newsfirstkannada.com

ಪಾಕಿಸ್ತಾನಕ್ಕೆ ‘ಹೃದಯ’ ಕೊಟ್ಟ ಭಾರತೀಯ.. ಯುವತಿಗೆ ಮರುಜನ್ಮ; ಇದು ಹಾರ್ಟ್ ಟಚ್ಚಿಂಗ್ ಸ್ಟೋರಿ!

Share :

Published April 25, 2024 at 5:11pm

Update April 25, 2024 at 5:38pm

    ಆಯೇಷಾ ರಶನ ಅವರಿಗೆ ಹೃದಯ ನೀಡಿರುವುದು ಯಾರು ಗೊತ್ತಾ?

    ಭಾರತದಲ್ಲಿ ಅತ್ಯುನ್ನತವಾದ ವೈದ್ಯರು ಇದ್ದಿದ್ದರಿಂದ ಜೀವ ಉಳಿಯಿತು

    ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ಕೆ.ಆರ್ ಬಾಲಕೃಷ್ಣನ್ ಹೇಳಿದ್ದೇನು?

ಚೆನ್ನೈ: ಪಾಕಿಸ್ತಾನದ ಯುವತಿಯೊಬ್ಬರಿಗೆ ಭಾರತದ ದೆಹಲಿ ಮೂಲದ ವೃದ್ಧರೊಬ್ಬರ ಹೃದಯವನ್ನು ಕಸಿ (transplant) ಮಾಡುವಲ್ಲಿ ಚೆನ್ನೈನ ಎಂಜಿಎಂ ಹೆಲ್ತ್​​ಕೇರ್​ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ 5 ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಕ್ ಯುವತಿ ಹೃದಯ ಕಸಿಯ ನಂತರ ಆರೋಗ್ಯವಾಗಿದ್ದು ಮರು ಜೀವ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ 19 ವರ್ಷದ ಆಯೇಷಾ ರಶನ ಅವರು 5 ವರ್ಷದಿಂದ ಹೃದಯ ಸ್ಥಂಭನ (cardiac arrest) ದಿಂದ ಬಳಲುತ್ತಿದ್ದರು. ಹೀಗಾಗಿಯೇ ಅವರು 2019ರಲ್ಲಿಯೇ ಭಾರತಕ್ಕೆ ಆಗಮಿಸಿದ್ದರು. ಸದ್ಯ ಇವರಿಗೆ ದೆಹಲಿ ಮೂಲದ 69 ವರ್ಷದ ವೃದ್ಧರೊಬ್ಬರ ಹೃದಯವನ್ನು ಕಸಿ ಮಾಡಲಾಗಿದೆ. ಆಯೇಷಾ ರಶನ ಅವರಿಗೆ ಹೃದಯ ನೀಡಿರುವ ವೃದ್ಧನು ದೆಹಲಿಯ ಆಸ್ಪತ್ರೆಯೊಂದರಲ್ಲಿ ಬ್ರೈನ್​ಡೆಡ್​​ನಿಂದ ಸಾವನ್ನಪ್ಪಿದ್ದರು. ಇವರ ಹೃದಯವನ್ನೇ ಪಾಕ್​ ಯುವತಿಗೆ ನೀಡಲಾಗಿದೆ ಎಂದು ಹೇಳಲಾಗಿದೆ.

ಹೃದಯ ಕಸಿಗೆ ಸೂಚಿಸಿದ್ದ ಡಾಕ್ಟರ್​

ಹೃದಯ ಸಂಬಂಧಿ ಕಾಯಿಲೆಯಿಂದಾಗಿ 2019ರಿಂದ ಭಾರತದಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಆಯೇಷಾಗೆ ಚೆನ್ನೈ ಅಡ್ಯಾರ್‌ನ ಮಲಾರ್ ಆಸ್ಪತ್ರೆಯಲ್ಲಿದ್ದ ಹಿರಿಯ ಹೃದಯ ಶಸ್ತ್ರಚಿಕಿತ್ಸಕ ಡಾ.ಕೆ.ಆರ್ ಬಾಲಕೃಷ್ಣನ್ ಅವರು ಹೃದಯ ಕಸಿ ಮಾಡುವಂತೆ ಸೂಚಿಸಿದ್ದರು. ಹೀಗಾಗಿ ಆಯೇಷಾಳ ಹೆಸರನ್ನು ಅಂಗಾಂಗ ಕಸಿ ಮಾಡುವ ನೋಂದಣಿಯಲ್ಲಿ ಸೇರಿಸಲಾಗಿತ್ತು. ಅಲ್ಲಿವರೆಗೆ ಯುವತಿಗೆ ಹೃದಯದ ಎಡಭಾಗದಲ್ಲಿ ರಕ್ತವನ್ನು ಪಂಪ್ ಮಾಡಲು ಯಾಂತ್ರಿಕ ಪಂಪ್​ ಅನ್ನು ಅಳವಡಿಸಲಾಗಿತ್ತು. ಆದರೆ ಇದು 2023ರಲ್ಲಿ ವಿಫಲವಾಗಿದ್ದರಿಂದ ಸ್ಥಿತಿ ತೀವ್ರ ಹದಗೆಟ್ಟಿತ್ತು ಎಂದು ತಿಳಿದು ಬಂದಿದೆ.

ಶಸ್ತ್ರ ಚಿಕಿತ್ಸೆಗೆ ಅಷ್ಟೊಂದು ಹಣವಿಲ್ಲ

ಬಳಿಕ ಮಗಳು ಹಾಗೇ ಬದುಕುತ್ತಿರುವುದು ನೋಡಲು ನಮಗೆ ಆಗುತ್ತಿಲ್ಲ ಎಂದು ಯುವತಿಯ ತಾಯಿ ವೈದ್ಯರನ್ನು ಭೇಟಿ ಮಾಡಿ ಶಸ್ತ್ರ ಚಿಕಿತ್ಸೆಗೆ ಅಷ್ಟೊಂದು ಹಣವಿಲ್ಲ ಎಂದು ಹೇಳಿಕೊಂಡಿದ್ದರು. ಆದ್ರೂ ಅವರನ್ನು ಭಾರತಕ್ಕೆ ಬರುವಂತೆ ಡಾಕ್ಟರ್ ಹೇಳಿದರು. ಅದರಂತೆ ಆಯೇಷಾ ಕುಟುಂಬ ಭಾರತದ ಚೆನ್ನೈಗೆ ಆಗಮಿಸಿದ್ದರು. ಈ ವೇಳೆ ಯುವತಿಗೆ ಹೃದಯ ಕಸಿ ಮಾಡುವುದು ಒಂದೇ ಆಯ್ಕೆ ಎಂದು ಡಾ. ಬಾಲಕೃಷ್ಣನ್​ ಹೇಳಿದ್ದರು. ಜನವರಿ 31 ರಂದು ದೆಹಲಿಯ ಆಸ್ಪತ್ರೆಯಿಂದ ಕರೆಯೊಂದನ್ನು ಸ್ವೀಕರಿಸಿ ದೇಶದಲ್ಲಿ ಯಾವುದೇ ಹೃದಯ ಕಸಿ ಮಾಡುವಂತ ಘಟನೆಗಳು ಇಲ್ಲದಿದ್ದಾಗ ವಿದೇಶಿಗರಿಗೆ ಭಾರತದ ಹೃದಯ ಕಸಿ ಮಾಡಬಹುದು ಎಂದು ಹೇಳಿದ್ದರು.

ಇದನ್ನೂ ಓದಿ: ನಗರದ ರೈಲ್ವೆ ನಿಲ್ದಾಣ ಬಳಿ ಭಾರೀ ಅಗ್ನಿ ಅವಘಡ.. 6 ಜನರು ಸಜೀವ ದಹನ.. ಹಲವರು ಗಂಭೀರ

ಇದನ್ನೂ ಓದಿ: ಕೊಹ್ಲಿ, ಕಮ್ಮಿನ್ಸ್ ಮಧ್ಯೆ ಹೃದಯಸ್ಪರ್ಶಿ ಮಾತು.. ಇಂದು 300 ರನ್​ ಚಚ್ಚುವ ಮಾತುಕತೆಯೇ..?

ಅದರಂತೆ ವೃದ್ಧನ ಹೃದಯ ತೆಗೆದುಕೊಳ್ಳುವಾಗ ಆಯೇಷಾ ಕುಟುಂಬ ಸ್ವಲ್ಪ ಹಿಂದೇಟು ಹಾಕಿತು ಎನ್ನಲಾಗಿದೆ. ಆದರೆ ವೈದ್ಯರು ಇದೊಂದು ಕೊನೆ ಅವಕಾಶ. ವೃದ್ಧನ ಹೃದಯವು ಉತ್ತಮ ಸ್ಥಿತಿಯಲ್ಲಿದೆ. ಯಾವುದೇ ಸಮಸ್ಯೆಯಾಗುವುದಿಲ್ಲ. ನಾವು ಧೈರ್ಯ ಮಾಡಿದ್ದೇವೆ. ನೀವು ಧೈರ್ಯ ಮಾಡಬೇಕು ಎಂದು ಹೇಳಿ ಶಸ್ತ್ರ ಚಿಕಿತ್ಸೆಗೆ ಎಲ್ಲಾ ರೆಡಿ ಮಾಡಿದರು. ಅಂದುಕೊಂಡಂತೆ ಸದ್ಯ ಆಯೇಷಾಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು ಆರೋಗ್ಯವಾಗಿದ್ದಾಳೆ. ಹೃದಯ ಕಸಿಗೆ 35 ಲಕ್ಷ ರೂಪಾಯಿ ವೆಚ್ಚವಾಗಬಹುದು ಎನ್ನಲಾಗಿತ್ತು. ಆದರೆ ದೆಹಲಿಯಿಂದ ಹೃದಯ ದಾನದ ರೀತಿಯಲ್ಲಿ ಬಂದಿದ್ದರಿಂದ ವೆಚ್ಚ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಆಯೇಷಾ, ಈಗ ನಾನು ಸುಲಭವಾಗಿ ಉಸಿರಾಡುತ್ತಿದ್ದೇನೆ. ಡಾಕ್ಟರ್​ ಸಹಕಾರದಿಂದ ನಾನು ಮತ್ತೊಂದು ಜೀವ ಪಡೆದುಕೊಂಡಿದ್ದೇನೆ. ಈಗ ನಾನು ನನ್ನ ಶಿಕ್ಷಣವನ್ನು ಪಾಕಿಸ್ತಾನದ ಕರಾಚಿಯಲ್ಲಿ ಪೂರ್ಣಗೊಳಿಸಬಲ್ಲೆ. ಮುಂದಿನ ದಿನಗಳಲ್ಲಿ ನಾನು ಫ್ಯಾಷನ್​ ಡಿಸೈನರ್ ಆಗಲು ಇಷ್ಟವಿದೆ ಎಂದು ವಿಶ್ವಾಸದಿಂದ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕಿಸ್ತಾನಕ್ಕೆ ‘ಹೃದಯ’ ಕೊಟ್ಟ ಭಾರತೀಯ.. ಯುವತಿಗೆ ಮರುಜನ್ಮ; ಇದು ಹಾರ್ಟ್ ಟಚ್ಚಿಂಗ್ ಸ್ಟೋರಿ!

https://newsfirstlive.com/wp-content/uploads/2024/04/Ayesha_Rashan.jpg

Load More