/newsfirstlive-kannada/media/post_attachments/wp-content/uploads/2025/01/ARMY.jpg)
ಛತ್ತೀಸ್​ಗಢದ ದಕ್ಷಿಣ ಬಿಜಾಪುರ ಜಿಲ್ಲೆಯ ಅರಣ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವೆ ತೀವ್ರ ಗುಂಡಿನ ಕಾಳಗ ನಡೆದಿದೆ. ಒಂದೇ ತಿಂಗಳಲ್ಲಿ ಇದು ಎರಡನೇ ಎನ್ಕೌಂಟರ್ ನಡೆದಿದ್ದು, ಕಾರ್ಯಾಚರಣೆಯಲ್ಲಿ ನಕ್ಸಲರು ಹತರಾಗಿದ್ದಾರೆ.
ಛತ್ತೀಸ್​ಗಢದಲ್ಲಿ ಗುಂಡಿನ ಸದ್ದು ಮುಣದುವರೆದಿದೆ. ದಕ್ಷಿಣ ಬಿಜಾಪುರದ ಅರಣ್ಯ ಪ್ರದೇಶದಲ್ಲಿ ನಕ್ಸಲ್ ​ ವಿರೋಧಿ ಕಾರ್ಯಾಚರಣೆಯನ್ನ ಭದ್ರತಾ ಸಿಬ್ಬಂದಿ ಜಂಟಿ ತಂಡ ಆರಂಭಿಸಿ 17 ಜನ ನಕ್ಸಲರನ್ನ ಹೊಡೆದು ಹಾಕಿದ್ದಾರೆ. ಎರಡೂ ಕಡೆಯಿಂದ ಮಧ್ಯಂತರ ಗುಂಡಿನ ಚಕಮಕಿ ನಡೆದಿದೆ. ಪೂಜಾರಿ ಕಂಕೇರ್ ಅರಣ್ಯದಲ್ಲಿ ಎನ್‌ಕೌಂಟರ್ ನಡೆದಿದೆ.
ಇದನ್ನೂ ಓದಿ:ಶರಣಾದ ನಕ್ಸಲರು ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ; ಬಚ್ಚಿಟ್ಟಿದ್ದು ಎಲ್ಲಿ?
ಹೇಗಿತ್ತು ಕಾರ್ಯಾಚರಣೆ!?
- ಕಾರ್ಯಾಚರಣೆಯಲ್ಲಿ 1200-1500 CRPF ಸಿಬ್ಬಂದಿ ಭಾಗಿ
- ಡಿಆರ್‌ಜಿ ದಾಂತೇವಾಡ & ಕೋಬ್ರಾದ ಬೆಟಾಲಿಯನ್ ದಾಳಿ
- ನಕ್ಸಲರ ಇರುವಿಕೆ ಪತ್ತೆಯಾಗುತ್ತಿದ್ದಂತೆಯೇ ಫೈರಿಂಗ್​ ಶುರು
- ಮತ್ತೊಂದು ಐಇಡಿ ಸ್ಪೋಟಿಸಿದ ಪರಿಣಾಮ ಇಬ್ಬರಿಗೆ ಗಾಯ
- ಅಡಗಿಸಿಟ್ಟ ಐಇಡಿ ಬಾಂಬ್​​ ಸ್ಪರ್ಶಿಸಿ ಪೇದೆಗಳೀಗೆ ಗಾಯ
- ಗಾಯಗೊಂಡ ಸಿಬ್ಬಂದಿಗೆ ಸಿಆರ್​ಪಿಎಫ್​ ಕ್ಯಾಂಪ್​ನಲ್ಲಿ ಚಿಕಿತ್ಸೆ
- ಜನವರಿ 6, ಇದೇ ರೀತಿ ಬಾಂಬ್​ ದಾಳಿ 9 ಯೋಧರು ಜೀವ ಬಿಟ್ಟಿದ್ದರು
ಇದೇ ತಿಂಗಳು ಜನವರಿ 6ರಂದು ಬಿಜಾಪುರದಲ್ಲಿ ನಕ್ಸಲರು ಐಇಡಿ ಬಳಸಿ ಯೋಧರ ವಾಹನವನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ದಾಂತೇವಾಡದ 8 ಡಿಆರ್​ಜಿ ಯೋಧರು ಹಾಗೂ ಚಾಲಕ ಸೇರಿದಂತೆ 9 ಜನರು ಜೀವ ಕಳೆದುಕೊಂಡಿದ್ದರು. ಜನವರಿ 12 ರಂದು ಬಿಜಾಪುರ​​ ಜಿಲ್ಲೆಯ ಮದ್ದೇಡ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದ ಇದೇ ರೀತಿಯ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐದು ನಕ್ಸಲರು ಬಲಿಯಾಗಿದ್ರು. ಒಟ್ಟಾರೆ, ನಕ್ಸಲರು ಓಡಾಟ ಇದೇ ಅನ್ನೋ ಶಂಕೆ ಇದ್ದು ಸ್ಥಳದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us