ಬರೋಬ್ಬರಿ 18 ಅಡಿ ಉದ್ದದ ಕಾಳಿಂಗ.. ಉರಗ ತಜ್ಞರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದ ಸರ್ಪ ಸೆರೆ

author-image
Veena Gangani
Updated On
ಬರೋಬ್ಬರಿ 18 ಅಡಿ ಉದ್ದದ ಕಾಳಿಂಗ.. ಉರಗ ತಜ್ಞರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿದ್ದ ಸರ್ಪ ಸೆರೆ
Advertisment
  • ಮನೆ ಮುಂಭಾಗದ ಮಣ್ಣಿನಡಿಯಲ್ಲಿ ಅಡಗಿದ್ದ ಕಾಳಿಂಗ ಸೆರೆ
  • ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟ ಉರಗ ತಜ್ಞ
  • ಕಾಳಿಂಗ ಸರ್ಪ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಹೆಚ್ಚಿದ್ದ ಆತಂಕ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮನೆಯೊಂದರ ಬಳಿ ಬರೋಬ್ಬರಿ 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ.

ಇದನ್ನೂ ಓದಿ: ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಮತ್ತೆ ಟ್ವಿಸ್ಟ್​​; ಜಯಂತ್​ಗೆ ಜಾನೂ ಬಗ್ಗೆ ಸಿಕ್ತು ಸುಳಿವು!

publive-image

ಶೃಂಗೇರಿ ತಾಲೂಕಿನ ಮೆಣಸೆ ಗ್ರಾಮದಲ್ಲಿ 18 ಅಡಿ ಉದ್ದದ ಕಾಳಿಂಗ ಮನುಷ್ಯರ ಮೇಲೆ ಅಟ್ಯಾಕ್ ಮಾಡಲು ಮುಂದಾಗಿತ್ತು. 18 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷದಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿತ್ತು.

publive-image

ಕೂಡಲೇ ಉರಗ ತಜ್ಞ ಅರ್ಜನ್ ಅವರು ಕಾರ್ಯಚರಣೆ ನಡೆಸಿ ಮನೆ ಮುಂಭಾಗದ ಮಣ್ಣಿನಡಿಯಲ್ಲಿ ಅಡಗಿ ಕುಳಿತುಕೊಂಡಿದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಆದರೆ ಇದೇ ವೇಳೆ ಉರಗ ತಜ್ಞರ ಮೇಲೆ ಅಟ್ಯಾಕ್​ ಮಾಡೋದಕ್ಕೆ ಮುಂದಾಗಿತ್ತು.

publive-image

ಇದಾದ ಬಳಿಕ ಉರಗ ತಜ್ಞ ಅರ್ಜನ್ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾಡಿಗೆ ಬಿಟ್ಟು ಬಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment