/newsfirstlive-kannada/media/post_attachments/wp-content/uploads/2024/12/DOG-FIGHT-BETTING.jpg)
ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ ಬರೋಬ್ಬರಿ 81 ಜನರು ಬಂಧನವಾಗಿದ್ದು 19 ವಿದೇಶಿ ತಳಿ ಶ್ವಾನಗಳನ್ನು ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದಲ್ಲಿ ಸದ್ಯ ಡಾಗ್​ ಫೈಟ್​ ಬೆಟ್ಟಿಂಗ್​ಗಳು ಜೋರಾಗಿದ್ದು. ಅಂತಹ ಬೆಟ್ಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಪೊಲೀಸರು ಎಂಟ್ರಿ ಕೊಟ್ಟಿದ್ದು ಒಟ್ಟು 81 ಜನರನ್ನು ಬಂಧಿಸಿದ್ದಾರೆ.
ರಾಜಸ್ಥಾನದ ಹನುಮಾನಗಢ ಜಿಲ್ಲೆಯಲ್ಲಿ ಈ ದಾಳಿ ನಡೆದಿದ್ದು, ಒಟ್ಟು 19 ವಿದೇಶಿ ತಳಿ ಶ್ವಾನಗಳು ಹಾಗೂ 15 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು 81 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲೆಯ ಎಸ್​ಪಿ ಅರ್ಷದ್ ಅಲಿ ಹೇಳಿದ್ದಾರೆ.
ಇದನ್ನೂ ಓದಿ:ಶಾಕಿಂಗ್ ನ್ಯೂಸ್.. 50 ವರ್ಷಗಳಲ್ಲೇ ಶ್ರೀನಗರದಲ್ಲಿ ಅತಿಹೆಚ್ಚು ಚಳಿಯ ದಾಖಲೆ; ಜಮ್ಮು-ಕಾಶ್ಮೀರ ಕಥೆ ಏನು?
ಪೊಲೀಸರ ದಾಳಿಯನ್ನು ನೋಡಿದ ಇನ್ನೂ ಅನೇಕರು ಗೋಡೆಯನ್ನೆಲ್ಲಾ ಜೀಗಿದು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಲೈಸನ್ಸ್​ ಹೊಂದಿದ್ದ ಒಂದಿಷ್ಟು ಗನ್​ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಾಗ್ ಫೈಟ್ ಬೆಟ್ಟಿಂಗ್​ನಲ್ಲಿ ಬಂಧನಕ್ಕೊಳಗಾದವರು ಬಹುತೇಕ ಹರಿಯಾಣ ಪಂಜಾಬ್​ನಿಂದ ವಾಹನ ಮಾಡಿಕೊಂಡು ಇಲ್ಲಿಗೆ ಬಂದವರೇ ಹೆಚ್ಚು ಇದ್ದಾರೆ ಎಂದು ಎಸ್​ಪಿ ಅರ್ಷದ್ ಅಲಿ ಹೇಳಿದ್ದಾರೆ. ಅಲ್ಲಿಂದ ಬರುವಾಗ ಅವರು ತಮ್ಮ ಶ್ವಾನಗಳನ್ನು ಕೂಡ ತಮ್ಮ ಜೊತೆಗೆ ಕರೆದುಕೊಂಡು ಬಂದಿದ್ದರಂತೆ. ಪೊಲೀಸರ ವಶದಲ್ಲಿರುವ ಕೆಲವು ಶ್ವಾನಗಳಿಗೆ ಕಾದಾಟದ ವೇಳೆ ಗಾಯಗಳಾಗಿದ್ದು ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಅವು ಪೊಲೀಸ್ ಇಲಾಖೆಯ ಕಾವಲಿನಲ್ಲಿವೆ ಎಂದು ಎಸ್​ಪಿ ದೃಢಪಡಿಸಿದ್ದಾರೆ.
ಇದನ್ನೂ ಓದಿ: ಬೌ, ಬೌ ಆಯ್ತು ಈಗ ಕಾ, ಕಾ.. ಕಾಗೆ ಮಾಂಸದಲ್ಲಿ ಬಿರಿಯಾನಿ ಮಾಡಿ ತಿನ್ನಿಸುತ್ತಿದ್ದ ದಂಪತಿ ಬಂಧನ!
ಇನ್ನು ಆರೋಪಿಗಳ ವಿರುದ್ಧ ಪ್ರಾಣಿಗಳ ಮೇಲೆ ಕ್ರೌರ್ಯತೆ ನಿಯಂತ್ರಣ ಹಾಗೂ ಜೂಜಾಟದ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳು ಸುಮಾರು 250 ಜನರು ಇರುವ ಸೋಷಿಯಲ್ ಮೀಡಿಯಾದಲ್ಲಿ ಗ್ರೂಪ್ ಮಾಡಿಕೊಂಡಿದ್ದು.ಅಲ್ಲಿ ಈ ಡಾಗ್ ಫೈಟ್​ಗಳ ಬಗ್ಗೆ ವಿವರಗಳನ್ನು ಹಂಚಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us