/newsfirstlive-kannada/media/post_attachments/wp-content/uploads/2025/06/isreal1.jpg)
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಮೂರನೇ ದಿನ ಕದನ ಮತ್ತಷ್ಟು ತಾರಕ್ಕಕೇರಿದೆ. ನಿನ್ನೆ ರಾತ್ರಿ ಇರಾನ್, ಇಸ್ರೇಲ್ನ ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ನಾಶಗೊಳಿಸಿ, ಟೆಲ್ ಅವಿವ್ನಲ್ಲಿ ಬಾಂಬ್ಗಳ ಸುರಿ ಮಳೆಯನ್ನೇ ಗೈದಿತ್ತು. ಇದರಿಂದ ಕೆರಳಿ ಕೆಂಡವಾಗಿರುವ ಇಸ್ರೇಲ್ ಕೂಡ ಇರಾನ್ ಮೇಲೆ ಕೌಂಟರ್ ದಾಳಿ ನಡೆಸಿದ್ದು, ಇರಾನ್ ಹೊತ್ತಿ ಉರಿದಿದೆ.
ಇದನ್ನೂ ಓದಿ:ಬರೀ ‘‘MAYDAY.. MAYDAY’ ಅಲ್ಲ.. ಪತನದ ಕೊನೆ ಕ್ಷಣದಲ್ಲಿ ಪೈಲಟ್ ಹೇಳಿದ್ದೇನು? ಥ್ರಸ್ಟ್ ಅಂದರೇನು..?
ಈ ಮಧ್ಯೆ ಇಸ್ರೇಲ್ನಲ್ಲಿ ಕರ್ನಾಟಕ ನಿಯೋಗದ 18 ಮಂದಿ ಸಿಲುಕಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅಧ್ಯಯನಕ್ಕಾಗಿ ಇಸ್ರೇಲ್ಗೆ ತೆರಳಿದ್ದರು. ಬಿ ಪ್ಯಾಕ್ ಸಂಸ್ಥೆಯ ಮೂಲಕ ಅಧ್ಯಯನಕ್ಕಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗದ 18 ಮಂದಿ ತೆರಳಿದ್ದರು. ಶುಕ್ರವಾರ ಬೆಂಗಳೂರಿಗೆ 18 ಮಂದಿ ವಾಪಸ್ ಆಗಬೇಕಿತ್ತು. ಆದರೆ ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ನಡೆಯುತ್ತಿರುವ ಕಾರಣ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ವಾಪಸ್ಸಾಗದೆ ಇಡೀ ತಂಡ ಅಲ್ಲೇ ಸಿಕ್ಕಿಹಾಕಿಕೊಂಡಿದೆ. ಇನ್ನೂ ಕರ್ನಾಟಕದವರು ಇದ್ದ ಒಂದು ಕಿ.ಮೀ ದೂರದಲ್ಲೇ ಬಾಂಬ್ ಬ್ಲಾಸ್ಟ್ ಆಗಿದೆ. ಹೀಗಾಗಿ ಕರ್ನಾಟಕದ ಮಂದಿ ಆತಂಕದರಲ್ಲಿದ್ದಾರೆ.
ಇನ್ನೂ, ಕರ್ನಾಟಕ ಸರ್ಕಾರವು ಇಸ್ರೇಲ್ನಲ್ಲಿ ಸಿಕ್ಕಿಹಾಕಿಕೊಂಡವರ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಇಸ್ರೇಲ್ನ ದಾಳಿಯಲ್ಲಿ ಇರಾನ್ನ 9 ಜನ ಪರಮಾಣು ವಿಜ್ಞಾನಿಗಳು ಹಾಗೂ ಪ್ರಮುಖ ಕಮಾಂಡರ್ಗಳು ಮೃತಪಟ್ಟಿದ್ದಾರೆ. ಇನ್ನೂ, ಟೆಲ್ ಅವೀವ್ ಮೇಲೆ ಕ್ಷಿಪಣಿಗಳು ಸುರಿಮಳೆ ಗೈದಿದ್ದಿತ್ತು. ಇದರಲ್ಲಿ 70ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ