/newsfirstlive-kannada/media/post_attachments/wp-content/uploads/2024/07/Karnataka-loka-Raid.jpg)
ಬೆಂಗಳೂರು: ರಾಜ್ಯದ ಹಲವೆಡೆ ಇಂದು ಲೋಕಾಯುಕ್ತ ದಾಳಿ ನಡೆದಿದ್ದು, ಹಲವು ಅಧಿಕಾರಿಗಳ ಆಸ್ತಿ ಮೌಲ್ಯ ಪರಿಶೀಲನೆ ಮಾಡಲಾಗುತ್ತಿದೆ. ಕಾನೂನು ಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಅತ್ಹರ್ ಅಲಿ ಮನೆ ಮೇಲೂ ರೇಡ್ ಮಾಡಲಾಗಿದೆ.
ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್.. ಬೆಳ್ಳಂಬೆಳಗ್ಗೆ ರಾಜ್ಯದ 54 ಕಡೆಗಳಲ್ಲಿ ರೇಡ್; ಎಲ್ಲೆಲ್ಲಿ?
ಲೋಕಾಯುಕ್ತ ರೇಡ್ನ ವೇಳೆ ಅಧಿಕಾರಿ ಹೈಡ್ರಾಮಾ ಮಾಡಿದ್ದು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಡೈಮಂಡ್ ನೆಕ್ಲೆಸ್ ಪತ್ತೆಯಾಗಿದೆ. ಕಲ್ಯಾಣನಗರದ HRBR ಲೇಔಟ್ನಲ್ಲಿನ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ರೇಡ್ ಆಗುತ್ತಿದ್ದಂತೆ ಅತ್ಹರ್ ಅಲಿ ಅವರು ಪಕ್ಕದ ಮನೆಗೆ ಚಿನ್ನದ ಬ್ಯಾಗ್ ಎಸೆದಿದ್ದಾರೆ. ಬ್ಯಾಗ್ ಎಸೆದಾಗ ಶಬ್ಧ ಬಂದ ಹಿನ್ನೆಲೆ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ತಕ್ಷಣ ಪಕ್ಕದ ಮನೆಗೆ ತೆರಳಿ ಬ್ಯಾಗ್ ವಶಕ್ಕೆ ಪಡೆದಿದ್ದಾರೆ.
ಅತ್ಹರ್ ಅಲಿ ಮನೆಯಲ್ಲಿ ಸಿಕ್ಕಿದ್ದೇನು?
25 ಲಕ್ಷ ನಗದು
2.2 ಕೆ.ಜಿ ಚಿನ್ನಾಭರಣ
2 ಕೆ.ಜಿ ಬೆಳ್ಳಿ ಸಾಮಗ್ರಿ
40ಕ್ಕೂ ಹೆಚ್ಚು ವಾಚ್ಗಳು
ವಿದೇಶಿ ನೋಟುಗಳು
ಡೈಮಂಡ್ ನೆಕ್ಲೆಸ್ಗಳು
ಬ್ಯಾಗ್ ರಹಸ್ಯ ಬಯಲಾಗಿದ್ದು ಹೇಗೆ?
ಲೋಕಾಯುಕ್ತ ಅಧಿಕಾರಿಗಳು ಎಂಟ್ರಿ ನೀಡುತ್ತಿದ್ದಂತೆ ಅತ್ಹರ್ ಅಲಿ ಅವರು ಚಿನ್ನದ ಬ್ಯಾಗ್ ಅನ್ನು ಪಕ್ಕದ ಮನೆಗೆ ಎಸೆದಿದ್ದಾರೆ. ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಬಿದ್ದಿದೆ. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಅತ್ಹರ್ ಅಲಿ ಅವರ ಮನೆಯ ಮೊದಲ ಅಂತಸ್ತು ಇದೆ. ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಚಿನ್ನ ತುಂಬಿ ಬ್ಯಾಗ್‌ಗೆ ಎಸೆದಿದ್ದಾರೆ. ನೆರೆ ಮನೆ ನಿವಾಸಿ ಬ್ಯಾಗ್ ಎಸೆದಿದ್ದನ್ನು ನೋಡಿ ಖುದ್ದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರೋದು ಪತ್ತೆಯಾಗಿದೆ. ಕೂಡಲೇ ಲೋಕಾ ಅಧಿಕಾರಿಗಳು ಬ್ಯಾಗ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ.. ನಿರಂತರ ಮಳೆಗೆ ಮನೆ ಕುಸಿದು ಅವಳಿ ಮಕ್ಕಳು, ಓರ್ವ ಮಹಿಳೆ ಸಾವು
ಪಕ್ಕದ ಮನೆಗೆ ಬ್ಯಾಗ್ ಎಸೆದಾಗ ಶಬ್ಧ ಬಂದಿದೆ. ಆಗ ಪಕ್ಕದ ಮನೆಯವರು ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಲೋಕಾಯುಕ್ತ ಅಧಿಕಾರಿಗಳು ಪಕ್ಕದ ಮನೆಗೆ ತೆರಳಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಅಧಿಕಾರಿ ಚಿನ್ನ ಎಸೆದಿರೋ ಮಾಹಿತಿಯನ್ನು ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಅವರು ಖಚಿತ ಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ