/newsfirstlive-kannada/media/post_attachments/wp-content/uploads/2024/04/jaipura1.jpg)
ಜೈಪುರ: ಮದುವೆ ಅನ್ನೋದು ಏಳೇಳು ಜನ್ಮದ ಅನುಬಂಧ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರತಿಯೊಬ್ಬರಿಗೂ ಮದುವೆಯೇ ಜೀವನದ ದೊಡ್ಡ ತಿರುವಾಗಿ ಬಿಡುತ್ತೆ. ಸಾಮಾನ್ಯವಾಗಿ ಒಂದು ಕುಟುಂಬದಲ್ಲಿ ಸಹೋದರ ಹಾಗೂ ಸಹೋದರಿಯರನ್ನು ಒಂದೇ ದಿನ, ಒಂದೇ ವೇದಿಕೆ ಮೇಲೆ ಮದುವೆ ಮಾಡಿಸುವುದನ್ನು ನಾವು ನೋಡಿರುತ್ತೇವೆ.
ಇದನ್ನೂ ಓದಿ:ಮಗನ ಮದುವೆಗೆ ಬರುವವರೆಗೆಲ್ಲಾ ಒಂದು ಷರತ್ತು ಹಾಕಿದ ತಂದೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ಆದರೆ ಇಲ್ಲೊಂದು ಕುಟುಂಬದ ಅಜ್ಜ ತನ್ನ ಮೊಮ್ಮಕ್ಕಳ ವಿವಾಹವನ್ನು ಒಂದೇ ಬಾರಿಗೆ ಮಾಡಿ ಸಖತ್ ಸುದ್ದಿಯಲ್ಲಿ ಇದ್ದಾನೆ.
ಹೌದು, ಈ ರೀತಿಯ ಮದುವೆ ಕಾರ್ಯಕ್ರಮ ನಡೆದದ್ದು ರಾಜಸ್ಥಾನದ ಬಿಕಾನೇರ್ನಲ್ಲಿ. ಸುರ್ಜಾರಾಮ್ ಗೋದಾರ್ ಎಂಬುವವರು ತನ್ನ 17 ಮೊಮ್ಮಕ್ಕಳನ್ನು ಏಕಕಾಲಕ್ಕೆ ಮದುವೆ ಮಾಡಿಸಿದ್ದಾನೆ. ಇನ್ನು ಈ ಮದುವೆಗೆ ಸಾವಿರಾರು ಜನರ ಸಮ್ಮುಖದಲ್ಲಿ ನಡೆದಿದೆ. ಸುರ್ಜಾರಾಮ್ ಗೋದಾರ್ ಕುಟುಂಬ್ಥರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಮಕ್ಕಳು, ಅವರ ಮಕ್ಕಳು, ಮೊಮ್ಮಕ್ಕಳ, ಮೊಮ್ಮಕ್ಕಳ ಮಕ್ಕಳ ಜೊತೆ ಜೀವನ ನಡೆಸುತ್ತಿದ್ದಾರೆ.
ओ बीकानेर है प्रधान यहां कुछ भी हो सकता है ???@Pooja_Bikanerpic.twitter.com/nfBpvlCbNA
— ????? ?????? (@Pooja_Bikaner)
ओ बीकानेर है प्रधान यहां कुछ भी हो सकता है 🥱🤠🎉@Pooja_Bikanerpic.twitter.com/nfBpvlCbNA
— 𝐏𝐨𝐨𝐣𝐚 𝐆𝐨𝐝𝐚𝐫𝐚 (@Pooja_Bikaner) March 31, 2024
">March 31, 2024
ಸುರ್ಜಾರಾಮ್ ಅವರು ತನ್ನ 17 ಮೊಮ್ಮಕ್ಕಳ ಮದುವೆಯನ್ನು ಒಂದೇ ಬಾರಿಗೆ ಮಾಡಬೇಕೆಂದು ನಿರ್ಧರಿಸಿದ್ದರು. ಅದರಂತೆ 17 ಮೊಮ್ಮಕ್ಕಳ ಮದುವೆಗಾಗಿ ಒಂದೇ ಆಮಂತ್ರಣ ಪತ್ರವನ್ನು ಸಿದ್ಧಪಡಿಸಿದ್ದರು. ಈ ಆಮಂತ್ರಣ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ಒಂದೇ ಮನೆಯಲ್ಲಿ ಸಾಮೂಹಿಕ ಮದುವೆ ನಡೆಯುತ್ತಿರುವುದು ಇದೇ ಭಾಗದಲ್ಲಿ ಇದೇ ಮೊದಲು ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ