/newsfirstlive-kannada/media/post_attachments/wp-content/uploads/2025/03/UT_KHADHAR_CM.jpg)
ಬೆಂಗಳೂರು: ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರು 18 ಬಿಜೆಪಿ ಸದಸ್ಯರನ್ನು 6 ತಿಂಗಳವರೆಗೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ವಿರೋಧ ಪಕ್ಷದ ಸದಸ್ಯರನ್ನು ಸಸ್ಪೆಂಡ್ ಮಾಡಿರುವುದು ಯಾಕೆ ಎಂದು ನೋಡುವುದಾದರೆ..
ವಿಧಾನಸಭೆಯ ಕಲಾಪದಲ್ಲಿ ಹನಿಟ್ರ್ಯಾಪ್ ಬಗ್ಗೆ ಚರ್ಚೆ ಮಾಡಬೇಕು ಎನ್ನುವುದು ಬಿಜೆಪಿ ಸದಸ್ಯರ ಪಟ್ಟು ಆಗಿತ್ತು. ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಸ್ಪೀಕರ್ ಬಳಿ ಮನವಿ ಮಾಡಿದ್ದರು. ಈ ವೇಳೆ ಸ್ಪೀಕರ್ ಅವರ ಪೀಠಕ್ಕೂ ಅವಮಾನ ಮಾಡಲಾಗಿತ್ತು. ಈ ಕುರಿತು ಸದನದ ನಡುವೆ ಬಿಡುವಿನ ಸಮಯದಲ್ಲಿ ಸಭೆ ನಡೆಸಿ ಚರ್ಚೆ ಮಾಡಿ, ಶಾಸಕರ ಅಮಾನತು ನಿರ್ಧಾರ ಮಾಡಲಾಗಿದೆ.
ಬಿಜೆಪಿ ಸದಸ್ಯರ ಅಮಾನತಿಗೆ ಕಾರಣ ಏನು?
- ಸಚಿವ ಕೆ.ಎನ್ ರಾಜಣ್ಣ ವಿರುದ್ಧ ಹನಿಟ್ರ್ಯಾಪ್ ಯತ್ನ ವಿಚಾರ, ಬಿಜೆಪಿ ಶಾಸಕರ ಗದ್ದಲ
- ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದ್ದ ಬಿಜೆಪಿ ನಾಯಕರು
- ವಿಧಾನಸಭೆಯ ಕಲಾಪದಲ್ಲಿ ಬಿಜೆಪಿ ಸದಸ್ಯರ ಧರಣಿ
- ಪ್ರತಿಭಟನೆ ಮಾಡುವಾಗ ಸ್ಪೀಕರ್ ಪೀಠದ ಮೇಲೆ ಏರಿ ಬಿಜೆಪಿ ಶಾಸಕರ ಗದ್ದಲ
- ಬಿಜೆಪಿ ಶಾಸಕರು ಕಾಗದ ಪತ್ರಗಳನ್ನು ಹರಿದು ಸ್ಪೀಕರ್ ಪೀಠದ ಮೇಲೆ ಎಸೆದಿದ್ದರು
- ಈ ಕುರಿತು ಸ್ಪೀಕರ್ ಕಚೇರಿಯಲ್ಲಿ ಸಚಿವರು ಸಭೆ ನಡೆಸಿ ಚರ್ಚೆ ಮಾಡಿದ್ದರು
- ಸಿಎಂ ಸಿದ್ದರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಸಭೆ
- ಸ್ಪೀಕರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಮಾನತು ನಿರ್ಧಾರ ಕೈಗೊಳ್ಳಲಾಗಿತ್ತು
- ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಮತ್ತೆ ಸದನ ಆರಂಭ
- ಸದನಲ್ಲಿ ಸ್ಪೀಕರ್ ಪೀಠಕ್ಕೆ ಅವಮಾನ ಮಾಡಿದ ವಿಚಾರ ಪ್ರಸ್ತಾಪ
- ಪೀಠಕ್ಕೆ ಅಗೌರವ ತೋರಿಸಿದ್ರೆ ಸಹಿಸಲ್ಲ ಎಂದು ಯುಟಿ ಖಾದರ್ ಬೇಸರ
- 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿ ಸ್ಪೀಕರ್ ಆದೇಶ
- ಬಿಜೆಪಿ ಶಾಸಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ ಯುಟಿ ಖಾದರ್
ಇದನ್ನೂ ಓದಿ:18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ ವಿಧಾನಸಭೆ ಸ್ಪೀಕರ್ ಯುಟಿ ಖಾದರ್
ಅಮಾನತು ಆದ ಬಿಜೆಪಿ ಶಾಸಕರು
ದೊಡ್ಡನಗೌಡ ಪಾಟೀಲ್
ಡಾ. ಅಶ್ವಥ್ ನಾರಾಯಣ
ಬೈರತಿ ಬಸವರಾಜ
ಡಾ. ಶೈಲೇಂದ್ರ ಬೆಲ್ದಾಳೆ
ಮುನಿರತ್ನ, ಧೀರಜ್ ಮುನಿರಾಜು
ಬಿ.ಪಿ. ಹರೀಶ್
ಡಾ. ಭರತ್ ಶೆಟ್ಟಿ
ಚಂದ್ರು ಲಮಾಣಿ
ಉಮಾನಾಥ ಕೋಟ್ಯಾನ್
ಸಿ.ಕೆ. ರಾಮಮೂರ್ತಿ
ಯಶಪಾಲ್ ಸುವರ್ಣ
ಬಿ. ಸುರೇಶ್ ಗೌಡ
ಶರಣು ಸಲಗಾರ್
ಚನ್ನಬಸಪ್ಪ
ಬಸವರಾಜ ಮತ್ತಿಮೂಡ
ಎಸ್. ಆರ್ ವಿಶ್ವನಾಥ್
ಎಂ.ಆರ್. ಪಾಟೀಲ್
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ