/newsfirstlive-kannada/media/post_attachments/wp-content/uploads/2024/06/BNG-MURDER-2.jpg)
ಬೆಂಗಳೂರು: 17 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆಗೈದು ಬಿಸಾಡಿ ಹೋಗಿರುವ ಘಟನೆ ಗಂಗಮ್ಮನ ಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ಬಿಗೆರೆ ನಿವಾಸಿ ಮಂಜುನಾಥ್ ಕೊಲೆಯಾದ ದುರ್ದೈವಿ. ಮೊನ್ನೆ ರಾತ್ರಿ ಮಂಜುನಾಥ್ ತಲೆಗೆ ರಾಡ್ನಿಂದ ಹೊಡೆದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಬಳಿಕ ಅಬ್ಬಿಗೆರೆ ಬಳಿಯ ಖಾಲಿ ಜಾಗದಲ್ಲಿ ಶವವನ್ನು ಎಸೆದು ಬಂದಿದ್ದಾರೆ ಎನ್ನಲಾಗಿದೆ.
ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಪ್ರೀತಿ ವಿಚಾರಕ್ಕೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಭಾರತ vs ಆಸ್ಟ್ರೇಲಿಯಾ ಪಂದ್ಯ ರದ್ದು ಸಾಧ್ಯತೆ.. ಅಭಿಮಾನಿಗಳಿಂದ ಈಗಲೇ ಬೇಸರ.. ಕಾರಣ ಇಲ್ಲಿದೆ
ಇದನ್ನೂ ಓದಿ:DK ಶಿವಕುಮಾರ್ಗೆ ಧರಿಸಿದ್ದ ಶಾಲೇ ಸಂಕಷ್ಟ.. ‘ಶಾಲು ಅಸ್ತ್ರ’ ಪ್ರಯೋಗಿಸಿದ ಬಿಜೆಪಿ, ಏನದು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ