Advertisment

VIDEO: ಒಂಟೆ ಕಾಲು ಕಟ್ಟಿ ಬೈಕ್​ ಮೇಲೆ ಎತ್ಹಾಕೊಂಡು ಹೋದ ಕಿಡಿಗೇಡಿಗಳು; ನೆಟ್ಟಿಗರಿಂದ ಹಿಡಿಶಾಪ!

author-image
Gopal Kulkarni
Updated On
VIDEO: ಒಂಟೆ ಕಾಲು ಕಟ್ಟಿ ಬೈಕ್​ ಮೇಲೆ ಎತ್ಹಾಕೊಂಡು ಹೋದ ಕಿಡಿಗೇಡಿಗಳು; ನೆಟ್ಟಿಗರಿಂದ ಹಿಡಿಶಾಪ!
Advertisment
  • ಒಂಟೆಯ ಕಾಲು ಕಟ್ಟಿ ಬೈಕ್​ ಮೇಲೆ ಸಾಗಿಸಿದ ಭೂಪರು
  • ಸೋಷಿಯಲ್ ಮೀಡಿಯಾದಲ್ಲಾಯ್ತು ಈ ವಿಡಿಯೋ ವೈರಲ್
  • ಹೃದಯವೇ ಇಲ್ಲದವರು ಮಾಡುವ ಕಾರ್ಯ ಎಂದು ಆಕ್ರೋಶ

ಒಂಟೆಯ ನಾಲ್ಕು ಕಾಲುಗಳನ್ನು ಕಟ್ಟಿ ಬ್ಯುಸಿ ರಸ್ತೆಯಲ್ಲಿ ಹಾಡಹಗಲೇ ಬೈಕ್​ ಮೇಲೆ ತೆಗೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಈಗ ಭಯಂಕರ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಒಂಟೆಯನ್ನು ಇಂಡಿಗೋ ಫ್ಲೈಟ್​ನಲ್ಲಿಯೇ ಕೂರಿಸುವುದು ಕಷ್ಟ, ಅಂತಹದರಲ್ಲಿ ಇವರು ಬೈಕ್ ಮೇಲೆ ಸಾಗಿಸುತ್ತಿದ್ದಾರೆ ಎಂದು ಹಾಸ್ಯಭರಿತ ಕಮೆಂಟ್​ಗಳ ಜೊತೆಗೆ ಆಕ್ರೋಶವನ್ನು ಕೂಡ ಹೊರ ಹಾಕುತ್ತಿದ್ದಾರೆ.

Advertisment

ಒಂಟೆಗಳು ಸಾಧಾರಣವಾಗಿ ಅತಿಯಾದ ತಾಪಮಾನ ಇರುವ ಕಡೆ ವಾಸಿಸುವಂತಹ ಪ್ರಾಣಿಗಳು. ಮರುಭೂಮಿಗಳಲ್ಲಿ ಇವುಗಳನ್ನು ಪ್ರಯಾಣಕ್ಕಾಗಿ ಹೆಚ್ಚು ಬಳಸುತ್ತಾರೆ. ಇಂತಹ ದೈತ್ಯಾಕಾರದ ಒಂಟೆಯನ್ನು ಕೇವಲ ಟೂ ವ್ಹೀಲರ್ ಬೈಕ್​ ಮೇಲೆ ಸಾಗಿಸುತ್ತಿರುವುದು ವಿಚಿತ್ರವಾಗಿ ಕಾಣುವುದರ ಜೊತೆಗೆ ಆ ಮೂಕ ಪ್ರಾಣಿಯ ಮೇಲೆ ಮರುಕವೂ ಕೂಡ ಹುಟ್ಟತ್ತಿದೆ.

ಇದನ್ನೂ ಓದಿ:ಪತಿಗೆ 100, ಪತ್ನಿಗೆ 102 ವರ್ಷ.. ಇವರು ವಿಶ್ವದ ಅತ್ಯಂತ ಹಿರಿಯ ದಂಪತಿಗಳು; ಗಿನ್ನಿಸ್ ರೆಕಾರ್ಡ್‌!

ಅದರಲ್ಲೂ ಆ ಒಂಟೆಯ ನಾಲ್ಕು ಕಾಲುಗಳನ್ನು ಕಟ್ಟಿ ಇಕ್ಕಟ್ಟಾದ ಜಾಗದಲ್ಲಿ ಕೂರಿಸಿಕೊಂಡು ಹೋಗುತ್ತಿರುವುದು ಹಿಂಸೆಯ ಪರಮಾವಧಿಯಂತೆ ಕಾಣುತ್ತಿದೆ. ಈ ವಿಡಿಯೋವನ್ನು ನೋಡಿದ ಜನರು ಕೂಡಲೇ ಅವರ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದ್ರೆ ಈ ಒಂದು ಘಟನೆ ನಡೆದಿದ್ದು ಎಲ್ಲಿ. ಮೂಲವಾಗಿ ವಿಡಿಯೋ ಯಾರು ಶೇರ್ ಮಾಡಿದ್ದು ಎಂಬ ಮಾಹಿತಿಗಳು ಇನ್ನೂ ಸ್ಪಷ್ಟವಾಗಿ ಸಿಕ್ಕಿಲ್ಲ.

Advertisment


">December 2, 2024

ವಿಡಿಯೋದಲ್ಲಿ ರಸ್ತೆಯ ಅಕ್ಕಪಕ್ಕ ಅರೇಬಿಕ್ ಭಾಷೆಯ ಕಟೌಟ್​ಗಳು ಕಾಣಿಸಿದ್ದು ಬಹುಶಃ ಇದು ಮಧ್ಯಪ್ರಾಚ್ಯದ ಯಾವುದಾದರೂ ದೇಶದಲ್ಲಿ ನಡೆದಿರುವ ಘಟನೆ ಎಂದು ಅಂದಾಜಿಸಲಾಗುತ್ತಿದೆ. ಆದ್ರೆ ವಿಡಿಯೋ ಮಾತ್ರ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಇದು ಶುದ್ಧಾನುಶುದ್ಧ ಹಿಂಸಾ ವಿನೋದ ಎಂದು ಕೆಲವರು ಹೇಳಿದ್ರೆ. ಹೃದಯವೇ ಇಲ್ಲದವರು ಮಾಡುವಂತ ಕೃತ್ಯವಿದು ಎಂದು ಇನ್ನೂ ಕೆಲವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment