/newsfirstlive-kannada/media/post_attachments/wp-content/uploads/2025/01/18-Year-Girl.jpg)
ಆಕೆ 18ರ ದಿಟ್ಟತನದ ಬಾಲೆ, ಹಠವಾದಿ, ಚಿಕ್ಕವಳಿರುವಾಗಲೇ ಕನಸೊಂದನ್ನ ಕಂಡಿದ್ದಳು. ಆಕನಸು ನನಸಾಗಲಿ ಅಂತ ಹಪಿಹಪಿಸ್ತಿದ್ಲು. ಇದೀಗ ಆ ಕನಸನ್ನ ಆಕೆ ಏಕಾಂಗಿಯಾಗಿ ಪೂರ್ಣಗೊಳಿಸಿದ್ದಾಳೆ. ಹಾಗಾದ್ರೆ, ದಿಟ್ಟ ಬಾಲಕಿಯ ಸಾಧನೆ ಏನು? ಈ ಕುರಿತು ಇಲ್ಲಿದೆ ಎಲ್ಲರಿಗೂ ಪ್ರೇರಣೆದಾಯಕ ವರದಿ.
ಸಾಧನೆ ಮಾಡಬೇಕು ಎಂಬ ತುಡಿತ ಮನದಲ್ಲಿರಬೇಕು.. ಆ ತುಡಿತ ಸಿದ್ಧಿಯಾಗಬೇಕು ಅಂದ್ರೆ ಛಲ ಇರಬೇಕು.. ಈ ರೀತಿಯ ಛಲ ಇದ್ದಾಗಲೇ ಈ ಯುವತಿಯಂತೆ ಸಾಧನೆ ಮಾಡೋಕೆ ಸಾಧ್ಯ. ಹೀಗೆ ರಸ್ತೆಯಲ್ಲಿ ಸ್ಕೂಟಿ ಓಡಿಸ್ತಿರೋ ಯುವತಿ ಅದೇನ್ ಸಾಧನೆ ಮಾಡಿದ್ದಾಳೆ ಅಂತ ಕೇಳಿದ್ರೆ ಅಚ್ಚರಿ ನಿಶ್ಚಿತ.
/newsfirstlive-kannada/media/post_attachments/wp-content/uploads/2025/01/18-Year-Girl-1.jpg)
ಸ್ಕೂಟಿಯಲ್ಲಿ ಸೋಲೋ ರೈಡ್ ಮಾಡುತ್ತಿರೋ ಯುವತಿಯ ಹೆಸರು ನಾಗರತ್ನಾ ಮೇಟಿ. ಡಿಪ್ಲೊಮಾ ವಿದ್ಯಾರ್ಥಿನಿಯಾಗಿರೋ ಈಕೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬರೋಬ್ಬರಿ 8,033 ಕಿಮೀ ಏಕಾಂಗಿಯಾಗಿ ಸೋಲೋ ಸ್ಕೂಟಿ ರೈಡ್ ಮಾಡಿ ಗಮನ ಸೆಳೆದಿದ್ದಾಳೆ. ದೇಶ ಸುತ್ತು.. ಕೋಶ ಓದು ಎನ್ನುವಂತೆ ಸುಮಾರು 20 ದಿನಗಳ ಕಾಲ ಬೆಳಗ್ಗೆ 6 ಗಂಟೆಯಿಂದ 6 ಗಂಟೆವರೆಗೆ ಸ್ಕೂಟಿ ರೈಡ್ ಮಾಡಿ ಸಾಧನೆ ಮಾಡಿದ್ದಾಳೆ. ಹೋಗುವ ದಾರಿಯ ಮಧ್ಯೆ ಹತ್ತು ಹಲವು ಸಮಸ್ಯೆಯ ಏಳುಬೀಳುಗಳೊಂದಿಗೆ ಈ ಅಚಿವ್‌ಮೆಂಟ್ ಮಾಡಿದ್ದಾಳೆ. ಇನ್ನು ಬಾಲ್ಯದಿಂದಲೇ ಸೋಲೋ ಸ್ಕೂಟಿ ರೈಡ್ ಮಾಡಬೇಕೆಂಬ ಅಂತ ನಾಗರತ್ ಕನಸು ಹೊತ್ತಿದ್ದಳು. ವಯಸ್ಸಿನ ಸಮಸ್ಯೆಯಿಂದ ಡ್ರೈವಿಂಗ್ ಲೈಸನ್ಸ್ ಸಿಗದೇ ಪರಿತಪಿಸುತ್ತಿದ್ದಳು. ಇದೀಗ 18 ವರ್ಷ ತುಂಬುತ್ತಿದ್ದಂತೆ ಸ್ಕೂಟಿ ಏರಿ ನಾಗರತ್ನಾ ಲಾಂಗ್ ರೈಡ್ ಕನಸನ್ನು ನನಸು ಮಾಡಿಕೊಂಡಿದ್ದಾಳೆ.
/newsfirstlive-kannada/media/post_attachments/wp-content/uploads/2025/01/18-Year-Girl-3.jpg)
ಇನ್ನು ಯುವತಿ ನಾಗರತ್ನ ಮನೆಯಲ್ಲಿ ತಾಯಿ ಗಂಗಮ್ಮ ಕೆಟರಿಂಗ್ ಮಾಡುವ ಮೂಲಕ ಮನೆ ನಡೆಸುತ್ತಿದ್ದಾರೆ. ಮಗಳ ಕನಸನ್ನ ಕಂಡು ತಾಯಿ ಗಂಗಮ್ಮ ಮೊದಲು ಹಿಂಜರಿದಿದ್ದರಂತೆ. ಆದ್ರೆ ಸಂಬಂಧಿಗಳ, ನೆರೆಹೊರೆಯವರ ಸಹಕಾರ ಇಚ್ಛೆಯಂತೆ ಸೋಲೋ ಸ್ಕೂಟಿ ರೈಡ್ ಗೆ ಒಪ್ಪಿದ್ದಾರೆ. ಇದಕ್ಕೆ ಪೂರಕವಾಗಿ ನಾಗರತ್ನಾ ಸಹ ಗಟ್ಟಿಗಿತ್ತಿಯಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೋಲೋ ಸ್ಕೂಟಿ ರೈಡ್ ಮಾಡಿದ್ದಾಳೆ. ಈ ಮಧ್ಯೆ ಇಂಡಿಯಾ ಬುಕ್ ಆಪ್ ರೆಕಾರ್ಡ್‌ಗೂ ಸಹ ತನ್ನ ಸಾಧನೆಯ ಮಾಹಿತಿ ಕಳಿಸಿದ್ದಾಳೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನ ಒಬ್ಬೊಬ್ಬರನ್ನೇ ಹೊರಗೆ ಕಳಿಸೋಕೆ ಹಿಂದೆ ಮುಂದೆ ನೋಡೋ ಕಾಲದಲ್ಲಿ ಮಗಳು ಸಾಧನೆ ಮಾಡಿದ್ದು ಹೆಮ್ಮೆ ಅಂತಾರೆ ತಾಯಿ ಗಂಗಮ್ಮ.
/newsfirstlive-kannada/media/post_attachments/wp-content/uploads/2025/01/18-Year-Girl-2.jpg)
ಇದನ್ನೂ ಓದಿ:ಮಹಾಕುಂಭಮೇಳದ ಮೊನಾಲಿಸಾ ದಿಢೀರ್ ಕಣ್ಮರೆ ಯಾಕೆ? ವೈರಲ್ ಹುಡುಗಿಗೆ ಆಗಿದ್ದೇನು?
ಯುವತಿಯೊಬ್ಬಳು ಏಕಾಂಗಿಯಾಗಿ ಸ್ಕೂಟಿ ರೈಡ್ ಮೂಲಕ ದೇಶಪರ್ಯಟನೆ ಮಾಡಿ ಇತರೆ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾಳೆ. ಈಕೆ ಕಂಡ ಇನ್ನಷ್ಟು ಕನಸುಗಳು ನನಸಾಗಲಿ.. ಮತ್ತಷ್ಟು ಸಾಧನೆಗಳನ್ನ ಮಾಡಲಿ ಅನ್ನೋದೆ ಎಲ್ಲರ ಹಾರೈಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us