ಮಗಳ ಜೊತೆ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಹುಡುಗಿ ತಂದೆ ಮಾಡಿದ್ದೇನು? ಬೆಚ್ಚಿ ಬೀಳಿಸುತ್ತೆ ವಿಡಿಯೋ!

author-image
Gopal Kulkarni
Updated On
ಮಗಳ ಜೊತೆ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಹುಡುಗಿ ತಂದೆ ಮಾಡಿದ್ದೇನು? ಬೆಚ್ಚಿ ಬೀಳಿಸುತ್ತೆ ವಿಡಿಯೋ!
Advertisment
  • ಹುಡಗಿ ಜೊತೆ ಫೋನ್​ನಲ್ಲಿ ಮಾತನಾಡುತ್ತಿದ್ದ ಹುಡುಗನಿಗೆ ಆಗಿದ್ದೇನು ಗೊತ್ತಾ?
  • ಮಗಳೊಂದಿಗೆ ಆತ್ಮಿಯತೆಯಿಂದ ಇದ್ದ ಹುಡುಗನಿಗೆ ಹುಡುಗಿ ತಂದೆ ಮಾಡಿದ್ದೇನು?
  • ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಗಳು ಎಂಥವರನ್ನು ಕೂಡ ಬೆಚ್ಚಿಬೀಳಿಸುತ್ತೆ!

ಗುಜರಾತ್​​ನ ಭಾವನಗರದ ಓಜ್ ಇನ್ಸ್​ಟಿಟ್ಯೂಟ್​ನಲ್ಲಿ ಬೆಚ್ಚಿ ಬೀಳಿಸುವಂತ ಘಟನೆ ನಡೆದಿದೆ. ವ್ಯಕ್ತಿಯೊಬ್ಬ 17 ವರ್ಷದ ಬಾಲಕನ ಮೇಲೆ ಚಾಕುವಿನಿಂದ ಮನಬಂದಂತೆ ಇರಿದಿದ್ದಾನೆ. ಈ ಒಂದು ಘಟನೆ ಫೆಬ್ರವರಿ 10 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂಸ್ಥೆಯ ಕೌನ್ಸಲಿಂಗ್​ ರೂಮ್​ನಲ್ಲಿ ಈ ಒಂದು ಘಟನೆ ನಡೆದಿದ್ದು ಇಡೀ ಘಟನೆ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈಗ ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ ಪ್ರಕಾರ, ಹಲ್ಲೆಗೆ ಒಳಗಾದ ಬಾಲಕನನ್ನು ಶಿಕ್ಷಕರು ಕೌನ್ಸ್​ಲಿಂಗ್​​ಗೆ ಕರೆದಿದ್ದರು. ಅವನ ಜೊತೆ ಜಗದೀಶ್​ ರಚಾಡ್​ ಕುಳಿತಿದ್ದರು. ಕೂಡಲೇ ಹದಿಹರೆಯದ ಆ ಹುಡುಗನ ಮೇಲೆ ಜಗದೀಶ್ ರಚಾಡ್​ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ಏನಾಗ್ತಿದೆ ಎಂದು ನೋಡುವಷ್ಟರಲ್ಲಿ ಹುಡುಗ ಭೀಕರವಾಗಿ ಗಾಯಗೊಂಡು ನೆಲಕ್ಕೆ ಬಿದ್ದಿದ್ದ. ಕೂಡಲೇ ಅಲ್ಲಿದ್ದ ಸಿಬ್ಬಂದಿ ಜಗದೀಶ್​ನನ್ನು ತಡೆದು ಆಚೆ ಕರೆದುಕೊಂಡು ಹೋಗಿದ್ದಾರೆ. ತನ್ನ ಮಗಳ ಜೊತೆ ಫೋನ್​ನಲ್ಲಿ ಮಾತನಾಡುತ್ತಿದ್ದ ಎಂಬ ಒಂದೇ ಕಾರಣಕ್ಕೆ ಜಗದೀಶ್ ರಚಾಡ್ ಆ ಅಮಾಯಕ ಯುವಕನ ಮೇಲೆ ಭೀಕರವಾಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ವಿಡಿಯೋದಲ್ಲಿ ಆ ಹುಡುಗ ಹಾಗೂ ಹುಡುಗಿಯ ತಂದೆ ಒಂದೇ ಸೋಫಾದ ಮೇಲೆ ಕುಳಿತಿದ್ದರು. ಕೆಲವೇ ಕ್ಷಣಗಳಲ್ಲಿ ಜೇಬಿನಲ್ಲಿದ್ದ ಚಾಕುವನ್ನು ಆಚೆ ತೆಗೆದು ಹಲ್ಲೆ ಮಾಡಿದ್ದಾನೆ ಹುಡುಗಿಯ ತಂದೆ. ಅದು ಮಾತ್ರವಲ್ಲ ಇನ್ನು ಮೇಲೆ ನನ್ನ ಮಗಳ ಜೊತೆ ನೀನು ಮೊಬೈಲ್​ನಲ್ಲಿ ಮಾತನಾಡುವಂತಿಲ್ಲ ಅಂತ ಗುಡುಗಿದ್ದಾನೆ. ಈ ಘಟನೆ ನಡೆಯುವಾಗ ಜಗದೀಶ್​ ಮಗಳು ತನ್ನ ಶಿಕ್ಷಕರೊಂದಿಗೆ ಕೌನ್ಸಲಿಂಗ್ ರೂಮ್​ನಲ್ಲಿ ಇದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೈಗೆ ಸಿಕ್ಕಿದ್ದೇ ಸೀರುಂಡೆ.. ಹೆದ್ದಾರಿಯಲ್ಲಿ ಕೋಳಿ ಲೂಟಿ ಹೊಡೆದು ಜೂಟ್ ಹೇಳಿದ ಜನರು; ವಿಡಿಯೋ ಇಲ್ಲಿದೆ ನೋಡಿ!

ಘಟನೆ ನಡೆದ ಬಳಿಕ ಸಂಸ್ಥೆಯ ಸಿಬ್ಬಂದಿ ಆರೋಪಿಯನ್ನು ಕೌನ್ಸ್​ಲಿಂಗ್​ ರೂಮ್ ಒಳಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment