/newsfirstlive-kannada/media/post_attachments/wp-content/uploads/2025/04/Super-over.jpg)
ಐಪಿಎಲ್ ಸೀಸನ್ 18ರ ಮೊದಲ ಸೂಪರ್ ಓವರ್ ಕದನಕ್ಕೆ ನಿನ್ನೆಯ ಪಂದ್ಯ ಸಾಕ್ಷಿಯಾಯ್ತು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಸೂಪರ್ ಕದನದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗಾಗಿ ಜಿದ್ದಿಗೆ ಬಿದ್ದು ಹೋರಾಡಿದ್ವು.
ಹೋಮ್ಗ್ರೌಂಡ್ನಲ್ಲಿ ಮೊದಲು ಬ್ಯಾಟಿಂಗ್ಗೆ ಬಂದ ಡೆಲ್ಲಿ ಕ್ಯಾಪಿಟಲ್ಸ್ಗೆ ಉತ್ತಮ ಆರಂಭ ಸಿಗ್ತು. ಅಭಿಷೇಕ್ ಪೊರೆಲ್ ಅಬ್ಬರದ ಆಟವಾಡಿದ್ರು. ತುಷಾರ್ ದೇಶಪಾಂಡೆ ಎಸೆದ 2ನೇ ಓವರ್ನಲ್ಲಿ 23 ರನ್ ಚಚ್ಚಿದ್ರು. ಆದ್ರೆ ಆ ಬಳಿಕ ಡೆಲ್ಲಿ ದಿಡೀರ್ ಕುಸಿತ ಕಾಣ್ತು. ಜೇಮ್ಸ್ ಫ್ರೆಸರ್ ಮಕ್ಗುರ್ಕ್ ಮತ್ತೊಂದು ಫ್ಲಾಪ್ ಶೋ ನೀಡಿದ್ರೆ, ಕಳೆದ ಪಂದ್ಯದಲ್ಲಿ ಮಿಂಚಿದ್ದ ಕರುಣ್ ನಾಯರ್ಗೆ ಲಕ್ ಕೈ ಕೊಡ್ತು. ದುರಾದೃಷ್ಟವಶಾತ್ ರನೌಟ್ ಆಗಿ ನಿರ್ಗಮಿಸಿದ್ರು.
ಇದನ್ನೂ ಓದಿ: ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ.. ಎಲ್ಲೆಲ್ಲಿ, ಎಷ್ಟು ದಿನ ಭರ್ಜರಿ ಮಳೆ..?
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಕೆ.ಎಲ್ ರಾಹುಲ್ ಸ್ಲೋ ಇನ್ನಿಂಗ್ಸ್ ಕಟ್ಟಿದ್ರು. ಕೇವಲ 118ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ರಾಹುಲ್ 38 ರನ್ಗಳಿಸಿ ಔಟಾದ್ರು. ರಾಹುಲ್ ಬೆನ್ನಲ್ಲೇ ಅಭಿಷೇಕ್ ಪೊರೆಲ್ ಕೂಡ ಪೆವಿಲಿಯನ್ ಸೇರಿದ್ರು. 49 ರನ್ಗಳಿಗೆ ಪರೆಯಕ್ ಆಟ ಅಂತ್ಯವಾಯ್ತ. ಬಳಿಕ ಕಣಕ್ಕಿಳಿದ ನಾಯಕ ಅಕ್ಷರ್ ಪಟೇಲ್ ಅಬ್ಬರಿಸಿದ್ರು. 4 ಬೌಂಡರಿ, 2 ಸಿಕ್ಸರ್ ಸಿಡಿಸಿದ ಅಕ್ಷರ್ ಜಸ್ಟ್ 14 ಎಸೆತಗಳಲ್ಲಿ 34 ರನ್ ಸಿಡಿಸಿದ್ರು.
ಟ್ರಿಸ್ಟನ್ ಸ್ಟಬ್ಸ್ 18 ಬಾಲ್ಗಳಲ್ಲಿ ಅಜೇಯ 34 ರನ್ಗಳಿಸಿದ್ರೆ ಅಶುತೋಷ್ ಶರ್ಮಾ ಅಜೇಯ 15 ರನ್ಗಳಿಸಿದ್ರು. ಅಂತಿಮವಾಗಿ 20 ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ 188 ರನ್ಗಳಿಸಿತು. 189 ರನ್ಗಳ ಸ್ಪರ್ಧಾತ್ಮಕ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ ರಾಯಲ್ ಆರಂಭ ಪಡೆದುಕೊಳ್ತು. ಸಂಜು ಸ್ಯಾಮ್ಸನ್ - ಯಶಸ್ವಿ ಜೈಸ್ವಾಲ್ ಅಬ್ಬರದ ಆರಂಭ ನೀಡಿದ್ರು. 2 ಬೌಂಡರಿ, 3 ಸಿಕ್ಸರ್ ಸಿಡಿಸಿ ಮಿಂಚಿದ್ದ ಸಂಜು ಸ್ಯಾಮ್ಸನ್ 19 ಎಸೆತಗಳಲ್ಲೇ 31 ರನ್ ಚಚ್ಚಿದ್ರು. ಇಂಜುರಿಗೆ ತುತ್ತಾಗಿ ನಿರ್ಗಮಿಸಿದ್ರು.
ಸಂಜು ರಿಟೈರ್ಡ್ ಹರ್ಟ್ ಆಗಿ ನಿರ್ಗಮಿಸಿದ್ರೆ ರಿಯಾನ್ ಪರಾಗ್ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಕ್ಲೀನ್ಬೋಲ್ಡ್ ಆದ್ರು. ಅರ್ಧಶತಕ ಸಿಡಿಸಿ ಮಿಂಚಿದ ಯಶಸ್ವಿ ಜೈಸ್ವಾಲ್ 3 ಬೌಂಡರಿ, 4 ಸಿಕ್ಸರ್ ಸಿಡಿಸಿದ್ರು. 51 ರನ್ಗಳಿಸಿದ್ದ ವೇಳೆ ಜೈಸ್ವಾಲ್ ಕುಲ್ದೀಪ್ ಯಾದವ್ ಸ್ಪಿನ್ ಬಲೆಗೆ ಬಿದ್ರು.
ಇದನ್ನೂ ಓದಿ: ಸೂಪರ್ ಓವರ್ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಕನ್ನಡಿಗ ಕೆಎಲ್ ರಾಹುಲ್..!
ಅಂತಿಮ ಹಂತದಲ್ಲಿ ಜೊತೆಯಾದ ದೃವ್ ಜುರೇಲ್ - ಶಿಮ್ರಾನ್ ಹೆಟ್ಮೆಯರ್ ಸಾಲಿಡ್ ಆಟವಾಡಿದ್ರು. ಪರಿಣಾಮ ಪಂದ್ಯ ರಣರೋಚಕ ಹಂತ ತಲುಪಿತ್ತು. 20ನೇ ಓವರ್ನಲ್ಲಿ ರಾಜಸ್ಥಾನ ಗೆಲುವಿಗೆ 9 ರನ್ ಮಾತ್ರ ಬೇಕಿತ್ತು. ಕೊನೆಯ ಓವರ್ನಲ್ಲಿ ಟೈಟ್ ಸ್ಪೆಲ್ ಹಾಕಿದ ಸ್ಟಾರ್ಕ್ ಕೇವಲ 8 ರನ್ ಮಾತ್ರ ಬಿಟ್ಟು ಕೊಟ್ರು. ಪರಿಣಾಮ ಪಂದ್ಯ ಟೈ ಆಯ್ತು.
ಈ ಸೀಸನ್ನ ಮೊದಲು ಸೂಪರ್ ಓವರ್ನಲ್ಲಿ ಬ್ಯಾಟಿಂಗ್ಗೆ ಬಂದ ರಾಜಸ್ಥಾನ್ ರಾಯಲ್ಸ್ 11 ರನ್ಗಳಿಸಿತು. ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್ ತಲಾ ಒಂದು ಬೌಂಡರಿ ಸಿಡಿಸಿದ್ರು. ಅಂತಿಮವಾಗಿ ಇಬ್ಬರೂ ರನೌಟ್ ಆಗಿ ನಿರ್ಗಮಿಸಿದ್ರು.
12 ರನ್ಗಳ ಟಾರ್ಗೆಟ್ ಡೆಲ್ಲಿಗೆ ಸವಾಲೆನಿಸಲೇ ಇಲ್ಲ. ಮೊದಲ ಎಸೆತದಲ್ಲೇ 2 ರನ್ಗಳಿಸಿದ ರಾಹುಲ್ 2ನೇ ಎಸೆತದಲ್ಲಿ ಬೌಂಡರಿ ಸಿಡಿಸಿದ್ರೆ, ಎದುರಿಸಿದ ಮೊದಲ ಎಸೆತವನ್ನೇ ಟ್ರಿಸ್ಟನ್ ಸ್ಟಬ್ಸ್ ಸಿಕ್ಸರ್ ಸಿಡಿಸಿದ್ರು. 2 ಎಸೆತಗಳು ಬಾಕಿ ಇರುವಂತೆ ಡೆಲ್ಲಿ ಗೆದ್ದು ಬೀಗಿತು. ಸೂಪರ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಇದನ್ನೂ ಓದಿ: ರಾಜಸ್ಥಾನ್ ತಂಡಕ್ಕೆ ಬಿಗ್ ಶಾಕ್; ಬ್ಯಾಟಿಂಗ್ ಮಾಡುವಾಗಲೇ ಪಿಚ್ನಿಂದ ಹೊರ ನಡೆದ ಕ್ಯಾಪ್ಟನ್ ಸಂಜು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್