newsfirstkannada.com

ದಾವಣಗೆರೆಯಲ್ಲಿ ಆತಂಕಕಾರಿ ಘಟನೆ; ಪಾನಿಪುರಿ ಸೇವಿಸಿ 19 ಮಕ್ಕಳು ತೀವ್ರ ಅಸ್ವಸ್ಥ

Share :

Published March 15, 2024 at 6:57pm

Update March 15, 2024 at 6:59pm

    ಪಾನಿಪುರಿಗೆ ಬಳಸುತ್ತಿದ್ದ ನೀರನ್ನ ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ ಅಧಿಕಾರಿ

    ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ನಡೆದ ಘಟನೆ

    ಸ್ಥಳಕ್ಕೆ ಹರಿಹರ ತಹಶೀಲ್ದಾರ್ ಗುರುಬಸಯ್ಯ, ಮುಖ್ಯ ಅಧಿಕಾರಿಗಳು ಭೇಟಿ

ದಾವಣಗೆರೆ: ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿರೋ ಘಟನೆ ಹರಿಹರ ತಾಲೂಕಿನ ಮಲೆಬೆನ್ನೂರು ಪಟ್ಟಣದಲ್ಲಿ ನಡೆದಿದೆ. ಮಲೆಬೆನ್ನೂರು ಪಟ್ಟಣದಲ್ಲಿ ಕೆಲ ಕಡೆ ಪಾನಿಪುರಿ ಮಾರಾಟ ಮಾಡಲಾಗುತ್ತಿತ್ತು. ಇದೇ ಪಾನಿಪುರಿ ತಿದ್ದಿದ್ದ ಮಕ್ಕಳಿಗೆ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ.

ಇದನ್ನು ಓದಿ: ‘ಹಾವೇರಿ ಟಿಕೆಟ್ ಮುಗಿದ ಅಧ್ಯಾಯ, ಆದರೆ..’ ಈಶ್ವರಪ್ಪ ಪುತ್ರ ಕಾಂತೇಶ್ ಕೊಟ್ರು ಸುಳಿವು..!

ಕೂಡಲೇ ಅಸ್ವಸ್ಥಗೊಂಡ ಮಕ್ಕಳನ್ನು ಮಲೆಬೆನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್​ ಮಾಡಲಾಗಿದೆ. ಇನ್ನು ಅಸ್ವಸ್ಥಗೊಂಡ 19 ಮಕ್ಕಳಲ್ಲಿ ಒಂದು ಮಗವಿನ ಸ್ಥಿತಿ ಚಿಂತಾಜನಕವಾಗಿದೆ. ಆ ಮಗುವನ್ನು ದಾವಣಗೆರೆ ಬಾಪುಜಿ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆದಿದೆ.

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹರಿಹರ ತಹಶೀಲ್ದಾರ್​ ಗುರುಬಸಯ್ಯ, ಹರಿಹರ ಟಿಎಚ್ ಓ, ಮಲೆಬೆನ್ನೂರ ಪಟ್ಟಣದ ಮುಖ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮಲೆಬೆನ್ನೂರು ಪಟ್ಟಣದಲ್ಲಿ ಪಾನಿಪುರಿ ಮಾರಾಟ ಮಾಡದಂತೆ ಕಟ್ಟುನಿಟ್ಟಿನಿ ಸೂಚನೆ ಹೊರಡಿಸಿದ್ದಾರೆ. ಮಲೆಬೆನ್ನೂರು ಪಟ್ಟಣದಲ್ಲಿ 25ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಮನೆ ಮನೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿಹರ ತಹಶೀಲ್ದಾರ್​ ಅವರು ಪಟ್ಟಣಕ್ಕೆ ಸರಬರಾಜು ಆಗ್ತಾ ಇದ್ದ ನೀರನ್ನು ಪರಿಶೀಲನೆಗೆಂದು ಕಳುಹಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮಲೆಬೆನ್ನೂರು ಪಟ್ಟಣದಲ್ಲಿ ನಿಗಾ ಇರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಾವಣಗೆರೆಯಲ್ಲಿ ಆತಂಕಕಾರಿ ಘಟನೆ; ಪಾನಿಪುರಿ ಸೇವಿಸಿ 19 ಮಕ್ಕಳು ತೀವ್ರ ಅಸ್ವಸ್ಥ

https://newsfirstlive.com/wp-content/uploads/2024/03/PANIPURI.jpg

Load More