Advertisment

ರಸ್ತೆ ಮಧ್ಯೆ ಕೆಟ್ಟು ನಿಂತ 2 KSRTC ಬಸ್​..‌ ಕಿಲೋ ಮೀಟರ್​ವರೆಗಿನ ಟ್ರಾಫಿಕ್​ನಲ್ಲಿ ನಿಂತ ಆ್ಯಂಬುಲೆನ್ಸ್​; ಎಲ್ಲಿ?

author-image
Bheemappa
Updated On
ರಸ್ತೆ ಮಧ್ಯೆ ಕೆಟ್ಟು ನಿಂತ 2 KSRTC ಬಸ್​..‌ ಕಿಲೋ ಮೀಟರ್​ವರೆಗಿನ ಟ್ರಾಫಿಕ್​ನಲ್ಲಿ ನಿಂತ ಆ್ಯಂಬುಲೆನ್ಸ್​; ಎಲ್ಲಿ?
Advertisment
  • ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿ ಪ್ರವಾಸಿಗರು ಪರದಾಟ
  • ಬೆಳಗಿನ ಜಾವದಿಂದಲೂ ನಿಂತಲ್ಲೇ ನಿಂತಿರುವ ನೂರಾರು ವಾಹನಗಳು
  • ಒಂದೇ ಟೈಮ್​ನಲ್ಲಿ ಎರಡು ಸರ್ಕಾರಿ ಬಸ್​ ಕೆಟ್ಟಿದ್ದಕ್ಕೆ ಜನರಿಗೆ ತೊಂದರೆ

ಚಿಕ್ಕಮಗಳೂರು: ಎರಡು ಕೆಎಸ್​ಆರ್​ಟಿಸಿ ಬಸ್​ಗಳು ರಸ್ತೆ ಮಧ್ಯೆ ಕೆಟ್ಟು ನಿಂತಿದ್ದರಿಂದ ಚಾರ್ಮಾಡಿ ಘಾಟ್​ನ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಪ್ರವಾಸಿಗರು, ಸ್ಥಳೀಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

Advertisment

ಚಾರ್ಮಾಡಿ ಘಾಟ್​ನ ಅಣ್ಣಪ್ಪ ಸ್ವಾಮಿ ದೇವಾಲಯದ ರಸ್ತೆಯಲ್ಲಿ ಎರಡು ಕೆಎಸ್​ಆರ್​ಟಿಸಿ ಬಸ್​ಗಳು ಕೆಟ್ಟು ನಿಂತಿವೆ. ಇದರಿಂದ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಪ್ರವಾಸಿಗರು, ಸ್ಥಳೀಯ ಪ್ರಯಾಣಿಕರು ತೊಂದರೆಗೆ ಒಳಗಾಗಿ ಮಳೆಯಲ್ಲಿ ಯಾವ ಕಡೆ ಹೋಗಬೇಕು ಎನ್ನುವುದು ಗೊತ್ತಾಗದೆ ಸುಮ್ಮನೆ ಕುಳಿತ್ತಿದ್ದಾರೆ. ಇದು ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಹೆದ್ದಾರಿಯಾಗಿದೆ.

ಇದನ್ನೂ ಓದಿ: ‘ಮೋದಿಗೆ ಯಾರೂ ವೋಟ್ ಹಾಕಬೇಡಿ’.. ಹೀಗೆ ಶಾಲಾ ಮಕ್ಕಳಿಗೆ ಹೇಳಿದ್ದ ಶಿಕ್ಷಕ ಅರೆಸ್ಟ್​.. ಏನಿದು ಕೇಸ್​?

publive-image

ನಿರಂತರ ಮಳೆಯಿಂದ ಪ್ರವಾಸಿಗರು ಪ್ರಯಾಣಿಕರು ಪರದಾಡಿದ್ದು ಇಂತಹ ಟ್ರಾಫಿಕ್​ನಲ್ಲಿ ಮಂಗಳೂರಿಗೆ ಹೋಗುತ್ತಿದ್ದ ಆ್ಯಂಬುಲೆನ್ಸ್​ವೊಂದು ಸಿಲುಕಿಕೊಂಡಿದ್ದು ಒಳಗಿದ್ದ ರೋಗಿ ನೋವಿನಿಂದ ಬಳಲಿದ್ದಾರೆ. ಈ ಟ್ರಾಫಿಕ್ ಕ್ಲಿಯರ್ ಮಾಡಲು ಬಣಕಲ್ ಪೊಲೀಸರ‌ ಹರಸಾಹಸ ಪಡುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment