/newsfirstlive-kannada/media/post_attachments/wp-content/uploads/2025/04/Adil-Hussain-Thoker.jpg)
ಪಹಲ್ಗಾಮ್ ದಾಳಿಯ ನಂತರ ಭಾರತೀಯ ಸೇನೆಯು ಉಗ್ರರ ವಿರುದ್ಧ ಆಪರೇಷನ್ ತೀವ್ರಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಹಯೋಗದೊಂದಿಗೆ ಸೇನೆ ಮೆಗಾ ಕೂಂಬಿಂಗ್ ಆರಂಭಿಸಿದ್ದು, ಪ್ರತೀಕಾರದ ಮೊದಲ ಹೆಜ್ಜೆಯಾಗಿ ಇಬ್ಬರು ಉಗ್ರರ ಮನೆ ಧ್ವಂಸಗೊಂಡಿದೆ.
ಆಗಿದ್ದೇನು..?
ಪಹಲ್ಗಾಮ್ ದಾಳಿಯಲ್ಲಿ ಉಗ್ರ ಆಸಿಫ್ ಶೇಖ್ ಮತ್ತು ಆದಿಲ್ ಹಸೈನ್ ಥೋಕೆರ್ ಹೆಸರು ಕೇಳಿಬಂದಿದೆ. ಅಂತೆಯೇ ಜಮ್ಮು-ಕಾಶ್ಮೀರದ ಪೊಲೀಸರು ಆಸಿಫ್ ಮತ್ತು ಆದಿಲ್ ಮನೆ ಮೇಲೆ ದಾಳಿ ಮಾಡಲು ಅಲ್ಲಿಗೆ ತೆರಳಿತ್ತು. ಈ ಸಮಯದಲ್ಲಿ ಉಗ್ರರ ಮನೆ ಸ್ಫೋಟಗೊಂಡು ನಾಶ ಆಗಿದೆ. ಅವರ ಮನೆಯಲ್ಲಿ ಅನುಮಾನಾಸ್ಪದ ವಸ್ತುಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆ ಸಿಬ್ಬಂದಿ ಶೋಧ ಕಾರ್ಯಾಚರಣೆಗಾಗಿ ಆದಿಲ್ ಮತ್ತು ಆಸಿಫ್ ಶೇಖ್ ಮನೆಗೆ ಹೋಗಿತ್ತು. ಈ ಸಮಯದಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿವೆ. ಇದನ್ನು ನೋಡಿದ ಭದ್ರತಾ ಪಡೆ ಆತಂಕಗೊಂಡು ಅಲ್ಲಿಂದ ಹಿಂದೆ ಸರಿದಿದೆ. ನಂತರ ಭಾರೀ ಸ್ಫೋಟ ಮಾಡಲಾಗಿದೆ.
ಇದನ್ನೂ ಓದಿ: ಸರ್ವಪಕ್ಷ ಸಭೆಯಲ್ಲಿ ಭದ್ರತಾ ಲೋಪ ಒಪ್ಪಿಕೊಂಡ ಸರ್ಕಾರ..? ವಿಪಕ್ಷಗಳಿಗೆ ಸಿಕ್ಕ ಉತ್ತರ ಏನು?
2018ರಲ್ಲಿ ಟ್ರೈನಿಂಗ್..
ಆದಿಲ್ ಥೋಕರ್, ಲಷ್ಕರ್-ಎ-ತೊಯ್ಬಾದ ಉಗ್ರ. ಈತನನ್ನು ಆದಿಲ್ ಗುರಿ ಅಂತಲೂ ಕರೆಯುತ್ತಾರೆ. ಆದಿಲ್ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್ಬೆಹರಾ (Bijbehara) ನಿವಾಸಿ. ಸ್ಫೋಟದಲ್ಲಿ ಆತನ ಮನೆ ಸ್ಫೋಟಗೊಂಡಿದೆ. ಪಹಲ್ಗಾಮ್ ದಾಳಿಯಲ್ಲಿ ಆದಿಲ್ ಹೆಸರು ಕೇಳಿಬಂದಿದೆ. 2018 ರಲ್ಲಿ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿ ಭಯೋತ್ಪಾದಕ ತರಬೇತಿ ಪಡೆದುಕೊಂಡಿರುವ ಆರೋಪ ಇದೆ. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಒಬ್ಬರಲ್ಲ, ಇಬ್ಬರು ಉಗ್ರರ ಮನೆ ಉಡೀಸ್.. ಸ್ಫೋಟ ಮಾಡಿ ಧ್ವಂಸಗೊಳಿಸಿದ ಕ್ಷಣ ಹೇಗಿದೆ..? Video
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ