/newsfirstlive-kannada/media/post_attachments/wp-content/uploads/2024/05/Chattisghar-1.jpg)
ಮಿನಿ ಗೂಡ್ಸ್​ ವಾಹನವೊಂದು ಕಣಿವೆಗೆ ಉರುಳಿ ಬಿದ್ದ ಘಟನೆ ಛತ್ತೀಸ್​ಗಢದ ಕಬೀರ್​ಧಾಮ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ದುರ್ಘಟನೆಯಲ್ಲಿ ಹದಿನೇಳು ಮಹಿಳೆಯರು ಮತ್ತು ಓರ್ವ ಪುರುಷ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರದಂದು ಈ ಘಟನೆ ನಡೆದಿದೆ. ಜಜ್ದೂರು ಪೊಲೀಸ್​ ಠಾಣೆ ವ್ಯಾಪ್ತಿಯ ಬಹಪಾನಿ ಗ್ರಾಮದ ಬಳಿಯ ಬಂಜಾರಿ ಘಾಟ್​ ಬಳಿ ಮಿನಿ ಗೂಡ್ಸ್​ ಕಣಿವೆಗೆ ಉರುಳಿದೆ. ಮದ್ಯಾಹ್ನ 1.45ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ.
ಸರಕು ತುಂಬುವ ವಾಹನದಲ್ಲಿ ಜನರು ಸಂಚರಿಸುತ್ತಿದ್ದರು. ಹೀಗೆ ಸಂಚರಿಸುವ ವೇಳೆ ವಾಹನ ಸ್ಕಿಡ್​ ಆಗಿ ಕಣಿವೆಗೆ ಉರುಳಿ ಬಿದ್ದಿದೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ರಕ್ಷಣಾ ತಂಡ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಜೊತೆಗೆ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us