/newsfirstlive-kannada/media/post_attachments/wp-content/uploads/2024/12/2-More-Hindu-Priest-Bangla.jpg)
ಬಾಂಗ್ಲಾದೇಶದಲ್ಲಿ ಹಿಂದುಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ದೌರ್ಜನ್ಯ ನಿಲ್ಲುತ್ತಿಲ್ಲ. ಈಗಾಗಲೇ ಹಿಂದೂಗಳ ಹಕ್ಕಿಗಾಗಿ ಹೋರಾಟ ಮಾಡಿದ್ದ ಇಸ್ಕಾನ್ನ ಸ್ವಾಮಿಜಿ ಚಿನ್ಮೋಯ್ ಕೃಷ್ಣದಾಸ್ ಅವರನ್ನು ದೇಶದ್ರೋಹಿ ಆರೋಪದ ಮೇಲೆ ಬಂಧಿಸಲಾಗಿದೆ. ಈಗ ಮತ್ತೆ ಇಬ್ಬರು ಹಿಂದೂ ಸನ್ಯಾಸಿಗಳನ್ನು ಬಂಧಿಸುವ ಮೂಲಕ ಬಾಂಗ್ಲಾ ಸರ್ಕಾರ ತನ್ನ ಉದ್ಧಟತನವನ್ನು ಮುಂದುವರಿಸಿದೆ.
ಬಂಧನಕ್ಕೊಳಗಾದ ಸ್ವಾಮೀಜಿಗಳನ್ನು ರುದ್ರಪ್ರೊತಿ ಕೆಸಾಬ್ ದಾಸ್ ಹಾಗೂ ರಂಗನಾಥ್ ಶ್ಯಾಮ ಸುಂದರ್ ದಾಸ್ ಎಂದು ಗುರುತಿಸಲಾಗಿದೆ. ಚಿನ್ಮೋಯ್ ಕೃಷ್ಣದಾಸ್ ಅವರಿಗೆ ಊಟ, ಔಷಧಿ ಹಾಗೂ ಹಣವನ್ನು ಕೊಡಲು ಜೈಲಿಗೆ ಭೇಟಿ ನೀಡಿದಾಗ ಪೊಲೀಸರು ಈ ಇಬ್ಬರೂ ಸ್ವಾಮೀಜಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿಗಳು ಬಂದಿದೆ.
ಪ್ರೊಬರ್ಥಕ ಸಂಘದ ಪ್ರಾಂಶುಪಾಲರಾದ ಸ್ವತಂತ್ರ ಗೌರಂಗ್ ದಾಸ್ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು. ಚಿನ್ಮೋಯ್ ಕೃಷ್ಣದಾಸ್ ಅವರಿಗೆ ಊಟ ಹಾಗೂ ಔಷಧಿ ಕೊಡಲು ಹೋದ ವೇಳೆ ಈ ಇಬ್ಬರು ಸ್ವಾಮೀಜಿಗಳನ್ನು ಬಂಧಿಸಲಾಗಿದೆ ಎಂದು ನನಗೆ ವಾಯ್ಸ್ ರೆಕಾರ್ಡ್ ಮೂಲಕ ಗೊತ್ತಾಗಿದೆ ಎಂದು ಸ್ವತಂತ್ರ ಗೌರಂಗ್ ದಾಸ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಬಾಂಗ್ಲಾದೇಶದ ಪೊಲೀಸರು ಸ್ವಾಮೀಜಿಗಳು ಜೈಲಿಗೆ ಬಂದಾಗ ಅವರ ಮೇಲೆ ಹಲವು ಅನುಮಾನಗಳು ಮೂಡಿದವು. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ ಸದ್ಯಕ್ಕೆ ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಗೆ RSS ಖಂಡನೆ.. ಪ್ರಧಾನಿ ಮೋದಿ ಸರ್ಕಾರಕ್ಕೆ ಆಗ್ರಹ; ಹೇಳಿದ್ದೇನು?
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ, ದೇಶದಲ್ಲಿ ನಡೆದ ಭೀಕರ ಪ್ರತಿಭಟನೆಯಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಆಗಷ್ಟ್ನಲ್ಲಿ ಬಾಂಗ್ಲಾದೇಶವನ್ನೇ ತೊರೆದು ಭಾರತಕ್ಕೆ ಆಶ್ರಯ ಬೇಡಿ ಬಂದರು. ಅಂದಿನಿಂದ ಇಂದಿನವರೆಗೂ ಹಿಂದೂಳನ್ನು ಗುರಿಯಾಗಿಟ್ಟುಕೊಂಡು ಬಾಂಗ್ಲಾದೇಶದಲ್ಲಿ ದೌರ್ಜನ್ಯಗಳು ನಡೆಯುತ್ತಿವೆ. ಇಲ್ಲಿಯವರೆಗೂ ಒಟ್ಟು 200ಕ್ಕೂ ಹೆಚ್ಚು ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ. ಇದೇ ವಾರದಲ್ಲಿ ಇಸ್ಕಾನ್ ಜೊತೆ ಸಂಪರ್ಕ ಇಟ್ಟುಕೊಂಡವರ ಒಟ್ಟು 17 ಜನರ ಬ್ಯಾಂಕ್ ಅಕೌಂಟ್ಗಳನ್ನು ಫ್ರೀಜ್ ಮಾಡಲಾಗಿದೆ.
ಇದನ್ನೂ ಓದಿ:ISKCON ನಿಷೇಧಕ್ಕೆ ನಿರ್ಧಾರ..! ಬಾಂಗ್ಲಾದೇಶದಲ್ಲಿ ಮುಂದುವರಿದ ದಬ್ಬಾಳಿಕೆ.. ಖಂಡಿಸಿದ ಭಾರತ!
ಇಷ್ಟೆಲ್ಲಾ ಘಟನೆಗಳ ನಡೆಯುತ್ತಿದ್ದರೂ ಕೂಡ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರ ಪ್ರೆಸ್ ಸೆಕ್ರೆಟರಿ ಶಫಿಕುಲ್ ಆಲಮ್ ಮಾತ್ರ ಬಾಂಗ್ಲಾದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿದ್ದಾರೆ. ಈ ಎಲ್ಲಾ ಸುದ್ದಿಗಳು ಭಾರತದ ಮಾಧ್ಯಮಗಳಿಂದ ಸೃಷ್ಟಿಯಾಗುತ್ತಿರುವಂತವು ಎಂದು ಹೇಳುತ್ತಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವ ರೀತಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಅಲ್ಲಿಯದೇ ಸುದ್ದಿ ಮೂಲಗಳು ಬಾಹ್ಯ ಜಗತ್ತಿಗೆ ನೀಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ