newsfirstkannada.com

BREAKING: ಮನೆ ಲಾಕರ್‌ನಲ್ಲಿ ಬರೋಬ್ಬರಿ ₹18 ಕೋಟಿ ಹಣ ಪತ್ತೆ; ರಾಜ್ಯದಲ್ಲಿ IT ಭರ್ಜರಿ ಬೇಟೆ

Share :

Published April 16, 2024 at 8:23pm

Update April 16, 2024 at 8:36pm

    ಮನೆಯ ಲಾಕರ್‌ನಲ್ಲಿ ಇತ್ತು ಬರೋಬ್ಬರಿ 18 ಕೋಟಿ ರೂಪಾಯಿ ಹಣ

    10 ವಾಹನಗಳಲ್ಲಿ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ಕಾರ್ಯಾಚರಣೆ

    ಲೋಕಸಭಾ ಚುನಾವಣೆ ಹೊತ್ತಿನಲ್ಲಿ ದೊಡ್ಡ ಮೊತ್ತದ ಹಣ ಪತ್ತೆ ಮಾಡಿದ IT

ಧಾರವಾಡದಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡಿ ಮನೆಯ ಲಾಕರ್‌ನಲ್ಲಿದ್ದ ಬರೋಬ್ಬರಿ 18 ಕೋಟಿ ರೂಪಾಯಿ ಹಣವನ್ನು ಪತ್ತೆ ಮಾಡಿದ್ದಾರೆ. ಐಟಿ ದಾಳಿ ಹಿನ್ನೆಲೆ ಘಟನಾ ಸ್ಥಳಕ್ಕೆ ಎಸಿಪಿ ಬಸವರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಧಾರವಾಡ ನಗರದ ದಾಸನಕೊಪ್ಪ ಅರ್ನಾ ಅಪಾರ್ಟ್‌ಮೆಂಟ್‌ನಲ್ಲಿ ಬಸವರಾಜ್ ಅವರ ಮನೆ ಇದೆ. ಇಂದು 10 ವಾಹನಗಳಲ್ಲಿ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಬಸವರಾಜ ದತ್ತಣ್ಣವರ ನಿವಾಸದಲ್ಲಿ 18 ಕೋಟಿ ಹಣದ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: BIG BREAKING: ಅತಿ ದೊಡ್ಡ ಎನ್‌ಕೌಂಟರ್‌.. ಟಾಪ್ ಮಾವೋವಾದಿ ನಾಯಕ ಸೇರಿ 29 ಮಂದಿ ಹತ್ಯೆ

ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಇಷ್ಟೊಂದು ದೊಡ್ಡ ಮೊತ್ತ ಹಣ ಸಿಕ್ಕಿರೋದು ಆಶ್ಚರ್ಯಕ್ಕೆ ಕಾರಣವಾಗಿದೆ. ಬಸವರಾಜ ದತ್ತಣ್ಣ ಎಂಬುವರ ನಿವಾಸದಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ ಮುಂದುವರಿದಿದೆ.

ಈ ಮನೆಯಲ್ಲಿ ಲಿಕ್ಕರ್ ಇದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳ ದಾಳಿ ನಡೆಸಿದ್ದರು. ಮನೆಯನ್ನು ಪರಿಶೀಲನೆ ನಡೆಸುವಾಗ ಕಂತೆ, ಕಂತೆ ಹಣ ಪತ್ತೆಯಾಗಿದೆ.
ಐಟಿ ದಾಳಿ ವೇಳೆ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು, ಇನ್ನೂ ಶೋಧ ಕಾರ್ಯ ಮುಂದುವರೆದಿದೆ. ಇಡೀ ಅಪಾರ್ಟ್‌ಮೆಂಟ್ ಬಾಡಿಗೆ ಪಡೆದು ಹಣ ಸಂಗ್ರಹಿಸಿದ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಮನೆ ಲಾಕರ್‌ನಲ್ಲಿ ಬರೋಬ್ಬರಿ ₹18 ಕೋಟಿ ಹಣ ಪತ್ತೆ; ರಾಜ್ಯದಲ್ಲಿ IT ಭರ್ಜರಿ ಬೇಟೆ

https://newsfirstlive.com/wp-content/uploads/2024/04/Dharwad-IT-Raid-2.jpg

Load More