ದಂಪತಿಗೆ ಶುಭದಿನ, ವಿದ್ಯಾರ್ಥಿಗಳು ಎಚ್ಚರದಿಂದಿರಿ; ಇಲ್ಲಿದೆ ಇಂದಿನ ಭವಿಷ್ಯ!

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ತಮ್ಮ ಪ್ರತಿಭೆ ತೋರಿಸಲು ಉತ್ತಮ ದಿನ
  • ನಿಮ್ಮ ಮನೆಯ ಸದಸ್ಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲ
  • ಆದಾಯ ಕಡಿಮೆಯಾಗಿ ಆತ್ಮವಿಶ್ವಾಸ ಕೊರತೆಯಾಗುವ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಮಾತುಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ
  • ಪ್ರೇಮಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ ಗಣಪತಿಯ ಪಾರ್ಥನೆ ಮಾಡಿ
  • ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ತಮ್ಮ ಪ್ರತಿಭೆ ತೋರಿಸಲು ಉತ್ತಮ ದಿನ
  • ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಿ
  • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ನಿಮ್ಮ ಮನೆಯ ಸದಸ್ಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲ
  • ಇಂದು ವಿನಾಕಾರಣ ಕೋಪ ಮಾಡಿಕೊಳ್ಳುವುದು ಬೇಡ
  • ಸಾಲ ಮಾಡಿದ್ದರೆ ಅದನ್ನ ಇಂದು ಹಿಂದಿರುಗಿಸುವ ಪ್ರಯತ್ನ ಮಾಡಿ
  • ಜನರ ನಿರೀಕ್ಷೆಗೆ ತಕ್ಕಂತೆ ಬದಲಾಗಿ, ನಿಮ್ಮ ಚಿಂತನೆಗಳ ಬಗ್ಗೆ ಸ್ಪಷ್ಟವಾಗಿರಿ
  • ಶ್ರೀ ಆಂಜನೇಯಸ್ವಾಮಿ ದರ್ಶನ ಮಾಡಿ

ಮಿಥುನ

publive-image

  • ಮನೆಯ ಸದಸ್ಯರಿಗೆ ಆರೋಗ್ಯ ಹದಗೆಡಬಹುದು
  • ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ
  • ನಿಮಗೆ ಆಗದೆ ಇರುವವರು ನಿಮ್ಮ ಬಗ್ಗೆ ತಪ್ಪಾಗಿ ಪ್ರಚಾರ ಮಾಡಬಹುದು
  • ಆದಾಯ ಕಡಿಮೆಯಾಗಿ ಆತ್ಮವಿಶ್ವಾಸ ಕೊರತೆಯಾಗುವ ಸಾಧ್ಯತೆ
  • ಹೊಟ್ಟೆಗೆ ಸಂಬಂಧಪಟ್ಟ ನೋವು ಕಾಣಬಹುದು
  • ದುರ್ಗಾದೇವಿಯ ಆರಾಧನೆ ಮಾಡಿ

ಕಟಕ

publive-image

  • ಸಮಾಜದಲ್ಲಿ ಗಣ್ಯ ವ್ಯಕ್ತಿಗಳಿಂದ ಪ್ರೋತ್ಸಾಹ ಸಿಗುತ್ತದೆ
  • ನಿಮ್ಮಲ್ಲಿ ಮಹತ್ವದ ವಿಚಾರಗಳಿದ್ದರೆ ಸಂಬಂಧಿಸಿದ ವ್ಯಕ್ತಿಗಳ ಮಾರ್ಗದರ್ಶನ ಪಡೆಯಿರಿ
  • ನಿಮ್ಮ ಯಶಸ್ಸಿನ ಬಗ್ಗೆ ನಿಮಗೆ ತೃಪ್ತಿ ಸಿಗುವ ದಿನ
  • ಕುಟುಂಬದ ಸದಸ್ಯರು, ಸ್ನೇಹಿತರು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ
  • ನಿಮ್ಮ ಕುಲದೇವರ ಆರಾಧನೆ ಮಾಡಿ

ಸಿಂಹ

publive-image

  • ನಿಮ್ಮ ವ್ಯಾಪಾರ, ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವ ದಿನ
  • ಎಲ್ಲರಿಂದ ಸಂಪೂರ್ಣ ಸಹಕಾರ ದೊರೆಯುವ ಸಮಯ
  • ಇದ್ದಕ್ಕಿದ್ದಂತೆ ಆರ್ಥಿಕ ಬದಲಾವಣೆ ಕಾಣುವ ದಿನ
  • ಹಣವನ್ನು ಠೇವಣಿ, ಹೂಡಿಕೆ ಮಾಡಲು ಉತ್ತಮ ದಿನ
  • ಇಂದು ಅಷ್ಟಲಕ್ಷ್ಮಿಯರನ್ನು ಪ್ರಾರ್ಥನೆ ಮಾಡಿ

ಕನ್ಯಾ

publive-image

  • ನಿಮ್ಮ ತಪ್ಪುಗಳನ್ನ ತಿದ್ದಿಕೊಳ್ಳಲು ಇದು ಉತ್ತಮ ದಿನ
  • ಯಾರನ್ನಾದರು ಕ್ಷಮೆ ಕೇಳಬೇಕು ಅಂದರೆ ಕೇಳಿ ಅವರು ಕ್ಷಮಿಸುತ್ತಾರೆ
  • ನಿಮ್ಮ ಮನಸ್ಸನ್ನು ಸರಿಪಡಿಸಿಕೊಂಡರೆ ಎಲ್ಲ ರೀತಿಯಲ್ಲಿ ಅನುಕೂಲ ಆಗುತ್ತದೆ
  • ಮಕ್ಕಳಿಗೆ ಯಶಸ್ಸು ಸಿಗುವ ದಿನ
  • ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ತೊಂದರೆಯಾಗಬಹುದು ಎಚ್ಚರವಹಿಸಿ
  • ಮಹಾವಿಷ್ಣುವನ್ನು ಸ್ಮರಣೆ ಮಾಡಿ

ತುಲಾ

publive-image

  • ಸಣ್ಣ ಕೆಲಸಗಳಿಗೆ ಹೆಚ್ಚು ಆಸಕ್ತಿ ತೋರಿಸಿ ಸಮಯ ವ್ಯರ್ಥವಾಗುವ ಸಾಧ್ಯತೆ
  • ವ್ಯಾಪಾರಿಗಳಿಗೆ ಗ್ರಾಹಕರ ವರ್ತನೆಯಿಂದ ಬೇಸರವಾಗುತ್ತದೆ
  • ಭವಿಷ್ಯದ ವಿಚಾರದಲ್ಲಿ ಆರ್ಥಿಕ ಚಿಂತನೆ ಕಾಡುತ್ತದೆ
  • ದೊಡ್ಡ ವ್ಯಕ್ತಿಗಳ ಸಲಹೆ ಸೂಚನೆಯನ್ನು ನೀವು ತಿರಸ್ಕಾರ ಮಾಡುವ ಸಾಧ್ಯತೆ ಇದೆ
  • ಚಕ್ರರೂಪಿ ಸುದರ್ಶನನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಕೆಲಸದಲ್ಲಿ ಬದಲಾವಣೆಯ ಅಲೆಯಿಂದ ಮಾನಸಿಕ ತೊಳಲಾಟ ಕಾಡುತ್ತದೆ
  • ಬೆಲೆ ಬಾಳುವ ವಸ್ತು ಖರೀದಿ ಸಾಧ್ಯತೆ ಆದರೆ ಎಚ್ಚರವಿರಲಿ
  • ವೈವಾಹಿಕ ವಿಚಾದಲ್ಲಿ ಒತ್ತಡ ಅನುಭವಿಸುವ ದಿನ
  • ಮದುವೆಯ ಬಗ್ಗೆ ಹೆಚ್ಚು ಚಿಂತಿಸಿ ಗೊಂದಲಕ್ಕೆ ಒಳಗಾಗುತ್ತೀರಿ
  • ವಾಹನ ಚಾಲನೆ ಮಾಡುವಾಗ ಜಾಗ್ರತೆ ಇರಲಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನಸ್ಸು

publive-image

  • ವಾದ-ವಿವಾದಗಳಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ
  • ವೈಯ್ಯಕ್ತಿಕ ವಿಚಾರಗಳಿಂದ ಅಪಮಾನವಾಗುತ್ತದೆ
  • ವಿನಾಕಾರಣ ದೂರದ ಊರುಗಳಿಗೆ ಪ್ರಯಾಣ ಸಾಧ್ಯತೆ
  • ರಾತ್ರಿ ವೇಳೆ ದೂರದ ಊರಿನಿಂದ ನಿಮಗೆ ಶುಭಸುದ್ದಿ ಬರುತ್ತದೆ
  • ನಿಮ್ಮ ಕುಲದೇವತೆಯನ್ನು ಆರಾಧನೆ ಮಾಡಿ

ಮಕರ

publive-image

  • ಕಲಾಕಾರರಿಗೆ ಬಹಳ ಪ್ರಗತಿದಾಯಕ ದಿನ
  • ಯುವಕರು ತಮ್ಮ ಕಲೆಗೆ ಹೆಚ್ಚಿನ ಮಾನ್ಯತೆ ಪಡೆಯುತ್ತಾರೆ
  • ಯುವತಿಯರು ಪರೀಕ್ಷೆಗೆ ಒಳಗಾದ ನಂತರ ಶುಭ ಸೂಚನೆ ಸಿಗುತ್ತದೆ
  • ನಿಮ್ಮ ಕಲೆಗೆ ಹೆಚ್ಚು ಮಾನ್ಯತೆ, ಗೌರವ ಸಿಗುತ್ತದೆ
  • ಕೋರ್ಟ್, ಕಚೇರಿ ಕೆಲಸಗಳಲ್ಲಿ ನಿಮಗೆ ಶುಭವಾಗುತ್ತದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

publive-image

  • ಕುಟುಂಬದ ಸದಸ್ಯರೊಂದಿಗೆ ಹಲವು ವಿಚಾರ ಚರ್ಚೆ ಮಾಡುವುದಕ್ಕೆ ಉತ್ತಮ ದಿನ
  • ನಿಮ್ಮ ಮನೆಯ ವಿಚಾರಗಳನ್ನು ಹೊರಗೆ ತರದೆ ನಿಮ್ಮ ಕುಟುಂಬದೊಳಗೆ
    ಬಗೆಹರಿಸಿಕೊಳ್ಳಿ
  • ಮನೆ ವಿಚಾರ ಹೊರಗಡೆ ಬಂದರೆ ಅವಮಾನ ಸಾಧ್ಯತೆ
  • ರಸ್ತೆಯಲ್ಲಿ ಚಲಿಸುವಾಗ ಜಾಗ್ರತೆಯಿರಲಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ 

publive-image

  • ಹಳೆಯ ರೋಗಗಳಿದ್ದರೆ ಅದನ್ನ ತಾತ್ಸಾರ ಮಾಡಬೇಡಿ
  • ವೈದ್ಯರ ಸಲಹೆ ಮೇರೆಗೆ ಪರೀಕ್ಷೆ ಮಾಡಿಸಿಕೊಳ್ಳಿ
  • ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿದೆ
  • ವಿವಾಹ ವಿಷಯಗಳು ಮುಂದೂಡಬಹುದು
  • ಇವತ್ತು ಹೆಚ್ಚು ನಡೆದಾಡದೆ ಇದ್ದರೆ ಒಳ್ಳೆಯದು
  • ನಿಮ್ಮ ಕುಲದೇವತೆಯನ್ನ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment