ಬರೋಬ್ಬರಿ ₹17 ಲಕ್ಷ ಕೋಟಿ ನಷ್ಟ.. ನಾಳೆಯೂ ಭಾರತ ಷೇರುಪೇಟೆಯಲ್ಲಿ ಅಲ್ಲೋಲ-ಕಲ್ಲೋಲ; ಕಾರಣವೇನು?

author-image
admin
ಬರೋಬ್ಬರಿ ₹17 ಲಕ್ಷ ಕೋಟಿ ನಷ್ಟ.. ನಾಳೆಯೂ ಭಾರತ ಷೇರುಪೇಟೆಯಲ್ಲಿ ಅಲ್ಲೋಲ-ಕಲ್ಲೋಲ; ಕಾರಣವೇನು?
Advertisment
  • ವಾರದ ಆರಂಭದಲ್ಲೇ ಕರಡಿ ಕುಣಿತಕ್ಕೆ ಹೂಡಿಕೆದಾರರು ಕಂಗಾಲು
  • ಭಾರತದ ಷೇರು ಮಾರುಕಟ್ಟೆ ಹಿಂದೆಂದೂ ಕಾಣದ ರೀತಿಯಲ್ಲಿ ನೆಲಕಚ್ಚಿದೆ
  • ಷೇರುಗಳ ಮೇಲೆ ಹೂಡಿಕೆಗಿಂತ ನಗದು ಹಣ ಇಟ್ಟುಕೊಳ್ಳುವುದೇ ಉತ್ತಮ

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಲ್ಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಕರಡಿ ಕುಣಿತಕ್ಕೆ ಹೂಡಿಕೆದಾರರು ಕಂಗಾಲಾಗಿದ್ದು, ಸೆನೆಕ್ಸ್​​ನಲ್ಲಿ ಬರೋಬ್ಬರಿ 2,222 ಪಾಯಿಂಟ್ಸ್​​​​ ಕುಸಿತ ಗೊಂಡಿದೆ. ನಿಫ್ಟಿ ಕೂಡ ಇಳಿಕೆಗೆ ಸಾಕ್ಷಿಯಾಗಿದ್ದು, 24,000 ಗಡಿ ಸಮೀಪಿಸಿ ಭಾರತದ ಷೇರು ಮಾರುಕಟ್ಟೆಯಲ್ಲಿ ರಕ್ತದೋಕುಳಿಯಾಗಿದೆ.

ಇದನ್ನೂ ಓದಿ: ಅಜ್ಜನ ತಿಜೋರಿಯಿಂದ ಜಾಕ್‌ಪಾಟ್.. ಒಂದೇ ರಾತ್ರಿಗೆ ಕೋಟ್ಯಾಧಿಪತಿಯಾದ ಬೆಂಗಳೂರಿನ ಮಹಿಳೆ; ಹೇಗೆ?

ಷೇರುಪೇಟೆಯಲ್ಲಿ ಬ್ಲಡ್‌ಬಾತ್‌.. ₹17 ಲಕ್ಷ ಕೋಟಿ ನಷ್ಟ
ಏಷ್ಯಾ ಪೆಸಿಫಿಕ್​​ನಲ್ಲಿ ಉಂಟಾದ ಮಾರುಕಟ್ಟೆ ಕುಸಿದ ಪರಿಣಾಮ ಭಾರತದ ಷೇರು ಮಾರುಕಟ್ಟೆ ಹಿಂದೆಂದೂ ಕಾಣದ ರೀತಿಯಲ್ಲಿ ನೆಲಕಚ್ಚಿದೆ. ಜೊತೆಗೆ ಇಸ್ರೇಲ್, ಇರಾನ್ ಸೇರಿದಂತೆ ಹಲವು ದೇಶಗಳ‌ ನಡುವಿನ ಯುದ್ಧ ಭೀತಿ ಹಾಗೂ ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ ಹಿನ್ನೆಲೆ ಮಾರುಕಟ್ಟೆಯಿಂದ ಹೂಡಿಕೆದಾರರು ದೂರು ಸರಿಯುತ್ತಿದ್ದು, ಇದುವರೆಗೂ ಸುಮಾರು 17 ಲಕ್ಷ ಕೋಟಿ ನಷ್ಟವಾಗಿದೆ.

publive-image

ಕೇವಲ ಭಾರತವಲ್ಲದೇ ಮಾತ್ರವಲ್ಲದೇ ವಿಶ್ವದ ಇತರೆ ದೇಶದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಹೂಡಿಕೆದಾರರಿಗೆ ಭಾರೀ ಪೆಟ್ಟು ಬಿದ್ದಿದೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಮಿತಿ ಮೀರಿದ ಅರಾಜಕತೆ; ಶೇಖ್​ ಹಸೀನಾ ಒಳ ಉಡುಪು ಬಿಡದ ಕಾಮುಕರು 

ಷೇರುಪೇಟೆಯಲ್ಲಿ ರಕ್ತದೋಕುಳಿ!
1. ಅಮೆರಿಕಾದಲ್ಲಿ ಉದ್ಯೋಗ ಸೃಷ್ಟಿಯ ಕುಸಿತ ಆರ್ಥಿಕ ಹಿಂಜರಿತ
2. ಜಪಾನ್​ನಲ್ಲಿ ಬಡ್ಡಿದರ ಕಡಿತ, ಟೆಕ್ ಕಂಪನಿಯ ಷೇರುಗಳ ಮಾರಾಟ
3. ಜಾಗತಿಕ ಯುದ್ಧ ಭೀತಿಯಿಂದ ಭಾರತದ ಷೇರುಪೇಟೆಯಲ್ಲಿ ಕುಸಿತ
4. ಕಂಪನಿಗಳ ಲಾಭ-ನಷ್ಟದ ವಿವರ ಬಿಡುಗಡೆ ಪೇಟೆಯ ಮೇಲೆ ಪರಿಣಾಮ

ಭಾರತದ ಷೇರು ಮಾರ್ಕೆಟ್​​ನಲ್ಲಿ ಭಾರೀ ನಷ್ಟವಾಗಿದ್ದು, ಇಂಥ ಸ್ಥಿತಿಯಲ್ಲಿ ಷೇರುಗಳ ಮೇಲೆ ಹೂಡಿಕೆಗಿಂತ ನಗದು ಹಣ ಇಟ್ಟುಕೊಳ್ಳುವುದೇ ಉತ್ತಮ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಸೋಮವಾರ ಉಂಟಾದ ಷೇರುಪೇಟೆ ಕುಸಿತ ಮಂಗಳವಾರವೂ ಮುಂದುವರಿಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment