18 ವರ್ಷದ ಯುವತಿಗೆ ದಪ್ಪ ಆಗುವ ಭಯ.. ಆನ್‌ಲೈನ್ ಡಯಟ್‌ ಫಾಲೋ ಮಾಡಿ ದಾರುಣ ಸಾವು!

author-image
admin
Updated On
18 ವರ್ಷದ ಯುವತಿಗೆ ದಪ್ಪ ಆಗುವ ಭಯ.. ಆನ್‌ಲೈನ್ ಡಯಟ್‌ ಫಾಲೋ ಮಾಡಿ ದಾರುಣ ಸಾವು!
Advertisment
  • ಯಾವುದೇ ಕಾರಣಕ್ಕೂ ದಪ್ಪ ಆಗಬಾರದು ಅನ್ನೋ ದೃಢ ನಿರ್ಧಾರ
  • ವಾಟರ್‌ ಡಯಟ್ ಫಾಲೋ ಮಾಡಿ ಪ್ರಾಣ ಬಿಟ್ಟ 18 ವರ್ಷದ ಯುವತಿ
  • ಈಕೆಗೆ ಏನಾಯ್ತು ಅಂತಾ ಗೊತ್ತಾದ್ರೆ ನೀವು ಅಯ್ಯೋ ಪಾಪ ಅಂತೀರಾ!

ನಮ್ಮ ಬದುಕಿನಲ್ಲಿ ಆನ್‌ಲೈನ್ ಗೀಳು ಹೆಚ್ಚಾದಂತೆ ಅದರಿಂದ ಆಗುವ ಯಡವಟ್ಟು ಕೂಡ ಅಷ್ಟೇ ಹೆಚ್ಚಾಗುತ್ತಿದೆ. ಕೇರಳದಲ್ಲಿ 18 ವರ್ಷದ ಯುವತಿ ದಪ್ಪ ಆಗುವ ಭಯದಲ್ಲಿ ಆನ್‌ಲೈನ್‌ನಲ್ಲಿ ಸಿಗುವ ಡಯಟ್ ಆಹಾರ ಪದ್ಧತಿಯನ್ನು ಫಾಲೋ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಹೇಗಾಯ್ತು? ಏನಾಯ್ತು ಅನ್ನೋ ಈ ಸ್ಟೋರಿ ಅಯ್ಯೋ ಪಾಪ ಅನ್ನುವಂತಿದೆ.

18 ವರ್ಷದ ಈ ಶ್ರೀನಂದ ಕನ್ನೂರು ಜಿಲ್ಲೆಯ ಕೂತುಪರಂಬದ ನಿವಾಸಿ. ಈಕೆಗೆ ತಾನು ದಪ್ಪ ಆಗುವ ಭಯ ಕಾಡುತ್ತಾ ಇತ್ತು. ಯಾವುದೇ ಕಾರಣಕ್ಕೂ ದಪ್ಪ ಆಗಬಾರದು ಅಂತ ನಿರ್ಧರಿಸಿದ್ದ ಶ್ರೀನಂದ ಆನ್‌ಲೈನ್‌ನಲ್ಲಿ ಸಿಗುವ ಡಯಟ್‌ಗಳನ್ನು ಫಾಲೋ ಮಾಡಿದ್ದಾರೆ.

publive-image

ವಾಟರ್ ಡಯಟ್‌ಗೆ ಜೀವ ಹೋಯ್ತು!
ಶ್ರೀನಂದ ಮಾಡಿದ್ದು ಅಂತಿಂಥ ಡಯಟ್ ಅಲ್ಲ. ಅದರ ಹೆಸರೇ ವಾಟರ್ ಡಯಟ್. ಶ್ರೀನಂದ ಸಂಬಂಧಿಕರು ಹೇಳುವ ಪ್ರಕಾರ ಈಕೆ ಹಲವು ದಿನಗಳ ಕಾಲ ಊಟವನ್ನೇ ಮಾಡುತ್ತಿರಲಿಲ್ಲ. ಬರೀ ಬಿಸಿ ನೀರು ಕುಡಿದೇ ಜೀವಿಸುತ್ತಿದ್ದಳು. ದಪ್ಪ ಆಗುವ ಭಯದಲ್ಲಿ ಆನ್‌ಲೈನ್‌ನಲ್ಲಿ ಹೇಳಲಾಗುವ ಈ ವಾಟರ್‌ ಡಯಟ್‌ ಅನ್ನು ಕಟ್ಟು ನಿಟ್ಟಾಗಿ ಅನುಸರಿಸುತ್ತಿದ್ದಳು.

ಇದನ್ನೂ ಓದಿ: ಇಡೀ ಜೀವನದಲ್ಲಿ ಇವರು ಸ್ನಾನ ಮಾಡುವುದು ಒಂದೇ ಬಾರಿ! ಆದರೂ ದುರ್ವಾಸನೆ ಬರುವುದಿಲ್ಲ, ಸೌಂದರ್ಯಕ್ಕೆ ಧಕ್ಕೆಯಿಲ್ಲ! 

ಅತಿಯಾದ ಹಸಿವನ್ನು ನಿಯಂತ್ರಿಸುತ್ತಿದ್ದ ಶ್ರೀನಂದ ಕೊನೆಗೆ ತಲಶ್ಶೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೆ ವೆಂಟಿಲೇಟರ್‌ನಲ್ಲಿ ಉಸಿರಾಡುತ್ತಿದ್ದ ಶ್ರೀನಂದ ಪ್ರಾಣ ಬಿಟ್ಟಿದ್ದಾರೆ. ಶ್ರೀನಂದ ಮೊದಲ ಪದವಿಪೂರ್ವ ವಿದ್ಯಾರ್ಥಿನಿಯಾಗಿದ್ದು ಹಸಿವು ನಿಯಂತ್ರಿಸಿ ಕೇವಲ 24 ಕೆ.ಜಿಗೆ ಕುಸಿದಿದ್ದರು.

ಕೇರಳದ ಯುವತಿ ಶ್ರೀನಂದ ದುರಂತದ ಬಗ್ಗೆ ವೈದ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ಕಳೆದ 5-6 ತಿಂಗಳಿಂದ ಶ್ರೀನಂದ ಅತಿಯಾದ ಹಸಿವನ್ನು ನಿಯಂತ್ರಿಸಿದ್ದು ಸಾವಿಗೆ ಕಾರಣವಾಗಿದೆ. ಯಾರು ಕೂಡ ಇಂತಹ ದುಸ್ಸಾಹಸ ಮಾಡಬೇಡಿ ಅನ್ನೋ ಎಚ್ಚರಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment