ಪುಟ್ಟ ಹುಡುಗ ಹೇಳಿದ ಡ್ರಗ್ಸ್ ಕಥೆಗೆ ದುನಿಯಾ ವಿಜಿ ಶಾಕ್
16 ವರ್ಷದ ಬಾಲಕನೊಬ್ಬನನ್ನ ಗಾಂಜಾ ಸೇದ್ತಿದ್ದ ಕಥೆ ಇದು
ಭೀಮ ಸಿನಿಮಾದ ಮೂಲಕ ಜಾಗೃತಿ ಮೂಡಿಸುತ್ತಿರೋ ವಿಜಯ್
ಸಿಲಿಕಾನ್ ಸಿಟಿ, ಐಟಿ ಸಿಟಿ, ಉದ್ಯಾನಗರಿ ಅಂತೆಲ್ಲಾ ಕರೆಸಿಕೊಳ್ಳೋ ಬೆಂಗಳೂರಲ್ಲಿ ಡ್ರಗ್ಸ್ ಭೂತವೂ ಓಡಾಡ್ತಿರೋದು ಮುಚ್ಚಿಟ್ಟ ಸತ್ಯವೇನೂ ಅಲ್ಲ. ಸಾಮಾನ್ಯ ಗಲ್ಲಿಯಿಂದ ಹಿಡಿದು ಸೆಲೆಬ್ರಿಟಿಗಳ ಮನೆಯವರೆಗೂ ಈ ಅಮಲಿನ ಜಾಲ ವ್ಯಾಪಿಸಿದೆ. ಇದೀಗ ದುನಿಯಾ ವಿಜಯ್ ಭೀಮನ ಅವತಾರದಲ್ಲಿ ಬಂದು ಡ್ರಗ್ಸ್ನ ಸತ್ಯ ಬಿಚ್ಚಿಡ್ತಿದ್ದಾರೆ. ರಿಯಲ್ ಸ್ಥಿತಿಯನ್ನ ರಿಯಲ್ ಆಗಿಯೇ ಬಹಿರಂಗ ಪಡಿಸ್ತಿದ್ದಾರೆ.
ಕೌನ್ ರೆ ಉನೇ ಅಂತ ರಾಜಧಾನಿಯ ಗಲ್ಲಿಗಲ್ಲಿಗಳಲ್ಲಿ ಘಾಟು ಹೊಡೀತಿದ್ದ ಗಾಂಜಾ, ಡ್ರಗ್ಸ್ನ ರಿಯಾಲಿಟಿಯನ್ನ ದುನಿಯಾ ವಿಜಯ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ರು. ಇದು ಸಿನಿಮಾಗೆ ಮಾತ್ರ ಸೀಮಿತವಲ್ಲ. ಬದಲಾಗಿ ರಿಯಲ್ ಲೈಫ್ನಲ್ಲೂ ಡ್ರಗ್ಸ್ ವಿರುದ್ಧ ಹೋರಾಟಕ್ಕೆ ಧುಮುಕಿದ್ದಾರೆ.
ಬೆಂಗಳೂರಿನಲ್ಲಿ ಹೈಸ್ಕೂಲ್ ಮಕ್ಕಳಿಗೂ ಸಿಕ್ತಿದ್ಯಾ ಗಾಂಜಾ?
16 ವರ್ಷದ ಬಾಲಕನೊಬ್ಬನನ್ನ ದುನಿಯಾ ವಿಜಯ್ ಮಾತನಾಡಿಸಿದ್ದು, ಆತ ತಾನು ಗಾಂಜಾ ಸೇದ್ತಿದ್ದ ಕಥೆಯನ್ನ ಬಿಚ್ಚಿಟ್ಟಿದ್ದಾನೆ. ಈ ಬಾಲಕನ ಪುಟ್ಟ ಧ್ವನಿಯಲ್ಲಿ ಗಾಂಜಾದಂತ ಭಯಾನಕ ಸತ್ಯ ಹೊರಬಿದ್ದಿದೆ. ಈತ ಇದಕ್ಕಾಗಿ ತನ್ನದೇ ಮನೆಯಲ್ಲೇ ಕಳ್ಳತನವನ್ನೂ ಮಾಡ್ತಿದ್ದನಂತೆ.
ಪಟ್ಲಿ ಅನ್ನೋ ಪೆಡಂಭೂತದಿಂದ ಸದ್ಯ ಈ ಬಾಲಕ ಬಚಾವಾಗಿದ್ದಾರೆ. ರೀಹ್ಯಾಬ್ಗೆ ಸೇರಿ ಈ ಬಾಲಕ ಗಾಂಜಾದಿಂದ ಮುಕ್ತನಾಗಿದ್ದಾರೆ. ಆದ್ರೆ ಇನ್ನೂ ಹಲವರು ವಿಧವಿಧವಾದ ಅಮಲಿನ ಪದಾರ್ಥಕ್ಕೆ ದಾಸರಾಗಿದ್ದಾರೆ. ಕಾಲೇಜು ಯುವತಿಯರೂ ಡ್ರಗ್ಸ್ನ ಸುಳಿಯಲ್ಲಿ ಸಿಲುಕಿರೋದನ್ನೂ ವಿಜಯ್ ಬಯಲು ಮಾಡಿದ್ದಾರೆ.
ನೋಡಿದ್ರಲ್ವಾ ಹೆಣ್ಮಕ್ಕಳೇ ಹೆಚ್ಚಾಗಿ ಈ ಡ್ರಗ್ಸ್ ಜಾಲದಲ್ಲಿ ಸಿಲುಕಿ ವಿಲವಿಲ ಅಂತಿದ್ದಾರಂತೆ. ಇದಿಷ್ಟೆ ಅಲ್ಲದೇ ಮಾತ್ರೆಗಳಿಂದಲೂ ಅಮಲೇರಿಸಿಕೊಳ್ಳೋ ಭಯಾನಕ ಘಟನೆಯೂ ಬೆಂಗಳೂರು ಸಾಕ್ಷಿಯಾಗ್ತಿದೆ.
ಸದ್ಯ ಈ ಡ್ರಗ್ಸ್ ಬಗ್ಗೆ ಯುವಸಮೂಹದಲ್ಲಿ ಜಾಗೃತಿ ಮೂಡಿಸೋ ಕೆಲಸವನ್ನ ದುನಿಯಾ ವಿಜಯ್ ಮಾಡ್ತಿದ್ದಾರೆ. ಸಿನಿಮಾದ ಜೊತೆಗೆ ಇಂಥಾ ಪ್ರಯತ್ನ ನಿರಂತರವಾಗಿರಲಿ. ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನೂ ಕೂಡ ಈ ದೇಶದ ಭವಿಷ್ಯವನ್ನ ಡ್ರಗ್ಸ್ ಸುಳಿಗೆ ಸಿಲುಕದಂತೆ ತಡೆಯಬೇಕಿದೆ. ಪೊಲೀಸರು ಕೂಡ ಈ ಬಗ್ಗೆ ಕ್ರಮ ವಹಿಸೋದು ಅತೀ ಅಗತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ