/newsfirstlive-kannada/media/post_attachments/wp-content/uploads/2023/08/HOSPITAL.jpg)
ಮಹಾರಾಷ್ಟ್ರದ ಥಾಣೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಯಲ್ಲಿ 18 ರೋಗಿಗಳು ಸಾವನ್ನಪ್ಪಿದ್ದಾರೆ. ಥಾಣೆ ನಗರಸಭೆ ನಡೆಸುತ್ತಿರುವ ಆಸ್ಪತ್ರೆ ಇದಾಗಿದೆ.
ನಗರಸಭೆ ಆಯುಕ್ತ ಅಭಿಜಿತ್ ಬಂಗೇರ್ ಘಟನೆ ಬಗ್ಗೆ ಮಾತನಾಡಿ, 10 ಮಹಿಳೆಯರು, 8 ಪುರುಷರು ಸಾವನ್ನಪ್ಪಿದ್ದಾರೆ. ಅವರಲ್ಲಿ ನಾಲ್ವರು ಕಲ್ಯಾಣ್ ಭಾಗದವರಾಗಿದ್ದರೆ, ಮೂವರು ಸಹಪುರ ಹಾಗೂ ಭಿವಂಡಿ, ಉಲ್ಲಾಹಸ್ನಗರ, ಗೋವಿಂಡಿ ಏರಿಯಾದಿಂದ ದಾಖಲಾಗಿದ್ದ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಮೃತರ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ.
12 ಮಂದಿ ವಯೋಸಹಜ ಕಾಯಿಲೆಯಿಂದ ಸಾವು
ಅಭಿಜಿತ್ ಬಂಗೇರ್ ನೀಡಿದ ಮಾಹಿತಿ ಪ್ರಕಾರ, ಮುಖ್ಯಮಂತ್ರಿ ಏಕನಾಥ್ ಶಿಂದೆ ಪ್ರಕರವನ್ನು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ವಿಶೇಷ ಕಮಿಟಿ ರಚನೆ ಮಾಡಿ, ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಮೃತ 18 ಮಂದಿಯಲ್ಲಿ 12 ಜನರು ವಯೋಸಹಜ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. 500 ಬೆಡ್ಗಳ ವ್ಯವಸ್ಥೆ ಹೊಂದಿರುವ ಈ ಆಸ್ಪತ್ರೆಯಲ್ಲಿ ನಿತ್ಯವೂ 650ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಒಂದೇ ದಿನ 18 ಜನರ ಪ್ರಾಣ ಹೋಗಿರೋದು ಅನುಮಾನಗಳಿಗೆ ಕಾರಣವಾಗಿದೆ. ವಿವಿಧ ಕಾಯಿಲೆಗಳಿಂದ ದಾಖಲಾಗಿದ್ದರೂ ಕೂಡ ಒಂದೇ ದಿನ ಇಷ್ಟು ರೋಗಿಗಳು ಹೇಗೆ ಸಾವನ್ನಪ್ಪಲು ಸಾಧ್ಯ? ಆಸ್ಪತ್ರೆ ಸಿಬ್ಬಂದಿಯಿಂದ ಏನಾದರೂ ಯಡವಟ್ಟುಗಳು ಆಗಿದೆಯಾ ಅನ್ನೋ ಸಂಶಯ ಶುರುವಾಗಿದೆ. ಹೀಗಾಗಿ, ವಿಷಯ ಗೊತ್ತಾಗುತ್ತಿದ್ದಂತೆಯೇ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ