/newsfirstlive-kannada/media/post_attachments/wp-content/uploads/2024/02/BDR_14_LACK_MONEY.jpg)
ಬೆಂಗಳೂರು: ಹಾಡಹಗಲೇ 2 ಕೋಟಿ ರೂಪಾಯಿ ರಾಬರಿ ಮಾಡಿರೋ ಘಟನೆ ವಿದ್ಯಾರಣ್ಯಪುರಂನ ಎಂಎಸ್ ಪಾಳ್ಯದ ಎಕೆ ಎಂಟರ್ ಪ್ರೈಸ್ ಶಾಪ್ ನಲ್ಲಿ ನಡೆದಿದೆ.
ಇದನ್ನೂ ಓದಿ:ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್​ ಮಸ್ತಿ.. ಹೋಗಿದ್ದು ಎಲ್ಲಿಗೆ ಗೊತ್ತಾ..? PHOTOS
/newsfirstlive-kannada/media/post_attachments/wp-content/uploads/2025/06/bng.jpg)
ಕೆಂಗೇರಿಯ ಶ್ರೀಹರ್ಷ ಎಂಬುವವರು ಹಣ ಕಳೆದುಕೊಂಡಿದ್ದಾರೆ. ಶ್ರೀಹರ್ಷ ಹೊಸ ಕಂಪನಿಗೆ ಜಪಾನ್​ನಿಂದ ಯಂತ್ರ ಬೇಕಾಗಿರುತ್ತೆ. ಹೀಗಾಗಿ USDTಗೆ (ಕ್ರಿಪ್ಟೋಕರೆನ್ಸಿ) ತಮ್ಮ ಬಳಿ ಇದ್ದ 2 ಕೋಟಿ ಹಣವನ್ನು ಕನ್ವರ್ಟ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಸ್ನೇಹಿತರ ಮೂಲಕ ಜೂನ್​ 25ರಂದು ಮಧ್ಯಾಹ್ನ 3 ಗಂಟೆಯಲ್ಲಿ ಬೆಂಜಮಿನ್ ಹರ್ಷ ಎಂಬಾತ ಎಕೆ ಎಂಟರ್ ಪ್ರೈಸ್ ಶಾಪ್‌ನಲ್ಲಿ ಶ್ರೀಹರ್ಷಗೆ ಭೇಟಿಯಾಗಿದ್ದ. ಬಳಿಕ ಬೆಂಜಮಿನ್ ಮತ್ತು ಇಬ್ಬರು ಸ್ನೇಹಿತರು 2 ಕೋಟಿ ಹಣ ಎಣಿಕೆ ಮಾಡುತ್ತಿದ್ದರು. ಇದೇ ವೇಳೆ 6-7 ಆಗಂತುಕರು ಶಾಪ್​ಗೆ ಎಂಟ್ರಿ ಕೊಟ್ಟಿದ್ದಾರೆ.
ಬಳಿಕ ಶ್ರೀಹರ್ಷ ಕತ್ತಿಗೆಗೆ ಚಾಕು ಇಟ್ಟು, ಶಾಪ್​ನಲ್ಲಿದ್ದ ಶ್ರೀ ಹರ್ಷ, ಬೆಂಜಮಿನ್ ಮತ್ತು ಸ್ನೇಹಿತರನ್ನ ಕೂಡಿ ಹಾಕಿ 2 ಕೋಟಿ ಹಣ ಚೀಲಕ್ಕೆ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ.
ಸದ್ಯ ಈ ಘಟನೆ ಬಗ್ಗೆ ಶ್ರೀಹರ್ಷ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದಾರೆ. ರಾಬರಿ ಬಗ್ಗೆ ಬೆಂಜಮಿನ್ ಹರ್ಷ ಮತ್ತು ಇತರರ ವಿರುದ್ಧ ದೂರು ದಾಖಲಾಗಿದೆ. ಸದ್ಯ ಬೆಂಜಮಿನ್ ಹರ್ಷ ಮತ್ತು ಸ್ನೇಹಿತರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಗೇಯೆ ರಾಬರಿ ಮಾಡಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us