/newsfirstlive-kannada/media/post_attachments/wp-content/uploads/2025/06/ASSAM_RAINS_1.jpg)
ನವದೆಹಲಿ: ಸದ್ಯ ದಕ್ಷಿಣದ ರಾಜ್ಯಗಳಿಗೆ ಮಳೆರಾಯ ಬಿಡುವು ಕೊಟ್ಟಿದ್ದಾನೆ ಎಂದರೆ ಈಶಾನ್ಯ ರಾಜ್ಯಗಳಲ್ಲಿ ಆರ್ಭಟಿಸುತ್ತಿದ್ದಾರೆ. ಕೇವಲ ಎರಡು ದಿನಗಳಲ್ಲಿ ವರುಣ ಅವಾಂತರಗಳನ್ನು ಸೃಷ್ಟಿಸಿದ್ದು ಭೂಕುಸಿತ, ಹಠಾತ್ ಪ್ರವಾಹದಿಂದ ಇದುವರೆಗೆ 30 ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/06/ASSAM_RAINS_2.jpg)
ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಚಲ ಪ್ರದೇಶ, ಮೇಘಾಲಯ, ಮಣಿಪುರ ಮತ್ತು ಮಿಜೋರಾಂನಲ್ಲಿ ವರುಣಾರ್ಭಟ ಜೋರಾಗಿದೆ. ಮಳೆ ಜೊತೆಗೆ ಗಾಳಿ ಕೂಡ ಬೀಸುತ್ತಿದ್ದು ಗಿಡ, ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಕೆಲ ಹಳ್ಳಿಗಳಲ್ಲಿ ರಾತ್ರಿ ಎಲ್ಲ ಕರೆಂಟ್ ಇಲ್ಲದೇ ಸ್ಥಳೀಯರು ಕತ್ತಲಲ್ಲೇ ದಿನ ಕಳೆದಿದ್ದಾರೆ. ಹಲವು ಕಡೆ ರಸ್ತೆ ಸಂಪರ್ಕ ಸ್ಥಗಿತವಾಗಿದ್ದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/ASSAM_RAINS_3.jpg)
ಭಾರೀ ಮಳೆಯಿಂದಾಗಿ ಇದುವರೆಗೆ 30 ಜನರು ಕೊನೆಯುಸಿರೆಳೆದಿದ್ದಾರೆ. ಅಸ್ಸಾ ರಾಜ್ಯದ 12 ಜಿಲ್ಲೆಗಳ 60 ಸಾವಿರಕ್ಕೂ ಹೆಚ್ಚು ಜನರು ಮಳೆಯಿಂದ ಭಾರೀ ಸಮಸ್ಯೆಗೆ ಒಳಗಾಗಿದ್ದಾರೆ. ಮೇ 31 ರಂದು ಅಸ್ಸಾಂನ ಕಾಮರೂಪ ಜಿಲ್ಲೆಯಲ್ಲಿ 5 ಜನರು, ಪ್ರವಾಹ ಹಾಗೂ ಭೂಕುಸಿತದಿಂದ ಅರುಣಚಲ ಪ್ರದೇಶದಲ್ಲಿ 7 ಮಂದಿ, ಮತ್ತೊಂದು ಘಟನೆಯಲ್ಲಿ ಪೂರ್ವ ಕಾಮೆಂಗ್ ಜಿಲ್ಲೆಯಲ್ಲಿ ಭೂಕುಸಿತದಿಂದ ಬ್ರೆಜ್ಜಾ ಕಾರು ಉರುಳಿಬಿದ್ದು 2 ಕುಟುಂಬದಿಂದ 7 ಜನರು ನಿಧನ ಹೊಂದಿದ್ದಾರೆ ಎಂದು ಹೇಳಲಾಗಿದೆ.
/newsfirstlive-kannada/media/post_attachments/wp-content/uploads/2025/06/ASSAM_RAINS.jpg)
ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್​​ಡಿಆರ್​​ಎಫ್​), ಇಂಡೋ- ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಹಲವಾರು ನಿರಾಶ್ರಿತರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುತ್ತಿದ್ದಾರೆ. ಇನ್ನು ಕಾಣೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅರುಣಾಚಲ ಪ್ರದೇಶದ ಗೃಹ ಸಚಿವೆ ಮಾಮಾ ನಟುಂಗ್ ಅವರು ತಿಳಿಸಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us