/newsfirstlive-kannada/media/post_attachments/wp-content/uploads/2025/04/JK-KANNADAIGARA.jpg)
ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಕೊನೆಯುಸಿರೆಳೆದಿದ್ದ ಬೆಂಗಳೂರಿನ ಭರತ್ ಭೂಷಣ್ ಮೃತದೇಹ ಮತ್ತಿಕೆರೆಯಲ್ಲಿರುವ ಸ್ವಗೃಹ ತಲುಪಿದೆ. ಈಗಾಗಲೇ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪೊಲೀಸರು ಮನೆ ಮುಂದೆ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ವಾಹನಕ್ಕೆ ನಿರ್ಬಂಧ ವಿಧಿಸಿದ್ದಾರೆ.
ಶಿವಮೊಗ್ಗಕ್ಕೆ ಮಂಜುನಾಥ್ ಮೃತದೇಹ
ಕಾಶ್ಮೀರ ಪ್ರವಾಸಕ್ಕೆಂದು ತೆರಳಿ ಘೋರ ದುರಂತ ಅಂತ್ಯ ಕಂಡ ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಅವರ ಮೃತದೇಹವನ್ನ ಆ್ಯಂಬುಲೆನ್ಸ್ ಮೂಲಕ ಶಿವಮೊಗಕ್ಕೆ ಕರೆತರಲಾಗುತ್ತಿದೆ. ಏರ್ಪೋರ್ಟ್ನಲ್ಲಿ ಎಲ್ಲಾ ಪ್ರಕ್ರಿಯೆಗಳನ್ನ ಮುಗಿಸಿ ಎಸ್ಕಾರ್ಟ್ ಭದ್ರತೆ ಮೂಲಕ ಮಂಜುನಾಥ್ ಪಾರ್ಥಿವ ಶರೀರವನ್ನ ಶಿವಮೊಗಕ್ಕೆ ರವಾನಿಸಲಾಗುತ್ತಿದ್ದು, ಬೆಳಗ್ಗೆ 9 ಗಂಟೆ ಸುಮಾರಿಗೆ ಮಂಜುನಾಥ್ ಮೃತದೇಹ ಶಿವಮೊಗ್ಗ ತಲುಪುವ ಸಾಧ್ಯತೆ ಇದೆ.
ಇದನ್ನೂ ಓದಿ: ತಾಯ್ನಾಡಿಗೆ ಬಂದ ಮಂಜುನಾಥ್, ಭರತ್ ಮೃತದೇಹ.. ಅಗಲಿದ ಪುತ್ರನ ನೋಡಿ ತಂದೆ-ತಾಯಿ ಕಣ್ಣೀರು
ಮೃತರ ಕುಟುಂಬಗಳಿಗೆ ಪರಿಹಾರ
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ಜೀವ ಕಳೆದುಕೊಂಡವರ ಕುಟುಂಬಸ್ಥರಿಗೆ ಸಿಎಂ ಸಿದ್ದರಾಮಯ್ಯ ಪರಿಹಾರ ಘೋಷಣೆ ಮಾಡಿದ್ದಾರೆ. ಕರ್ನಾಟಕದ ಒಟ್ಟು ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಇಂದು ಕರ್ನಾಟಕಕ್ಕೆ ಮರಳಲಿರುವ 180 ಕನ್ನಡಿಗರು
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಸಿಲುಕಿರುವ ಕನ್ನಡಿಗರು ಇವತ್ತು ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ. ಶ್ರೀನಗರದಿಂದ 177 ಜನರ ತಂಡ ಬೆಂಗಳೂರಿಗೆ ಮರಳಲಿದ್ದಾರೆ. ಬೆಳಗ್ಗೆ 7.30ಕ್ಕೆ ಶ್ರೀನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಪ್ರವಾಸಿಗರನ್ನ ಸುರಕ್ಷಿತವಾಗಿ ಕರೆತರುವ ಜವಬ್ದಾರಿ ಹೊತ್ತು ಕಾಶ್ಮೀರಕ್ಕೆ ತೆರಳಿರುವ ಸಚಿವ ಸಂತೋಷ್ ಲಾಡ್, ತಮ್ಮ ಸ್ವಂತ ದುಡ್ಡಿನಲ್ಲೇ 177 ಕನ್ನಡಿಗರನ್ನ ಬೆಂಗಳೂರಿಗೆ ಕರೆತರಲಿದ್ದಾರೆ.
ಇದನ್ನೂ ಓದಿ: Pahalgam attack: ಕೇಂದ್ರದಲ್ಲಿ ಇವತ್ತು ಸರ್ವ ಪಕ್ಷ ಸಭೆ; ಪಾಕಿಸ್ತಾನಕ್ಕೆ ಮತ್ತಷ್ಟು ಮರ್ಮಾಘಾತ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ