ಗ್ರೇಟ್ ಸಕ್ಸಸ್‌.. ತುಂಗಭದ್ರಾ ಡ್ಯಾಂನ 19ನೇ ಗೇಟ್ ಕ್ಲೋಸ್‌; ಜೀವಜಲ ಉಳಿಸೋ ಸಾಹಸಕ್ಕೆ ಅತಿ ದೊಡ್ಡ ಯಶಸ್ಸು!

author-image
admin
Updated On
ಗ್ರೇಟ್ ಸಕ್ಸಸ್‌.. ತುಂಗಭದ್ರಾ ಡ್ಯಾಂನ 19ನೇ ಗೇಟ್ ಕ್ಲೋಸ್‌; ಜೀವಜಲ ಉಳಿಸೋ ಸಾಹಸಕ್ಕೆ ಅತಿ ದೊಡ್ಡ ಯಶಸ್ಸು!
Advertisment
  • ತುಂಗಭದ್ರಾ ಜಲಾಶಯದ 33 ಗೇಟ್‌ಗಳಲ್ಲಿ 32 ಗೇಟ್ ಕ್ಲೋಸ್!
  • ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ತಂಡದ ಕಾರ್ಯಾಚರಣೆ ಸಕ್ಸಸ್
  • 13 ನಿಮಿಷಗಳಲ್ಲಿ 4ನೇ ಸ್ಟಾಪ್ ಲಾಗ್‌ ಅಳವಡಿಕೆ ಮಾಡಿದ ತಜ್ಞರು

ಕೊಪ್ಪಳ/ವಿಜಯನಗರ: 3 ರಾಜ್ಯದ ರೈತರ ಒಕ್ಕೊರಲ ಕೂಗು.. ಕೋಟ್ಯಾಂತರ ಜನರ ಪ್ರಾರ್ಥನೆಗೆ ಫಲ ಸಿಕ್ಕಿದೆ. ತುಂಗಭದ್ರಾ ಡ್ಯಾಂನಲ್ಲಿ ಜೀವಜಲ ಉಳಿಸುವ ಭಗೀರಥ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ದಕ್ಕಿದೆ. ಜಲಾಶಯದ 19ನೇ ಗೇಟ್‌ಗೆ 4 ಸ್ಟಾಪ್ ಲಾಗ್‌ಗಳನ್ನು ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ: ‘ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ’.. ಅಪಾಯದಲ್ಲಿರೋ ತುಂಗಭದ್ರಾ ಡ್ಯಾಂ ರಿಪೇರಿಗೆ ಮುಂದಾದ ತಜ್ಞ

ಟಿ.ಬಿ ಡ್ಯಾಂ ಕ್ರಸ್ಟ್ ಗೇಟ್ 19ರ ದುರಸ್ತಿ ಕಾರ್ಯದಲ್ಲಿ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರ ತಂಡ ಸಕ್ಸಸ್ ಆಗಿದೆ. ಇಂದು ಸಂಜೆ ಕೇವಲ 13 ನಿಮಿಷಗಳಲ್ಲಿ 4ನೇ ಸ್ಟಾಪ್ ಲಾಗ್‌ ಅನ್ನು ಅಳವಡಿಕೆ ಮಾಡಲಲಾಗಿದ್ದು, ಇನ್ನು ಒಂದೇ ಒಂದು ಸ್ಟಾಪ್ ಲಾಗ್ ಅಳವಡಿಕೆ ಮಾತ್ರ ಬಾಕಿ ಉಳಿದಿದೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯ ಕಾಪಾಡಿದ ಕನ್ನಯ್ಯ ನಾಯ್ಡು ಯಾರು? ಡ್ಯಾಂ ತಜ್ಞನ ಹಿನ್ನೆಲೆ ಏನು? ಸಾಧನೆಗಳೇನು?

32 ಗಂಟೆಗಳ ನಿರಂತರ ಕಾರ್ಯಾಚರಣೆಯಿಂದ TB ಡ್ಯಾಂ‌ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಸಕ್ಸಸ್ ಆಗಿದೆ. ಎರಡು ಕ್ರೇನ್ ಮೂಲಕ 4 ಸ್ಟಾಪ್ ಲಾಗ್ ಪ್ಲೇಟ್ ಅಳವಡಿಕೆ ಮಾಡಲಾಗಿದ್ದು ತಂತ್ರಜ್ಞರ ತಂಡದ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ.

publive-image

ತುಂಗಭದ್ರಾ ಜಲಾಶಯದ 33 ಗೇಟ್‌ಗಳಲ್ಲಿ 19 ಗೇಟ್ ಹೊರತುಪಡಿಸಿ ಎಲ್ಲಾ ಗೇಟ್ ಕ್ಲೋಸ್ ಮಾಡಲಾಗಿದೆ. ಎಲ್ಲಾ ಗೇಟ್ ಕ್ಲೋಸ್ ಮಾಡಿದ ಮೇಲೆ ಡ್ಯಾಂನಿಂದ ನೀರಿನ ಹೊರಹರಿವು ಕಡಿಮೆಯಾಗಿದೆ. ಇದೀಗ ಕಳಚಿಕೊಂಡು ಹೋಗಿದ 19ನೇ ಗೇಟ್‌ ಪತ್ತೆಯಾಗಿದೆ. ಗೇಟ್‌ ಮೂರು ತುಂಡಾಗಿ ಕ್ರಸ್ಟ್‌ ಗೇಟ್ 19ರ ಮುಂಭಾಗದ ಕೆಳಗಡೆ ಬಿದ್ದಿರುವುದು ಪತ್ತೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment