ಸಾವನ್ನಪ್ಪಿದ ಆತ್ಮೀಯ! 80kmನಿಂದ ಹುಡುಕಿಕೊಂಡು ಬಂದ 17 ಆನೆಗಳ ಹಿಂಡಿನ ಗ್ರೇಟ್​ ಸ್ಟೋರಿಯಿದು!

author-image
AS Harshith
Updated On
ಸಾವನ್ನಪ್ಪಿದ ಆತ್ಮೀಯ! 80kmನಿಂದ ಹುಡುಕಿಕೊಂಡು ಬಂದ 17 ಆನೆಗಳ ಹಿಂಡಿನ ಗ್ರೇಟ್​ ಸ್ಟೋರಿಯಿದು!
Advertisment
  • ಪ್ರಾಣಿಗಳೇ ಗುಣದಲಿ ಮೇಲು ಅನ್ನೋದಕ್ಕೆ ಇದೇ ಸಾಕ್ಷಿ
  • ಮನುಷ್ಯನಿಗೂ ಮೀರಿದ ಬಂಧ ಆನೆಯದ್ದು ಎಂದು ಇಲ್ಲಿ ಫ್ರೂವ್​ ಆಗಿದೆ
  • ಅಂತಿಮ ನಮನ ಸಲ್ಲಿಸಲು 80 ಕಿಲೋ ಮೀಟರ್ ದೂರದಿಂದ ಬಂದ ಆನೆಗಳು

ಹಣ ಅಂತಸ್ತು ಅಂತ ಬಂದ್ರೆ ಮನುಷ್ಟ ತನ್ನವರನ್ನೇ ಮರೆಯುತ್ತಾನೆ. ಸತ್ತಿದ್ದಾರೋ ಬದುಕಿದ್ದಾರೋ ಅಂತ ನೋಡೋಕು ಹೋಗಲ್ಲ. ಅಂತದ್ರಲ್ಲಿ ಮಷ್ಯತ್ವಕ್ಕಿಂತಲೂ ಪ್ರಾಣಿಗಳಲ್ಲೇ ಸಂಬಂಧ ಗಟ್ಟಿ ಅನ್ನೋದು ಆನೆಯ ಗುಂಪಿನ ಕತೆಯೊಂದು ತೆರೆದಿಟ್ಟಿದೆ. ಒಂದು ಆನೆ ಸಾವನ್ನಪ್ಪಿದ್ಕೆ ಹತ್ತಾರು ಕಿಲೋ ಮೀಟರ್ ಹುಡುಕಿಕೊಂಡು ಹೋಗಿ ಆನೆಗಳ ಹಿಂಡು ಅಂತಿಮ ನಮನ ಸಲ್ಲಿಸಿವೆ.

ಆನೆ ನಡೆದಿದ್ದೇ ದಾರಿ. ಊರು ಯಾವುದೇ ಇರ್ಲಿ. ಜನ ಯಾರೇ ಇರ್ಲಿ. ನುಗ್ಗೋದೆ ಅದರ ಗುರಿ. ಇದನ್ನ ಹೊರತುಪಡಿಸಿದ್ರೆ ಸಂಬಂಧಕ್ಕೆ ಗಜಪಡೆ ಎಷ್ಟು ಬೆಲೆ ಕೊಡುತ್ತೆ ಅನ್ನೋದಕ್ಕೆ ಇಲ್ಲೊಂದು ನೈಜ ಘಟನೆ ಸಾಕ್ಷಿಯಾಗಿದೆ. ಅತಿ ದೊಡ್ಡ ದೇಹ ಹೊಂದಿರೋ ಆನೆಯ ಸೂಕ್ಷ್ಮ ಮನಸ್ಸಿನ ಪರಿಚಯವಾಗಿದೆ. ಪ್ರಾಣಿಗಳೇ ಗುಣದಲಿ ಮೇಲು ಮಾನವ ಅವಕ್ಕಿಂತ ಕೀಳು ಅನ್ನೋದನ್ನ ಈ ಸಂಗತಿ ಸಾರಿ ಹೇಳಿದೆ.

publive-image

ಆನೆಗಳು ಸಂಬಂಧಕ್ಕೆ ಮಹತ್ವ ಕೊಡುತ್ತವೆ ಎಂಬ ಹೊಸ ವಿಚಾರವೊಂದು ಹೊರಬಿದ್ದಿದೆ. ಅದು ಮನುಷ್ಯನಿಗೂ ಮೀರಿದಂತಹದ್ದೂ ಅನ್ನೋದು ಪ್ರೂವ್ ಆದಂತಿದೆ. ಹೌದು ಈ ಮಾತನ್ನ ಯಾಕೆ ಹೇಳ್ತೀವಿ ಅಂದ್ರೆ ಮುತ್ತೋಡಿ ಅಭಯಾರಣ್ಯದ ಹೆಬ್ಬೆ ವಲಯದಲ್ಲಿ ಕಾಡಾನೆಯೊಂದು ಮೃತಪಟ್ಟಿತ್ತು. ಆ ಆನೆಯ ಸಾವಿಗೆ 17 ಆನೆಗಳ ಹಿಂಡು ಸುಮಾರು 80 ಕಿಲೋ ಮೀಟರ್ ದೂರದಿಂದ ಬಂದು ಅಂತಿಮ ನಮನ ಸಲ್ಲಿಸಿವೆ. ಆನೆಗಳ ಸಂಬಂಧ ಎಂತದ್ದೂ ಎಂಬ ಪೋಟೋಗಳು ಕ್ಯಾಮರಾ ಟ್ರಾಪ್‌ನಲ್ಲಿ ರೇಕಾರ್ಡ್​ ಆಗಿದೆ.

ಇದನ್ನೂ ಓದಿ: Mutton Sambar: ಇವನು ಮಗನೇ ಅಲ್ಲ.. ಮಟನ್​ ಸಾಂಬಾರಿಗಾಗಿ ಹೆತ್ತಪ್ಪನನ್ನೇ ಮುಗಿಸಿಬಿಟ್ಟ!

ಮುತ್ತೋಡಿ ಅಭಯಾರಣ್ಯದಲ್ಲಿ ಕಳೆದ ಫೆಬ್ರವರಿಯಲ್ಲಿ ಕಾಡಾನೆಯೊಂದು ಮೃತಪಟ್ಟಿತ್ತು. ಆ ಆನೆಯ ಮರಣೋತ್ತರ ಪರೀಕ್ಷೆಯನ್ನೂ ನಡೆಸಲಾಗಿತ್ತು. ಆದ್ರೆ ಆನೆಯನ್ನ ಸುಡುವಂತಿಲ್ಲ. ಮಣ್ಣಿನಲ್ಲಿ ಹೂತು ಹಾಕುವಂತಿಲ್ಲ. ಇದು ಅಭಯಾರಣ್ಯದ ಸೂಚನೆ. ಹೀಗಾಗಿ ಭದ್ರಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ಅಲ್ಲಿಯೇ ಕಾಡಾನೆಯ ಕಳೆಬರವನ್ನ ಬಿಟ್ಟು ಬಂದಿದ್ರು. ಬರೋವಾಗ ಅಲ್ಲಿ ಹೇಗೆ ಕಳೆಬರ ಡಿ ಕಂಪೋಸ್ ಆಗುತ್ತೇ ನೋಡೋಣ ಕ್ಯಾಮರಾ ಟ್ರಾಪ್ ಅಳವಡಿಸಿ ಬಂದಿದ್ರು. ಈ ವೇಳೆ ನಡೆದಿದ್ದೇ ಯಾರೂ ಊಹಿಸದ ಸಂಗತಿ.

publive-image

ಆನೆ ಸತ್ತು ಬಿದ್ದಿದ್ದ ಸ್ಥಳಕ್ಕೆ ಸುಮಾರು 80 ಕಿಲೋ ಮೀಟರ್ ದೂರದಿಂದ 17 ಕಾಡಾನೆಗಳ ಹಿಂಡು ಬಂದಿತ್ತು. ಮೃತಪಟ್ಟಿರೋ ಆನೆಯ ಮುಂದೇ ಸುಮಾರು ಹೊತ್ತು ನಿಂತು ಅಂತಿಮ ನಮನವನ್ನು ಸಲ್ಲಿಸಿವೆ. ಬಳಿಕ ಅಲ್ಲಿಂದ ತೆರಳಿವೆ. ಇಂಟ್ರೆಸ್ಟಿಂಗ್ ಅಂದ್ರೆ, ಆನೆಗಳು ತಮ್ಮ ಸಂಬಂಧಿ ಆನೆ ಮೃತಪಟ್ಟಾಗ ಆ ಜಾಗಕ್ಕೆ ಹೋಗುತ್ತೇ ಅನ್ನೋದನ್ನ ಹಲವರು ಹೇಳ್ತಾರೆ. ಆದ್ರೀಗ ಅದು ಪ್ರೂವ್ ಆಗಿದೆ. ಇನ್ನೂ ಒಂದೇ ವಂಶದ ಎಲ್ಲ ಆನೆಗಳು ವರ್ಷಕ್ಕೊಮ್ಮೆ ಒಂದು ಕಡೆ ಸೇರುತ್ತವಂತೆ. ಈ ವೇಳೆ ಮರಿ ಆನೆಗಳ ಗುಂಪು ಬದಲಾಯಿಸುವ ಪ್ರಕ್ರಿಯೆ ಕೂಡಾ ನಡೆಯುತ್ತೆ ಅಂತಾರೆ ಅರಣ್ಯಾಧಿಕಾರಿ.

ಇದನ್ನೂ ಓದಿ: ‘ಡಾನಾ’ ಅಬ್ಬರಕ್ಕೆ ಒಡಿಶಾ ತತ್ತರ.. 2 ಕಿಲೋಮೀಟರ್​​ ದೂರ ರೋಗಿಯನ್ನು ಹೊತ್ತು ಸಾಗಿದ ಸಿಬ್ಬಂದಿ

ಒಮ್ಮೊಮ್ಮೆ ಮನುಷ್ಯನೇ ತನ್ನ ಹೆತ್ತವರು ಮೃತಪಟ್ರೂ ಕೊನೆ ಬಾರಿ ಮುಖವನ್ನೂ ಸಹ ನೋಡೋಕೆ ಹೋಗಲ್ಲ. ಅಂತದ್ರಲ್ಲಿ ಮೂಕಪ್ರಾಣಿಗಳು ಸಂಬಂಧದ ವ್ಯಾಲ್ಯೂ ಏನು ಅಂತ ತೋರಿಸಿಕೊಟ್ಟಿವೆ. ಇದ್ದಾಗ ನೆಂಟ ಸತ್ಮೇಲೆ ಯಾರೋ ಅನ್ನೋ ಮನುಷ್ಯನಿಗಿಂತ ಪ್ರಾಣಿಗಳೇ ಗುಣದಲಿ ಮೇಲೂ ಅಂತ ತೋರಿಸಿಕೊಟ್ಟಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment