/newsfirstlive-kannada/media/post_attachments/wp-content/uploads/2024/07/ratna-Bhandar.jpg)
ದೇಶ ಮಾತ್ರವಲ್ಲ, ವಿಶ್ವದಾದ್ಯಂತ ಜಗದೊಡೆಯ ಪುರಿಯ ಜಗನ್ನಾಥನದ್ದೇ ಸುದ್ದಿ. ರತ್ನ ಭಂಡಾರದ ತೆರವಿನ ಕುರಿತಾಗಿಯೇ ಸುದ್ದಿ. ಬರೋಬ್ಬರಿ 46 ವರ್ಷಗಳ ನಂತರ ರಾಜ್ಯ ಬಿಜೆಪಿ ಸರ್ಕಾರ ರತ್ನ ಖಚಿತ ಭಂಡಾರದ ಕೋಣೆಯ ಬಾಗಿಲುಗಳನ್ನು ನಿನ್ನೆ ಸುಮಾರು ಮಧ್ಯಾಹ್ನ 1.48ರ ಶುಭ ಮೂಹರ್ತದಲ್ಲಿ ತೆರೆದಿದೆ.
ಜಗನ್ನಾಥನ ರತ್ನ ಭಂಡಾರ ಕೋಣೆಯು 4 ಬಾಗಿಲುಗಳನ್ನು ಹೊಂದಿದೆ. ನಿನ್ನೆ 16 ಸದಸ್ಯರು, ಸಾಂಪ್ರಾದಾಯಿಕ ಉಡುಗೆ ತೊಟ್ಟು, ಪೂಜೆ ಸಲ್ಲಿಸಿ 2 ಬಾಗಿಲನ್ನು ತೆರೆದಿದ್ದಾರೆ. ರತ್ನ ಭಂಡಾರದ ಬಾಗಿಲನ್ನು ಕೀಲಿ ಕೈಯಿಂದ ತೆರೆಯಲು ಸಾಧ್ಯವಾಗದೆ ಕೊನೆಗೆ ಕಟರ್​ ಬಳಸಿ ಓಪನ್ ಮಾಡಲಾಗಿದೆ.
ಇದನ್ನೂ ಓದಿ: ಬರೀ 20 ಸಾವಿರಕ್ಕೆ Iphone 15 ಖರೀದಿಸಿ! ಈ ಆಫರ್​ ಮಿಸ್​ ಮಾಡ್ಬೇಡಿ
ಅಚ್ಚರಿ ಸಂಗತಿ ಎಂದರೆ, ಇದಕ್ಕೂ ಮುನ್ನ ಎರಡು ಬಾರಿ ರತ್ನ ಭಂಡಾರವನ್ನು ತೆರೆಯಲಾಗಿತ್ತು. 1978ರಲ್ಲಿ ಮತ್ತು 1982ರಲ್ಲಿ ದೇವರ ಆಭರಣಗಳ ದುರಸ್ತಿಗಾಗಿ ಈ ಬಾಗಿಲನ್ನು ಓಪನ್​ ಮಾಡಲಾಗಿದೆ. ಈ ವೇಳೆ ಭಂಡಾರದಲ್ಲಿ ಏನೆಲ್ಲಾ ಸಿಕ್ಕಿತ್ತು ಗೊತ್ತಾ?.
/newsfirstlive-kannada/media/post_attachments/wp-content/uploads/2024/07/puri-jagantha3.jpg)
1978ರ ಆಗಸ್ಟ್​​ 19ರಂದು ಜಗನ್ನಾಥನ ಸನ್ನಿಧಿಯಲ್ಲಿರುವ ರತ್ನ ಭಂಡಾರವನ್ನು ತೆರೆಯಲಾಗಿತ್ತು. ಆಗಿನ ಮಂದಿರದ ಆಡಳಿತಾಧಿಕಾರಿಯಾಗಿದ್ದ ಪಿ.ರತ್​​ರವರು ರತ್ನ ಭಂಡಾರದ ತನಿಖೆಗೆ ರಾಜ್ಯ ಕಾನೂನು ಇಲಾಖೆಗೆ ಪತ್ರ ಬರೆದಿದ್ದರು.
ಇದನ್ನೂ ಓದಿ: ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ.. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈಯ್ದಿರೋ ಶಂಕೆ
ಮಹಾಲಕ್ಷ್ಮಿಯ ವಿಗ್ರಹಕ್ಕಾಗಿ ಭಂಡಾರ ತೆಗೆದರು
1972ರಲ್ಲಿ ಮತ್ತು 1974ರಲ್ಲಿ ಮಹಾಲಕ್ಷ್ಮಿಯ ಹೊಸ ವಿಗ್ರಹವನ್ನು ಮಾಡಿಸಲು ಭಂಡಾರವನ್ನು ತೆರೆಯಲಾಯಿತು. ಈ ವೇಳೆ ಚಿನ್ನವನ್ನು ಹೊರತರಲಾಯಿತು. ಇದಾದ ಬಳಿಕ 1978ರಲ್ಲಿ ರತ್ನ ಭಂಡಾರದ ಸಂಪೂರ್ಣ ತನಿಖೆ ನಡೆಸಲಾಗಿತ್ತು. ಈ ವೇಳೆ ಎಲ್ಲಾ ಆಭರಣಗಳ ಕುರಿತು ಪಟ್ಟಿ ಮಾಡಲಾಯಿತು. ಅಚ್ಚರಿಯ ವಿಚಾರವೆಂದರೆ 1978ರಲ್ಲಿ ಮೆ13 ರಂದು ಪ್ರಾರಂಭವಾಗಿ ಜುಲೈ 23ರವರೆಗೆ ಇದು ಮುಂದುವರೆಯಿತು.
/newsfirstlive-kannada/media/post_attachments/wp-content/uploads/2024/07/Puri-jaganatha-Ratna-Bhandara-1.jpg)
3337 ಬೆಳ್ಳಿಯ ತುಂಡುಗಳನ್ನು ಹೊರತೆಗೆದರು
1978ರಲ್ಲಿ ನಡೆದ ರತ್ನ ಭಂಡಾರದ ತನಿಖೆಯನ್ನು ಹಿಂದಿನ ಪಟ್ಟಿಗೆ ಹೊಂದಾಣಿಕೆ ಮಾಡಲಾಯಿತು. 1982 ಡಿಸೆಂಬರ್​ 26ರಂದು ರಾಜ್ಯ ಸರ್ಕಾರದ ಅನುಮತಿಯೊಂದಿಗೆ ರತ್ನದ ಭಂಡಾರ ತೆರೆಯಲಾಗಿದೆ. ಈ ವೇಳೆ 3337 ಬೆಳ್ಳಿಯ ತುಂಡುಗಳನ್ನು ಹೊರತೆಗೆಯಲಾಯಿತು ಎನ್ನಲಾಗುತ್ತಿದೆ. ಆ ಬಳಿಕ 1985ರಂದು ಜುಲೈ 14ರಂದು ಬಲಭದ್ರ ದೇವರ ಚಿತಾಭಸ್ಮವನ್ನು ಸರಿಪಡಿಸುವ ಕಾರ್ಯಕ್ಕೆ ರತ್ನ ಭಂಡಾರದಿಂದ ಸ್ವಲ್ಪ ಚಿನ್ನ ಹೊರತೆಗೆಯಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತಾಗಿ ಎಲ್ಲೂ ಸ್ಪಷ್ಟತೆ ಇಲ್ಲ.
2018ರಲ್ಲಿ ನಡೆಯಿತು ಕೊನೆಯ ಪ್ರಯತ್ನ
ಜಗನ್ನಾಥನ ಸನ್ನಿಧಿಯ ಭಂಡಾರವನ್ನು ಮೂರು ವರ್ಷಗಳಿಗೊಮ್ಮೆ ತೆರೆಯಬೇಕು ಎಂಬ ನಿಯಮವಿದೆ. ಆದರೆ 1985ರಲ್ಲಿ ರತ್ನ ಭಂಡಾರ ತೆರೆಯಲಾಗಿತ್ತು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲೂ ಸ್ಪಷ್ಟವಾದ ಮಾಹಿತಿ ಇಲ್ಲ. ಬಳಿಕ 2018ರಲ್ಲಿ ಒಡಿಶಾ ಸರ್ಕಾರಕ್ಕೆ ದೇವಸ್ಥಾನದ ರತ್ನ ಭಂಡಾರದ ಕೋಣೆಯ ಬಾಗಿಲು ತೆರೆದು ನಿಧಿಯ ಮೌಲ್ಯ ಮಾಪನ ಮಾಡುವಂತೆ ಹೈಕೋರ್ಟ್​ ಸೂಚನೆ ನೀಡಿತ್ತು. ಆಗ ಸಮಿತಿಗೆ ತಮ್ಮ ಬಳಿ ಇರೋದು ನಕಲಿ ಕೀಲಿ ಅನ್ನುವುದು ಗೊತ್ತಾಗಿ ಕೊಠಡಿ ಒಳಗೆ ಹೋಗಲು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಭಕ್ತಾದಿಗಳಲ್ಲಿ ಆತಂಕದ ಮನೆ ಮಾಡಿತ್ತು.
/newsfirstlive-kannada/media/post_attachments/wp-content/uploads/2024/07/puri-jagannath2.jpg)
ಬಲಭದ್ರ ಯಾರು?
ಬಲಭದ್ರನ ಇನ್ನೊಂದು ಹೆಸರೇ ಬಲರಾಮ. ಈತ ಕೃಷ್ಣನ ಸಹೋದರ. ಪುರಿಯ ಜಗನ್ನಾಥನ ಸನ್ನಿಯಲ್ಲಿರುವ ತ್ರಿಮೂರ್ತಿಗಳಲ್ಲಿ ಈತನಿಗೆ ಒಂದು ಸ್ಥಾನವಿದೆ. ಇವನಿಗೆ ಹಳಧರ, ಹಲಾಯುಧ, ಬಲದೇವ, ಬಲಭದ್ರ, ಸಂಕರ್ಷಣ ಎಂಬ ಹೆಸರುಗಳಿವೆ.
1978ರಲ್ಲಿ ಏನೆಲ್ಲಾ ಸಿಕ್ತು?
ಮಾಹಿತಿಗಳ ಪ್ರಕಾರ, 1978 ರಲ್ಲಿ ನಡೆದ ಜನಗಣತಿಯಲ್ಲಿ ನಂತರ, 12,838 ಚಿನ್ನಾಭರಣಗಳು ಮತ್ತು 22 ಸಾವಿರದ 153 ಬೆಳ್ಳಿಯ ಆಭರಣಗಳಲ್ಲಿ ಪತ್ತೆಯಾಗಿವೆ. ಒಟ್ಟು 747 ವಿಧದ ರತ್ನಗಳು ಜಗನ್ನಾಥನ ಭಂಡಾರದಲ್ಲಿ ಸಿಕ್ಕಿದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us