newsfirstkannada.com

ಕ್ರಿಕೆಟ್​​ನಲ್ಲಿ ಔಟ್​​ ಮಾಡಿದ್ದಕ್ಕೆ ಬಾಲಕನನ್ನೇ ಕತ್ತು ಹಿಸುಕಿ ಕೊಂದ ಹಂತಕರು..!

Share :

Published June 21, 2023 at 3:37pm

    ಕ್ರಿಕೆಟ್​​ ಆಡುವಾಗ ಮಾತಿಗೆ ಮಾತು ಬೆಳೆದು ಜೋರು ಜಗಳ

    ಕ್ಲೀನ್​​ ಬೌಲ್ಡ್​ ಮಾಡಿದ್ದಕ್ಕೆ 14 ವರ್ಷದ ಬಾಲಕನ ಮೇಲೆ ಹಲ್ಲೆ

    ಅಣ್ಣ ತಮ್ಮ ಇಬ್ಬರು ಸೇರಿ ಬಾಲಕನ ಕತ್ತು ಹಿಸುಕಿ ಕೊಂದರು..!

ಕಾನ್ಪುರ: ಕ್ರಿಕೆಟ್​​ನಲ್ಲಿ ಕ್ಲೀನ್​​ ಬೌಲ್ಡ್​ ಮಾಡಿದ್ದಕ್ಕೆ 14 ವರ್ಷದ ಬಾಲಕನನ್ನು 17 ವರ್ಷದ ಕಿಡಿಗೇಡಿಯೋರ್ವ ಕತ್ತು ಹಿಸುಕಿ ಕೊಂದಿದ್ದಾನೆ. ಈ ಕೃತ್ಯ ಉತ್ತರ ಪ್ರದೇಶ ಕಾನ್ಪುರದ ರಾಹ್ತಿ ದೇರಾ ಎಂಬ ಗ್ರಾಮದಲ್ಲಿ ನಡೆದಿದೆ.

ಇಂದು ಗ್ರಾಮದ ಹುಡುಗರು ಕ್ರಿಕೆಟ್​ ಆಡುತ್ತಿದ್ದರು. ಮೃತ ಬಾಲಕ ಬ್ಯಾಟಿಂಗ್​​ ಮಾಡುತ್ತಿದ್ದ ಆರೋಪಿಗೆ ಬೌಲಿಂಗ್​​ ಮಾಡುತ್ತಿದ್ದ. ಬೌಲಿಂಗ್​​ನಲ್ಲಿ ಆರೋಪಿಯನ್ನು ಕ್ಲೀನ್​ ಬೌಲ್ಡ್​​ ಮಾಡಿದ್ದಾನೆ. ಔಟಾದ್ರೂ ಪಿಚ್​​ನಿಂದ ಹೊರ ಹೋಗಲು ಆರೋಪಿ ಹಿಂದೆ ಮುಂದೆ ನೋಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳ ಆಗಿದೆ. ಈ ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

ಇನ್ನು, ಬೌಲ್ಡ್​​ ಮಾಡಿದ್ದ ಬಾಲಕನೊಂದಿಗೆ ಜಗಳವಾಡಲು ಆರೋಪಿ ತನ್ನ ಅಣ್ಣನನ್ನು ಕರೆದುಕೊಂಡು ಬಂದಿದ್ದ. ಅಣ್ಣ, ತಮ್ಮ ಇಬ್ಬರು ಸೇರಿ ಗ್ರೌಂಡ್​ನಲ್ಲೇ ಮೃತ ಬಾಲಕನನ್ನು ಎಳೆದಾಡಿದ್ದಾರೆ. ಅಲ್ಲದೇ ಕತ್ತು ಹಿಸುಕಿ ಕೊಂದಿದ್ದಾರೆ ಎಂದು ಕ್ರಿಕೆಟ್​ ಆಡುತ್ತಿದ್ದ ಹುಡುಗರು ಮೃತ ಬಾಲಕನ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕ್ರಿಕೆಟ್​​ನಲ್ಲಿ ಔಟ್​​ ಮಾಡಿದ್ದಕ್ಕೆ ಬಾಲಕನನ್ನೇ ಕತ್ತು ಹಿಸುಕಿ ಕೊಂದ ಹಂತಕರು..!

https://newsfirstlive.com/wp-content/uploads/2023/06/Crime-News-1.jpg

Load More