ಸರ್ಕಾರಿ ಉದ್ಯೋಗ ಅರ್ಜಿಗೂ 18% GST; ಮೋದಿ ಸರ್ಕಾರದ ಮೇಲೆ ಪ್ರಿಯಾಂಕಾ ಕಿಡಿ!

author-image
admin
Updated On
ಸರ್ಕಾರಿ ಉದ್ಯೋಗ ಅರ್ಜಿಗೂ 18% GST; ಮೋದಿ ಸರ್ಕಾರದ ಮೇಲೆ ಪ್ರಿಯಾಂಕಾ ಕಿಡಿ!
Advertisment
  • ‘ನಿರುದ್ಯೋಗಿ ಯುವಕರ ಕನಸಿಗೆ ಕೇಂದ್ರ ಸರ್ಕಾರ ದ್ರೋಹ’
  • ಮೋದಿ ಸರ್ಕಾರದ ಮೇಲೆ ಸಂಸದೆ ಪ್ರಿಯಾಂಕಾ ಗಾಂಧಿ ಕಿಡಿ
  • ಪಾಪ್‌ಕಾರ್ನ್ ಸೇರಿ ಸರ್ಕಾರಿ ಉದ್ಯೋಗದ ಅರ್ಜಿಗೂ GST

ನವದೆಹಲಿ: ಕೇಂದ್ರ ಸರ್ಕಾರದ GST ನೀತಿ ಮತ್ತೊಮ್ಮೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. 55ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವೊಂದು ಮಹತ್ವದ ಬದಲಾವಣೆ ಘೋಷಣೆ ಮಾಡಿದ್ದಾರೆ. ಪಾಪ್‌ಕಾರ್ನ್ ಸೇರಿದಂತೆ ಸರ್ಕಾರಿ ಉದ್ಯೋಗದ ಅರ್ಜಿಗೂ GST ವಿಧಿಸಿರೋದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

publive-image

ಸಕ್ಕರೆ ಅಂಶವಿರುವ ಪಾಪ್‌ ಕಾರ್ನ್‌ಗಳಿಗೆ ಜಿಎಸ್‌ಟಿ ಹೆಚ್ಚಿಸಲಾಗಿದೆ. ಪಾಪ್‌ ಕಾರ್ನ್‌ಗಳ ವಿಚಾರ ಒಂದು ಕಡೆಯಾದ್ರೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ದೇಶದ ನಿರುದ್ಯೋಗಿ ಯುವಕರಿಗೆ ಕೇಂದ್ರ ಸರ್ಕಾರ ದ್ರೋಹ ಬಗೆದಿದೆ ಎಂದಿದ್ದಾರೆ.

ಇದನ್ನೂ ಓದಿ: Shyam Benegal: ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ 

ಸರ್ಕಾರಿ ಉದ್ಯೋಗ ಅರ್ಜಿಗೂ 18% GST ಹಾಕಲಿದೆ ಎಂದಿರುವ ಪ್ರಿಯಾಂಕಾ ಗಾಂಧಿ ಅವರು ಲಖನೌ ಕಲ್ಯಾಣ್ ಸಿಂಗ್ ಕಾನ್ಸರ್ ಇನ್ಸಿಟ್ಯೂಟ್ ಪ್ರಕಟಣೆಯನ್ನ ಉದಾಹರಣೆಯಾಗಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಂಸದೆ ಪ್ರಿಯಾಂಕಾ ಗಾಂಧಿ, ಬಿಜೆಪಿ ಸರ್ಕಾರ ಪರೀಕ್ಷೆಯ ಅರ್ಜಿ ಮೇಲೂ 18% GST ಹಾಕಿದೆ ಎಂದಿದ್ದಾರೆ.


">December 23, 2024

ಬಿಜೆಪಿ ಸರ್ಕಾರ ಈಗ ಪ್ರತಿಯೊಂದು ಸರ್ಕಾರಿ ಉದ್ಯೋಗಗಳ ಅರ್ಜಿಗೂ GST ಹಾಕುತ್ತಿದೆ. ಈ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಿಎಸ್‌ಟಿ ಹೆಸರಲ್ಲಿ ಲೂಟಿ ಮಾಡುತ್ತಿದೆ ಎಂದಿದ್ದಾರೆ. ಅಗ್ನಿವೀರ್ ಸೇರಿದಂತೆ ಸರ್ಕಾರಿ ಉದ್ಯೋಗಗಳ ಅರ್ಜಿಗೆ ಜಿಎಸ್‌ಟಿ ಹಾಕೋ ಮೂಲಕ ಸರ್ಕಾರ ಈ ದೇಶದ ಯುವಕರ ಕನಸಿಗೆ ದ್ರೋಹ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment