18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ವಿಧಾನಸಭೆ ಸ್ಪೀಕರ್ ಯುಟಿ ಖಾದರ್

author-image
Bheemappa
Updated On
18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ವಿಧಾನಸಭೆ ಸ್ಪೀಕರ್ ಯುಟಿ ಖಾದರ್
Advertisment
  • ಯಾವ ವಿಚಾರ ಕುರಿತು ಚರ್ಚೆ ಮಾಡಲು ಪಟ್ಟು ಹಿಡಿದಿದ್ರು?
  • ತಕ್ಷಣವೇ ಹೊರ ಹೋಗುವಂತೆ ಆದೇಶ ನೀಡಿದ ಸ್ಪೀಕರ್
  • ಸದನದ ಚರ್ಚೆ ವೇಳೆ ನಡೆದ ಗದ್ದಲದಿಂದ ಈ ನಿರ್ಧಾರನಾ?

ವಿಧಾನಸೌಧ: ಸದನದಲ್ಲಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಆದೇಶ ಹೊರಡಿಸಿದ್ದಾರೆ.

ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು ಸದನದಲ್ಲಿ ಬಿಜೆಪಿಯ 18 ಶಾಸಕರನ್ನು ಇಂದು ಅಮಾನತು ಮಾಡಿದರು. ಆದೇಶ ಹೊರಡಿಸಿದ ತಕ್ಷಣವೇ ಅವರನ್ನು ಹೊರಗೆ ಕಳಿಸಬೇಕು ಎಂದು ಹೇಳಿದ್ದಾರೆ. ಬಳಿಕ ಹತ್ತು ನಿಮಿಷಗಳ ಕಾಲ ಕಲಾಪವನ್ನು ಮುಂದೂಡಿಕೆ ಮಾಡಿದ್ದಾರೆ. ಈ 18 ಸದಸ್ಯರನ್ನು ಆರು ತಿಂಗಳವರೆಗೆ ಸ್ಪೀಕರ್ ಸಸ್ಪೆಂಡ್ ಮಾಡಿದ್ದಾರೆ.

ಇದನ್ನೂ ಓದಿ: Bank Strike; ನಾಳೆ ಕರ್ನಾಟಕ ಬಂದ್ ಬೆನ್ನಲ್ಲೇ 2 ದಿನ ಬ್ಯಾಂಕುಗಳ ಮುಷ್ಕರ.. ಯಾವಾಗಿನಿಂದ?

publive-image

ಸದನದಲ್ಲಿ ನಿನ್ನೆಯಿಂದಲೂ ಹನಿಟ್ರ್ಯಾಪ್ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಇದರಿಂದ ಬಿಜೆಪಿ ಶಾಸಕರು ಹನಿಟ್ರ್ಯಾಪ್ ಚರ್ಚೆಗೆ ಪಟ್ಟು ಹಿಡಿದಿದ್ದರು. ಇಂದು ಬೆಳಗ್ಗೆಯಿಂದ ವಿರೋಧ ಪಕ್ಷದವರು ಸದನದಲ್ಲಿ ತೀವ್ರ ಗದ್ದಲ ಮಾಡುತ್ತಿದ್ದರು. ಸದನದ ಬಾವಿಗಿಳಿದರು ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಲ್ಲದೇ, ಕಾಗದಗಳನ್ನು ಹರಿದು ಸ್ಪೀಕರ್ ಯುಟಿ ಖಾದರ್ ಮೇಲೆ ಎಸೆದಿದ್ದರು. ಇದರಿಂದಲೇ 18 ಶಾಸಕರನ್ನು ಅಪಮಾನ ಮಾಡಲಾಗಿದೆ.

ಅಮಾನತು ಆದ ಕೆಲ ಸದಸ್ಯರ ಹೆಸರು

  • ಅಶ್ವಥ್ ನಾರಾಯಣ
  • ಚನ್ನಬಸಪ್ಪ
  • ಶರಣ ಸಲಗರ್
  • ಹರೀಶ್ ಬಿ.ಪಿ
  • ಮುನಿರತ್ನ
  • ಧೀರಜ್ ಮುನಿರಾಜ್
  • ವಿಶ್ವನಾಥ್
  • ಸಿ.ಕೆ ರಾಮಮೂರ್ತಿ
  • ದೊಡ್ಡನಗೌಡ ಪಾಟೀಲ್
  • ಭರತ್ ಶೆಟ್ಟಿ
  • ಮತ್ತಿಮೂಡ್
  • ಚಂದ್ರು ಲಮಾಣಿ
  • ಯಶ್ ಪಾಲ್ ಸುವರ್ಣ

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment