ಹೊಟ್ಟೆ ತುಂಬಾ ಬಿರಿಯಾನಿ ತಿಂದ ಮಹಿಳೆ ದಿಢೀರ್‌ ಸಾವು; ಬರೋಬ್ಬರಿ 178 ಮಂದಿ ಆಸ್ಪತ್ರೆಗೆ ದಾಖಲು

author-image
Veena Gangani
Updated On
ಹೊಟ್ಟೆ ತುಂಬಾ ಬಿರಿಯಾನಿ ತಿಂದ ಮಹಿಳೆ ದಿಢೀರ್‌ ಸಾವು; ಬರೋಬ್ಬರಿ 178 ಮಂದಿ ಆಸ್ಪತ್ರೆಗೆ ದಾಖಲು
Advertisment
  • ಸಿಕ್ಕ ಸಿಕ್ಕ ಅಂಗಡಿಯಲ್ಲಿ ಮಾಡಿದ್ದ ಬಿರಿಯಾನಿ ತಿನ್ನೋ ಮುನ್ನ ಎಚ್ಚರ
  • ರೆಸ್ಟೋರೆಂಟ್‌ನಿಂದ ಬಿರಿಯಾನಿ ತಿಂದ 178 ಮಂದಿಗೆ ವಾಂತಿ ಭೇದಿ
  • ರೆಸ್ಟೋರೆಂಟ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ-ಪಂಚಾಯತ್ ಅಧ್ಯಕ್ಷೆ

ತಿರುವನಂತಪುರಂ: ಬಿರಿಯಾನಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದೆಷ್ಟೋ ಜನರು ಬಿರಿಯಾನಿಗಾಗಿ ಗಂಟೆ ಗಂಟೆಲೇ ಅಂಗಡಿಗಳ ಮುಂದೆ ಕ್ಯೂನಲ್ಲಿ ನಿಂತುಕೊಂಡು ತಿನ್ನುತ್ತಾರೆ. ಆದರೆ ಹೀಗೆ ಬಿರಿಯಾನಿ ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 178 ಮಂದಿ ಅಸ್ವಸ್ಥಗೊಂಡಿರೋ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ.

publive-image

ಇದನ್ನೂ ಓದಿ:ಹೊಸಕೋಟೆ ಬಿರಿಯಾನಿಗೆ ಇದೆ ಸ್ಪೆಷಲ್ ಖದರ್; ದಿಢೀರ್ ತೆರಿಗೆ ಇಲಾಖೆ ಕಣ್ಣು ಬಿದ್ದಿದ್ದೇಕೆ..?

ಹೌದು, ತ್ರಿಶೂರ್ ಜಿಲ್ಲೆಯ ಪೆರಿಂಜನಂನ ರೆಸ್ಟೋರೆಂಟ್‌ನಿಂದ ಬಿರಿಯಾನಿ ತಿಂದ ಬಳಿಕ 178 ಮಂದಿ ವಾಂತಿ ಭೇದಿಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿರಿಯಾನಿ ತಿಂದ ಪರಿಣಾಮ ಕುಟಿಲಕ್ಕಡವ್ ಮೂಲದ ಉಝೈಬಾ (56) ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಈ ವಿಷಯ ತಿಳಿದ ಕೂಡಲೇ ಪೊಲೀಸರು ಹಾಗೂ ಆರೋಗ್ಯ ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ರೆಸ್ಟೋರೆಂಟ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿರಿಯಾನಿ ತಿಂದ 178 ಮಂದಿಗೆ ಫುಡ್ ಪಾಯಿಸನ್ ಉಂಟಾಗಿದೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

publive-image

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪಂಚಾಯತ್ ಅಧ್ಯಕ್ಷೆ ವಿನೀತಾ ಮೋಹನ್ ದಾಸ್ ಪೆರಿಂಜನಂ ಮತ್ತು ಕಯ್ಪಮಂಗಲಂ ನಿವಾಸಿಗಳು ಆಸ್ಪತ್ರೆಯಲ್ಲಿದ್ದಾರೆ. ಅಸ್ವಸ್ಥಗೊಂಡವರನ್ನು ಕೊಡಂಗಲ್ಲೂರು ಮತ್ತು ಇರಿಂಗಲಕುಡದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆರೋಗ್ಯ ಇಲಾಖೆ, ಪಂಚಾಯತ್, ಆಹಾರ ಮತ್ತು ಸುರಕ್ಷತಾ ಅಧಿಕಾರಿಗಳು ಮತ್ತು ಪೊಲೀಸರು ಹೋಟೆಲ್‌ನಲ್ಲಿ ತಪಾಸಣೆ ನಡೆಸಿದ್ದಾರೆ. ಆ ರೆಸ್ಟೋರೆಂಟ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment