/newsfirstlive-kannada/media/post_attachments/wp-content/uploads/2025/06/GUJARAT-RAIN.jpg)
ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲೂ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ಸತತವಾಗಿ ಸುರಿದ ಮಳೆಗೆ 18 ಮಂದಿ ಜೀವ ಕಳೆದುಕೊಂಡಿದ್ದಾರೆ.
ಮಳೆಯ ಆರ್ಭಟ ಜೋರಾದ ಹಿನ್ನೆಲೆಯಲ್ಲಿ ರಾಜ್ಯದ 25 ಜಿಲ್ಲೆಗಳಿಗೆ NDRF, SDRF ತಂಡಗಳ ನಿಯೋಜನೆ ಮಾಡಲಾಗಿದೆ. ಬೋಟಡ್ ಜಿಲ್ಲೆಯಲ್ಲಿ ಕಮದಾಡ್ ಡ್ಯಾಂ ಗೇಟ್ ತೆರೆದು ನೀರನ್ನು ಹೊರ ಬಿಡಲಾಗಿದೆ. ಡ್ಯಾಂ ತುಂಬಿದ್ದರಿಂದ ಅಧಿಕಾರಿಗಳು ಮುಂಜಾಗೃತ ಕ್ರಮವಾಗಿ ಗೇಟ್ ತೆರೆದಿದ್ದಾರೆ.
ಇದನ್ನೂ ಓದಿ: ಅನ್ನದಾತರ ಮೊಗದಲ್ಲಿ ಸಂತಸ.. ಹೆಚ್ಚುತ್ತಲೇ ಇದೆ KRS ನೀರಿನ ಮಟ್ಟ..
ಮತ್ತೊಂದು ಕಡೆ ಗುಜರಾತ್ ಸಿಎಂ ಭುಪೇಂದ್ರ ಪಟೇಲ್ ಅವರು ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇನ್ನೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ನಿನ್ನೆ ಸಂಜೆ ಭಾರಿ ಮಳೆಯಾಗಿದೆ. ಹೀಗಾಗಿ ದೆಹಲಿಯಿಂದ ಹಾರಾಟ ನಡೆಸಬೇಕಿದ್ದ 14 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ.
ಮಹಾರಾಷ್ಟ್ರದ ಮುಂಬೈನಲ್ಲೂ ಬೆಳ್ಳಂಬೆಳಗ್ಗೆ ಭಾರೀ ಮಳೆ ಆಗಿದೆ. ಅಲ್ಲದೇ ಹವಾಮಾನ ಇಲಾಖೆ ಮುಂದಿನ 24 ಗಂಟೆಯಲ್ಲಿ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬೀಳಲಿದೆ ಅಂತಾ ಎಚ್ಚರಿಕೆ ನೀಡಿದೆ. ಬೆಳಗ್ಗೆ ಸುರಿದ ಮಳೆಯಿಂದಾಗಿ ಶಾಲೆ, ಕಾಲೇಜು, ಕಚೇರಿ ಹೋಗೋರಿಗೆ ಮತ್ತು ದಿನನಿತ್ಯದ ಚಟುವಟಿಕೆಗಳಿಗೆ ತೊಂದರೆಯಾಗಿದೆ.
ಇದನ್ನೂ ಓದಿ: ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟ ದರ್ಶನ್ ದಂಪತಿ; ವಿಶೇಷತೆ ಏನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ