newsfirstkannada.com

ಹೆತ್ತ ಮಗಳನ್ನೇ ಬರ್ಬರವಾಗಿ ಕೊಲೆ ಮಾಡಿದ ತಾಯಿ; ಅಸಲಿಗೆ ಆಗಿದ್ದೇನು?

Share :

Published April 29, 2024 at 11:07pm

Update April 29, 2024 at 11:21pm

  ಮಗಳು ಸಾಹಿತಿ ಮತ್ತು ತಾಯಿ ಪದ್ಮಜಾ ನಡುವೆ ಆ ಒಂದು ವಿಚಾರಕ್ಕೆ ಗಲಾಟೆ

  ಮಗಳನ್ನು ಕೊಲೆ ಮಾಡಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರೋ ತಾಯಿ

  ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಕೊಲೆ ಇದು

ಬೆಂಗಳೂರು: ತಾಯಿ ಮಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತಾಯಿ ಹಾಗೂ ಮಗಳು ಪರಸ್ಪರ ಚಾಕುವಿನಿಂದ ಇರಿದುಕೊಂಡ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಹಿತಿ (18) ತಾಯಿಯಿಂದಲೇ ಕೊಲೆಯಾದ ಮಗಳು.

ಮೃತ ಸಾಹಿತಿ ಪಿಯುಸಿ ಚೆನ್ನಾಗಿಯೇ ಓದುತ್ತಿದ್ದಳು. ಆದ್ರೆ ಮೊನ್ನೆ ನಡೆದ ಪಿಯುಸಿ ಎಕ್ಸಾಂ ಎರಡು ಸಬ್ಜೆಕ್ಟ್​ಗೆ ಸಾಹಿತಿ ಅಟೆಂಡ್ ಅಗಿರಲಿಲ್ವಂತೆ. ಹೀಗಾಗಿ ರಿಸಲ್ಟ್ ಫೇಲ್ ಅಂತಾ ಬಂದಿದೆ. ಇದರಿಂದ ಮಗಳನ್ನ ಓದಿಸ್ತಿದ್ದ ಪದ್ಮಜಾ ಅವಳು ಒಳ್ಳೆ ಪರ್ಸೆಂಟೇಜ್ ತೆಗೆಯಬೇಕು ಅಂತಾ ಆಸೆ ಪಟ್ಟಿದ್ದರು. ಆದ್ರೆ ರಿಸಲ್ಟ್ ಫೇಲ್ ಆಗಿತ್ತು. ಇದೇ ವಿಚಾರವಾಗಿ ತಾಯಿ ಪದ್ಮಜಾ ಮಗಳು ಸಾಹಿತಿ ನಡುವೆ ಆಗಾಗ ಜಗಳ ನಡೀತಿತ್ತು.

ಇದನ್ನೂ ಓದಿ: ಬಿಸಿಲಲ್ಲಿ ತಿರುಗಾಡೋ ಜನರೇ ಎಚ್ಚರ! ಚೂರು ಯಾಮಾರಿದ್ರೂ ಈ ರೋಗಗಳು ಗ್ಯಾರಂಟಿ!

ಹೀಗೆ ಇಂದು ರಾತ್ರಿ 7.30ರ ಸುಮಾರಿಗೆ ತಾಯಿ ಮಗಳ ಮಧ್ಯೆ ಜಗಳ ಶುರುವಾಗಿದೆ. ಇದೇ ವೇಳೆ ಆಗ ಈ ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ತಾಯಿ ಹಾಗೂ ಮಗಳ ಚಾಕುವಿನಿಂದ ಇರಿದು ಕೊಂಡಿದ್ದಾರೆ. ಪರಿಣಾಮ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಪ್ರಾಣಪಾಯದಿಂದ ಪಾರಾಗಿದ್ದಾಳೆ. ಸದ್ಯ ತಾಯಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಾಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಬನಶಂಕರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆತ್ತ ಮಗಳನ್ನೇ ಬರ್ಬರವಾಗಿ ಕೊಲೆ ಮಾಡಿದ ತಾಯಿ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/04/aamir-khan3.jpg

Load More