newsfirstkannada.com

ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯಾರು? ಅಸಲಿಗೆ ಆಗಿದ್ದೇನು?

Share :

Published March 21, 2024 at 4:40pm

Update March 21, 2024 at 4:36pm

    ಕಾಲೇಜಿಗೆ ಕರೆ ಮಾಡಿ ಪೋಷಕರ ಬಗ್ಗೆ ಮಾಹಿತಿ ಕಲೆಹಾಕಿದ ಅಧಿಕಾರಿಗಳು

    ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ಕಾಲೇಜು ಐಡಿ ಕಾರ್ಡ್​ ಪತ್ತೆ..!

    ಅತ್ತಿಗುಪ್ಪೆ ಮೆಟ್ರೋ ಹಳಿ ಮೇಲಿಂದ ಮೃತದೇಹ ಹೊರತೆಗೆದ ಪೊಲೀಸರು

ಬೆಂಗಳೂರು: ನಮ್ಮ ಮೆಟ್ರೋ ಸ್ಟೇಷನ್​ನಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಅತ್ತಿಗುಪ್ಪೆಯಲ್ಲಿ ನಡೆದಿದೆ. ಧ್ರುವ್ ಟಕ್ಕರ್ (19) ಮೃತ ಯುವಕ. ಈ ದುರ್ಘಟನೆಯೂ ಸುಮಾರು 2 ಗಂಟೆ ನಡೆದಿದೆ. ಮೃತ ಧ್ರುವ್ ಟಕ್ಕರ್ ಮುಂಬೈ ಮೂಲದ ನಿವಾಸಿ. ಈತನು ನಮ್ಮ ಮೆಟ್ರೋ ರೈಲಿಗೆ ತಲೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನು ಓದಿ: BREAKING: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಅನಾಹುತ; METRO ಬರ್ತಿದ್ದಾಗ ಹಳಿಗೆ ಜಿಗಿದು ವ್ಯಕ್ತಿ ಸಾವು

ಮೃತ ಯುವಕ ಮೊದಲ ವರ್ಷದ ಲಾ ವಿದ್ಯಾರ್ಥಿಯಾಗಿದ್ದ. ನ್ಯಾಷನಲ್ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಹೀಗೆ ಫೋನ್​ನಲ್ಲಿ ಮಾತನಾಡುತ್ತಾ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್​ಗೆ ಬಂದಿದ್ದಾನೆ. ಈ ವೇಳೆ ವಿದ್ಯಾರ್ಥಿ ಜೊತೆಗೆ ಓರ್ವ ಯುವತಿ ಹಾಗೂ ಮತ್ತೊರ್ವ ಇದ್ದರು. ಫೋನ್​ನಲ್ಲಿ ಮಾತನಾಡುತ್ತಾ ಅಲ್ಲಿಂದ ನೇರವಾಗಿ ರೈಲು ಬರುವ ಸಮಯದಲ್ಲಿ ಟ್ರ್ಯಾಕ್​ ಮೇಲೆ ಹಾರಿದ್ದಾನೆ. ಕೂಡಲೇ ಜೊತೆಗಿದ್ದವರು ಆತನನ್ನು ಎಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ರೈಲು ಹತ್ತಿರ ಬಂದಾಗ ಕೂಡಲೇ ಓಡಿ ಹೋಗಿದ್ದಾರೆ.

ಇನ್ನು ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿಯ ತಲೆ ಹಾಗೂ ದೇಹ ಬೇರೆಯಾಗಿದೆ. ಸದ್ಯ ಸ್ಥಳಕ್ಕೆ ವೆಸ್ಟ್ ಡಿಸಿಪಿ ಗಿರೀಶ್ ಭೇಟಿ ನೀಡಿ ಮೆಟ್ರೋ ಹಳಿಯ ಮೇಲೆ ಬಿದ್ದ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಕೂಡಲೇ ಪೊಲೀಸರು ಕಾಲೇಜಿಗೆ ಕರೆ ಮಾಡಿ ಪೋಷಕರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಘಟನೆ ಹಿನ್ನೆಲೆ BMRCL ನಮ್ಮ ಮೆಟ್ರೋ ಸಂಚಾರ ನಿಲ್ಲಿಸಿ, ಮಾಗಡಿ ರೋಡ್​ನಿಂದ ವೈಟ್ ಫೀಲ್ಡ್​ವರೆಗೆ ಮಾತ್ರ ಸಂಚಾರ ಮಾಡಲಿದೆ. ಸದ್ಯ ಮೃತಪಟ್ಟ ವಿದ್ಯಾರ್ಥಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯಾರು? ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/03/namma-merto-2.jpg

Load More