಡುಗ. ಶಿವಮೊಗ್ಗ ಜಿಲ್ಲೆ ಭಧ್ರಾವತಿ ಮೂಲದ ಧ್ರುವ, ಪೋಷಕರ ಬಳಿ ನನಗೆ ಓದಲು ಇಷ್ಟವಿಲ್ಲ, ಕೊಳಲು ನುಡಿಸುವ ಕ್ಲಾಸ್​​ಗೆ ಹೋಗ್ತೀನಿ ಅಂತ ಪದೇ ಪದೇ ಹೇಳಿದ್ದನಂತೆ. ಅದಕ್ಕೆ ಪೋಷಕರು 10ನೇ ತರಗತಿ ಮುಗಿಯಲಿ ಮಗು ಆಮೇಲೆ ಹೋಗು. ಈಗ ಓದಿನ ಕಡೆ ಗಮನಕೊಡು ಅಂದಿದ್ದಾರೆ ಹೆತ್ತವರು. ಇಷ್ಟಕ್ಕೆ ಮನನೊಂದ ಹುಡುಗ ದುಡುಕಿನ ನಿರ್ಧಾರ ತೆಗೆದುಕೊಂಡು ತನ್ನ ಜೀವವನ್ನು ಕಳೆದುಕೊಂಡಿದ್ದಾನೆ.
/newsfirstlive-kannada/media/post_attachments/wp-content/uploads/2024/09/16-YEAR-BOY-1.jpg)
ಇದನ್ನೂ ಓದಿ: ಬಾಳೆಹಣ್ಣಿನ ಹೆಸರಲ್ಲಿ ಮಾರಲಾಗುತ್ತಿದೆ ಕ್ಯಾನ್ಸರ್; ನೀವು ತಿನ್ನುವ ಈ ಫಲದ ಬಗ್ಗೆ ಇರಲಿ ಎಚ್ಚರ
ಧ್ರುವನಿಗೆ ಈಗ ಮಧ್ಯ ವಾರ್ಷಿಕ ಪರೀಕ್ಷೆ ನಡೆದಿದ್ದವು. ಪರೀಕ್ಷೆಗೆ ಬರದ ಕಾರಣ ಅಜ್ಜನಿಗೆ ಶಾಲಾ ಮುಖ್ಯಸ್ಥರು ಕರೆ ಮಾಡಿದ್ದಾರೆ.ಧ್ರುವ ಪರೀಕ್ಷೆಗೆ ಗೈರಾಗಿದ್ದರ ಬಗ್ಗೆ ಹೇಳಿದ್ದಾರೆ. ವಿಷಯ ತಿಳಿದು ಏನಾಯ್ತು ಅಂತ ಗಾಬರಿಗೊಂಡು ಅವನಿದ್ದ ಪಿಜಿಗೆ ಓಡೋಡಿ ಬಂದಿದ್ದಾರೆ ಧ್ರುವನ ಅಜ್ಜ. ಬಂದು ನೋಡಿದಾಗ 16 ವರ್ಷದ ಹುಡುಗ ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us