/newsfirstlive-kannada/media/post_attachments/wp-content/uploads/2025/04/1st-standard-student-age.jpg)
ಇದು 1ನೇ ತರಗತಿಗೆ ಸೇರ ಬಯಸುವ ಚಿಣ್ಣರ ಪಾಲಿಗೆ ಬಹು ದೊಡ್ಡ ಸಿಹಿ ಸುದ್ದಿ. ಶಿಕ್ಷಣ ಇಲಾಖೆಯ ವಯೋಮಿತಿ ಕಾನೂನು ಗೊಂದಲ, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರತಿ ಹಂತದಲ್ಲೂ ಪೋಷಕರ ಸಮಸ್ಯೆಗಳಿಗೆ ಕಿವಿಯಾಗಿದ್ದ ನ್ಯೂಸ್ಫಸ್ಟ್, ನಿರಂತರ ಸುದ್ದಿ ಮಾಡಿತ್ತು. ಪರಿಣಾಮ ಕೊನೆಗೂ ಎಚ್ಚೆತ್ತ ರಾಜ್ಯ ಸರ್ಕಾರ ಒಂದನೇ ತರಗತಿಯ ವಯೋಮಿತಿಯನ್ನ ಇಳಿಸಿ ಗುಡ್ನ್ಯೂಸ್ ಕೊಟ್ಟಿದೆ.
ಗುಡ್ನ್ಯೂಸ್.. ರಾಜ್ಯದ ಆರು ಲಕ್ಷ ವಿದ್ಯಾರ್ಥಿಗಳ ಪೋಷಕರಿಗೆ ಕೊನೆಗೂ ಬಂದೇ ಬಿಟ್ಟಿದೆ ಗುಡ್ನ್ಯೂಸ್. ರಾಜ್ಯ ಸರ್ಕಾರ ಜಾರಿ ಮಾಡಿದ್ದ ವಯೋಮಿತಿ ಕಾನೂನು, ಅದ್ರಿಂದ ಸೃಷ್ಟಿಯಾದ ಗೊಂದಲ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕೊನೆಗೂ ಈ ವಯೋಮಿತಿ ಗೊಂದಲದಿಂದ ಆದ ಸಮಸ್ಯೆಗೆ ಒಂದು ಪರಿಹಾರ ಹುಡುಕಿದೆ ಸರ್ಕಾರ.
ನ್ಯೂಸ್ಫಸ್ಟ್ ನಿರಂತ ವರದಿ.. ರಾಜ್ಯ ಸರ್ಕಾರ ಕೊಡ್ತು ಗುಡ್ನ್ಯೂಸ್..!
ಪೋಷಕರೇ.. ಇನ್ಮುಂದೇ ಆರಲ್ಲ 5 ವರ್ಷ 5 ತಿಂಗಳ ವಯೋಮಿತಿ ಫಿಕ್ಸ್!
ಕೆಲ ತಿಂಗಳ ಹಿಂದೆಯಷ್ಟೇ ಮಕ್ಕಳನ್ನ ಒಂದನೇ ತರಗತಿಗೆ ಅಡ್ಮೀಷನ್ ಮಾಡಿಸ್ಬೇಕು ಅಂತಂದ್ರೆ, ಆರು ವರ್ಷ ಕಡ್ಡಾಯ ಅನ್ನೋ ನಿಯಮ ಜಾರಿಗೆ ಮಾಡಿತ್ತು. ಇದ್ರಿಂದ ಸುಮಾರು 6 ಲಕ್ಷ ವಿದ್ಯಾರ್ಥಿಗಳಿಗೆ ಟೆನ್ಷನ್ ಶುರುವಾಗಿತ್ತು. ಯಾಕಂದ್ರೆ, ಮಕ್ಕಳು 6 ವರ್ಷಕ್ಕಿಂತ ಕೆಲವೇ ದಿನಗಳು ಕಮ್ಮಿಯಿದ್ರೂ ಅವ್ರಿಗೆ ಅಡ್ಮಿಷನ್ ಸಿಗ್ತಿರಲಿಲ್ಲ. ಹೀಗಾಗಿ, ಲಕ್ಷಾಂತರ ಪೋಷಕರು ಕಂಗಾಲಾಗಿದ್ರು. ಅಷ್ಟೇ ಅಲ್ಲ, ಇದ್ರಿಂದ ಮಕ್ಕಳಿಗೂ ಕೂಡ ಮನೋ ಸಮಸ್ಯೆ ಎದುರಾಗಿತ್ತು.
ನ್ಯೂಸ್ಫಸ್ಟ್ ಕೂಡ ಈ ಬಗ್ಗೆ ಸತತವಾಗಿ ಸುದ್ದಿ ಪ್ರಸಾರ ಮಾಡಿ, ಸಮಸ್ಯೆಯನ್ನ ಸರ್ಕಾರದ ಕಿವಿಗೂ ತಲುಪಿಸಿತ್ತು. ಪರಿಣಾಮ ಕೊನೆಗೂ ರಾಜ್ಯ ಸರ್ಕಾರ ಇದೊಂದು ವರ್ಷ ವಯೋಮಿತಿ ಸಡಿಲಿಸಿದ್ದು, ಈ ವರ್ಷಕ್ಕೆ ಮಾತ್ರ 5.5ವರ್ಷಕ್ಕೆ ಇಳಿಸಿ ರಿಲಾಕ್ಸೇಷನ್ ಕೊಟ್ಟಿದೆ.
ಇದನ್ನೂ ಓದಿ: ಪೋಷಕರೇ ಗಮನಿಸಿ.. ಈ ವರ್ಷ 1ನೇ ತರಗತಿ ಅಡ್ಮಿಷನ್‌ನಲ್ಲಿ ಮಹತ್ವದ ಬದಲಾವಣೆ; ಓದಲೇಬೇಕಾದ ಸ್ಟೋರಿ!
ಸದ್ಯ ಸರ್ಕಾರ ವಯೋಮಿತಿ ಸಡಿಲಿಸಿ ಆದೇಶ ಕೊಡ್ತಿದ್ದಂತೆ ಕಂಗಾಲಾಗಿದ್ದ ಪೋಷಕರು ಫುಲ್ ಖುಷ್ ಆಗಿದ್ದಾರೆ. ಈ ವರ್ಷ ವಯೋಮಿತಿ ಸಡಿಲಿಸಿ ಶಿಕ್ಷಣ ಇಲಾಖೆ ಕಂಗಲಾಗಿದ್ದ ಪೋಷಕರ ಕಣ್ಣಲ್ಲಿ ಖುಷಿ ತರಿಸಿದೆ. ಈ ಮೂಲಕ ಪೋಷಕರ ಪರವಾಗಿ ನಿಂತು ಸುದ್ದಿ ಮಾಡಿದ ನ್ಯೂಸ್ಫಸ್ಟ್ ಪ್ರಯತ್ನಕ್ಕೂ ಫಲ ಸಿಕ್ಕಂತಾಗಿದೆ.
6 ವರ್ಷ ರೂಲ್ ಯಾಕೆ? ಗೊಂದಲ ಏನು?
2022 ನವೆಂಬರ್ನಲ್ಲಿ 1ನೇ ತರಗತಿಗೆ 6 ವರ್ಷ ಕಡ್ಡಾಯ ಎಂದು ಆದೇಶ
2025ರ ಶೈಕ್ಷಣಿಕ ವರ್ಷದಿಂದ ನಿಯಮ ಜಾರಿಗೆ ಬರಲಿದೆ ಎಂದಿದ್ದ ಶಿಕ್ಷಣ ಇಲಾಖೆ
ಆ ಪ್ರಕಾರ ಈ ವರ್ಷ ಜೂನ್ 1ಕ್ಕೆ ಒಂದನೇ ತರಗತಿಗೆ ಸೇರಿಸಲು 6 ವರ್ಷ ಕಡ್ಡಾಯ
6 ವರ್ಷಕ್ಕೆ ಮಕ್ಕಳು ಕಲಿಕೆಗೆ ಭೌತಿಕವಾಗಿ ಸಿದ್ಧರಾಗಿರ್ತಾರೆ ಅದಕ್ಕೆ ಈ ನಿಯಮ
ಆದ್ರೆ, ನಿಯಮ ಜಾರಿಗೂ ಮುಂಚೆ ಅಂಗನವಾಡಿಗೆ ಸೇರಿಸಿದ್ದ ಮಕ್ಕಳಿಗೆ ತೊಂದರೆ
ಆ ಮಕ್ಕಳು ಈಗ UKG ಮುಗಿಸಿದ್ದಾರೆ ಒಂದನೇ ತರಗತಿಗೆ ಅಡ್ಮಿಷನ್ ಆಗ್ಬೇಕಿದೆ
ಆದ್ರೆ, ಅವರಿಗೆ ಇನ್ನೂ 6 ವರ್ಷ ತುಂಬಿರದ ಕಾರಣ ಅಡ್ಮಿಷನ್ ಸಿಗದೇ ಗೊಂದಲ
ಪರಿಣಾಮ ಮಕ್ಕಳನ್ನ ಮತ್ತೆ UKG ಅಥವಾ ಮನೆಯಲ್ಲಿ ಇರಿಸಿಕೊಳ್ಬೇಕಾದ ಅನಿವಾರ್ಯತೆ
ಈ ವರ್ಷ ಮಾತ್ರ ವಯೋಮಿತಿ ಸಡಲಿಕೆ, ಮುಂದಿನ ವರ್ಷದಿಂದ ಸಮಸ್ಯೆ ಆಗಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ